newsfirstkannada.com

ADGP ಪರಿಶೀಲನೆ ನಡೆಸಿದ ದಿನವೇ ದರೋಡೆ! ಮೈ-ಬೆಂ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 3 ಲಕ್ಷದ ಚಿನ್ನದ ಸರ ಎಗರಿಸಿದ ಕಳ್ಳರು

Share :

02-07-2023

    ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಮಾಡುವವರೇ ಎಚ್ಚರ

    ADGP ಅಲೋಕ್ ಕುಮಾರ್ ಬಂದು ಹೋದ ದಿನವೇ ನಡೆಯಿತು ದರೋಡೆ

    ಪೊಲೀಸರ ಸೋಗಿನಲ್ಲಿ ಕಾರು ಅಡ್ಡಗಟ್ಟಿ ಚಿನ್ನದ ಸರ ಎಗರಿಸಿದ ಕಿರಾತಕರು

ಮಂಡ್ಯ: ಇತ್ತೀಚೆಗಷ್ಟೆ ಎಡಿಜಿಪಿ ಅಲೋಕ್ ಕುಮಾರ್ ಮೈಸೂರು-ಬೆಂಗಳೂರು ಹೆದ್ದಾರಿ ಪರಿಶೀಲನೆ ಮಾಡಿದ್ದರು. ಹೆದ್ದಾರಿ ನ್ಯೂನತೆ, ಅಪಘಾತ, ಕ್ರೈಂ ಕೇಸ್ ಗೆ ಕಡಿವಾಣಕ್ಕೆ ಕ್ರಮಕ್ಕೆ ಸೂಚಿಸಿದ್ದರು. ಆದರೆ ಎಡಿಜಿಪಿ ಅಲೋಕ್ ಕುಮಾರ್ ಬಂದು ಹೋದ ದಿನವೇ ದರೋಡೆ ನಡೆದಿದೆ. ಪೊಲೀಸರೆಂದು ಹೇಳಿಕೊಂಡು ದರೋಡೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಾರು ಅಡ್ಡಗಟ್ಟಿ ದರೋಡೆ

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಎಚ್ಚರ ವಹಿಸಬೇಕಾದ ಘಟನೆ ಇದು. ಮಂಡ್ಯದ ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಬಳಿಯ ಹೆದ್ದಾರಿಯಲ್ಲಿ ಕಾರು ಅಡ್ಡ ಹಾಕಿ ಮಾರಕಾಸ್ತ್ರ ತೋರಿಸಿ ದರೋಡೆ ನಡೆಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಮೂವರು ದುಷ್ಕರ್ಮಿಗಳು ಮಡಿಕೇರಿ ಮೂಲದ ಯುವಕ ಮುತ್ತಪ್ಪ ಎಂಬುವವರ ಕಾರು ಅಡ್ಡ ಹಾಕಿ ದರೋಡೆ ನಡೆಸಿದ್ದಾರೆ. ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಚಿನ್ನದ ಸರ ಕಿತ್ತುಕೊಂಡಿದ್ದಾರೆ.

ಮಧ್ಯರಾತ್ರಿ 2 ಗಂಟೆಗೆ ದರೋಡೆ

ಬೆಂಗಳೂರಿನಿಂದ ಮಡಿಕೇರಿಗೆ ಇನೋವಾ ಕ್ರಿಸ್ಟಾ ಕಾರಿನಲ್ಲಿ ತೆರಳುತ್ತಿದ್ದ ಮುತ್ತಪ್ಪ ತೆರಳುತ್ತಿದ್ದರು. ಮಧ್ಯರಾತ್ರಿ 2 ಗಂಟೆಯಲ್ಲಿ ಸರ್ವಿಸ್ ರಸ್ತೆಯಲ್ಲಿ ಕಾರನ್ನ ನಿಲ್ಲಿಸಿ ವಿಶ್ರಾಂತಿ ಪಡೆಯುವ ವೇಳೆ ದರೋಡೆಕೋರರು ಮತ್ತಿಗೆ ಹಾಕಿದ್ದಾರೆ. ಕಾರನ್ನು ಅಡ್ಡಗಟ್ಟಿದ ಕಿರಾತಕರು ಸುಮಾರು 3.50 ಲಕ್ಷ ಮೌಲ್ಯದ 65 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಪೊಲೀಸರೆಂದು ಧಮ್ಕಿ

ಮೂವರು ದುಷ್ಕರ್ಮಿಗಳು ನಾವು ಪೊಲೀಸರು ಎಂದು ಧಮ್ಕಿ ಹಾಕಿ ದರೋಡೆ ಮಾಡಿದ್ದಾರೆ. ತಪಾಸಣಾ ನೆಪವೊಡ್ಡಿ ಮಾರಕಾಸ್ತ್ರವನ್ನ ಮುತ್ತಪ್ಪ ಅವರ ಕುತ್ತಿಗೆಗೆ ಇಟ್ಟು ಗಾಯಗೊಳಿಸಿ ದರೋಡೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸರು ಆಗಮಿಸಿ ಮುತ್ತಪ್ಪ ಅವರಿಗೆ ಮದ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.

ದರೋಡೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಮಂಡ್ಯ ಎಸ್ಪಿ ಎನ್.ಯತೀಶ್ ಕೂಡ ಸ್ಥಳಪರಿಶೀಲನೆ ನಡೆಸಿದ್ದರು. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹೆದ್ದಾರಿಯಲ್ಲಿನ ದರೋಡೆ ಪ್ರಕರಣ ಕೇಳಿ ವಾಹನ ಸವಾರರು ಮತ್ತು ಮಂಡ್ಯ ಜನರು ಬೆಚ್ಚಿ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ADGP ಪರಿಶೀಲನೆ ನಡೆಸಿದ ದಿನವೇ ದರೋಡೆ! ಮೈ-ಬೆಂ ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ 3 ಲಕ್ಷದ ಚಿನ್ನದ ಸರ ಎಗರಿಸಿದ ಕಳ್ಳರು

https://newsfirstlive.com/wp-content/uploads/2023/07/Alok-kumar.jpg

Load More