ಫಸ್ಟ್ ಟೈಂ ವಿಮಾನ ಪ್ರಯಾಣ ಮಾಡೋರು ಕನಸು ತುಂಬಾ ದೊಡ್ಡದಾಗಿರುತ್ತೆ
ಆದರೆ ವಿಮಾನ ಪ್ರಯಾಣದಲ್ಲಿ ಯಾವ ಸೀಟ್ ಸುರಕ್ಷಿತ ಗೊತ್ತಾ..?
ಅಚ್ಚರಿಯ ಮಾಹಿತಿ ನೀಡಿರುವ ಯುಎಸ್ ನ್ಯಾಷನಲ್ ಸೇಫ್ಟಿ ಕೌನ್ಸಿಲ್
ನಾನು ವಿದೇಶಕ್ಕೆ ಹೋಗಲೇಬೇಕು, ವಿಮಾನ ಹತ್ತಲೇಬೇಕು ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಕನಸು. ಅದರಲ್ಲೂ ನಾವು ಫಾರೀನ್ಗೆ ಹಾರಬೇಕು ಎಂದರೆ ವಿಮಾನಗಳನ್ನು ಆಶ್ರಯಿಸಲೇಬೇಕು. ಎಷ್ಟು ದುಬಾರಿಯಾದ್ರೂ ಪರ್ವಾಗಿಲ್ಲ ನಾನು ವಿಮಾನದಲ್ಲೇ ಹೋಗುತ್ತೇನೆ ಎನ್ನುವವರೇ ಹೆಚ್ಚು. ಕೇವಲ ಶ್ರೀಮಂತರು ಮಾತ್ರವಲ್ಲ ಬಡ ಮಧ್ಯಮ ವರ್ಗದ ಜನ ಕೂಡ ವಿಮಾನದಲ್ಲಿ ಹಾರಾಡಬೇಕು ಎಂದು ಕನಸು ಕಾಣುತ್ತಾರೆ. ಅದರಲ್ಲೂ ವಿಮಾನದ ಕಿಟಕಿ ಬದಿ ಕೂತು ಆಕಾಶದಲ್ಲಿ ಹಾರಾಡುತ್ತಾ ಪ್ರತಿಕ್ಷಣ ಆನಂದಿಸಬೇಕು, ಎದುರಾಗೋ ಒಂದೊಂದು ರೋಮಾಂಚಕ ದೃಶ್ಯ ಕಣ್ತುಂಬಿಸಿಕೊಳ್ಳಬೇಕು ಎಂಬ ಆಸೆ ಎಲ್ಲರದ್ದು.
ವಿಮಾನದ ಕಿಟಕಿ ಬದಿಯ ಸೀಟಿನಲ್ಲಿ ಕೂತು ಮೋಡದ ದೃಶ್ಯ ನೋಡುವುದು, ಅಲ್ಲೊಂದು ಸೆಲ್ಫಿ ತೆಗೆದು ಪೋಸ್ಟ್ ಮಾಡುವುದು ಯುವಜನರ ಕನಸು. ಇನ್ನು, ವಯಸ್ಸಾದವರಿಗೆ ಮಾತ್ರ ಕೊನೇ ಸೀಟ್ ಬೆಸ್ಟ್, ಏಕೆಂದರೆ ಶೌಚಾಲಯಕ್ಕೆ ಸುಲಭವಾಗಿ ಹೋಗಬಹದು ಎಂದು. ಆದರೆ, ಯಾರಿಗೂ ಮಧ್ಯದ ಸೀಟು ಇಷ್ಟವೇ ಇಲ್ಲ. ಮಧ್ಯದ ಸೀಟಿನಲ್ಲಿ ಕೂತರೆ ಮೋಡ ಕಣ್ತುಂಬಿಸಿಕೊಳ್ಳಲು ಆಗೋದಿಲ್ಲ ಎಂದು ಯಾರು ಆಯ್ಕೆ ಮಾಡಿಕೊಳ್ಳುವುದಿಲ್ಲ. ಆದರೀಗ ವಿಮಾನದ ಹಿಂಭಾಗದಲ್ಲಿರೋ ಮಧ್ಯದ ಸೀಟಿನಲ್ಲಿ ಕೂತು ಪ್ರಯಾಣ ಮಾಡುವುದೇ ಹೆಚ್ಚು ಸುರಕ್ಷಿತ ಎಂದು ಇತ್ತೀಚೆಗೆ ಯುಎಸ್ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಹೇಳಿದೆ.
ಯುಎಸ್ ನ್ಯಾಷನಲ್ ಸೇಫ್ಟಿ ಕೌನ್ಸಿಲ್ ಹೇಳುವುದೇನು..?
ವಿಮಾನಗಳಲ್ಲಿ 3 ರೀತಿಯ ಆಸನಗಳು ಇರುತ್ತವೆ. ಅದರಲ್ಲೂ ಇಷ್ಟೇ ಲಗೇಜ್ ತೆಗೆದುಕೊಂಡು ಹೋಗಬೇಕು, ಒಂದು ಸೀಟಿನಲ್ಲಿ ಒಬ್ಬರೇ ಕೂರಬೇಕು ಎಂಬ ನಿಯಮ ಇದೆ. ಎಲ್ಲರಿಗೂ ಕಿಟಕಿ ಬದಿ ಆಸನದಲ್ಲೇ ಕೂತು ಪ್ರಯಾಣ ಮಾಡುವ ಆಸೆ. ಸಾಮಾನ್ಯವಾಗಿ ಅಪರೂಪಕ್ಕೆ ವಿಮಾನಗಳು ಕೂಡ ಹಠಾತ್ತಾಗಿ ಅಪಘಾತಗಳಿಗೆ ಈಡಾಗುತ್ತವೆ. ಅಪಘಾತಗಳು ಪ್ರಯಾಣಿಕರ ಜೀವಕ್ಕೆ ಹಾನಿ ಮಾಡುತ್ತವೆ. ನೀವು ವಿಮಾನದ ಹಿಂಭಾಗದಲ್ಲಿರುವ ಮಧ್ಯದ ಆಸನದಲ್ಲಿ ಕೂತು ಪ್ರಯಾಣ ಮಾಡಿದ್ರೆ ಬುದುಕಬಹುದು ಎಂದು ತಿಳಿಸಿದೆ. ಅಪಘಾತವಾದಾಗ ಮುಂದಿನ ಸೀಟ್ನಲ್ಲಿರೋ ಜನರಿಗೆ ಬೇಗ ಹಾನಿಯಾದರೆ, ಹಿಂದೆ ಕೂರುವವರಿಗೆ ತಡವಾಗಿ ಹಾನಿಯಾಗುತ್ತದೆ. ಹೀಗಾಗಿ ಹಿಂದಿನ ಮಧ್ಯದ ಸೀಟು ಬೆಸ್ಟ್ ಎಂದಿದೆ ಯುಎಸ್ ನ್ಯಾಷನಲ್ ಸೇಫ್ಟಿ ಕೌನ್ಸಿಲ್.
ಡಾಟಾ ಹೇಳೋದೇನು..?
ಬಸ್ ಮತ್ತು ಕಾರು ಪ್ರಯಾಣಕ್ಕಿಂತ ಏರ್ ಟ್ರಾವೆಲ್ ಎಂದಿಗೂ ಸೇಫ್. ಕಾರು ಅಪಘಾತಕ್ಕೀಡಾದಾಗ 102 ಮಂದಿ ಪೈಕಿ ಒಬ್ಬರು ಅಸುನೀಗಿದರೆ, ಏರ್ ಕ್ರಾಶ್ನಲ್ಲಿ 205,552 ಮಂದಿ ಪೈಕಿ ಒಬ್ಬರು ಸಾವಿಗೀಡಾಗುತ್ತಾರೆ. ವಿಮಾನದ ಮುಂಭಾಗದಲ್ಲಿ ಕುಳಿತು ಪ್ರಯಾಣ ಮಾಡುವುದು ಅತ್ಯಂತ ಸುರಕ್ಷಿತ. ಇದಕ್ಕೆ 1977 ರಲ್ಲಿ ಲಾಸ್ ರೋಡಿಯೋಸ್ ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ನಡೆದ ಘಟನೆಯೇ ಸಾಕ್ಷಿ ಎನ್ನುತ್ತಿದೆ ಡಾಟಾ.
ಸಾಮಾನ್ಯವಾಗಿ ವಿಮಾನದಲ್ಲಿ ಎಲ್ಲಾ ವಯಸ್ಸಿನವರು ಪ್ರಯಾಣ ಮಾಡುತ್ತಾರೆ. ಅದರಲ್ಲೂ ಅನಾರೋಗ್ಯದಿಂದ ಬಳಲುತ್ತಿರುವ ಜನ ಕೂಡ ಇರುತ್ತಾರೆ. ಹೀಗಾಗಿ ನೀವು ಯಾವಾಗಲೂ ಟಿಕೆಟ್ ಬುಕ್ ಮಾಡುವಾಗ ಪಕ್ಕದಲ್ಲಿ ಖಾಲಿ ಸೀಟಿದ್ದರೆ ಒಳ್ಳೆಯದು. ಜಾಸ್ತಿ ಚಳಿ ಇದ್ದಾಗ ವಿಂಡೋ ಸೀಟ್ ಸೂಕ್ತವಲ್ಲ. ವರದಿಗಳ ಪ್ರಕಾರ, ವಿಮಾನದ ಹಿಂಭಾಗದಲ್ಲಿರೋ ಮಧ್ಯದ ಸೀಟ್ ಎಲ್ಲದಕ್ಕೂ ಸೇಫ್ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ