newsfirstkannada.com

VIDEO: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಪೀಸ್, ಪೀಸ್‌.. ಯಾವ ಆ್ಯಕ್ಷನ್ ಸೀನ್‌ಗೂ ಕಮ್ಮಿಯಿಲ್ಲ ಈ ದೃಶ್ಯ

Share :

10-08-2023

    ಇದು ಗ್ರೇಟ್ ಎಸ್ಕೇಪ್ ಅಲ್ಲ ಡಬಲ್ ಗ್ರೇಟ್ ಎಸ್ಕೇಪ್‌!

    ಎಷ್ಟೇ ಪರ್ಫೆಕ್ಟ್​ ಆಗಿ ಗಾಡಿ ಓಡಿಸಿದ್ರು ಅದೃಷ್ಟ ಇರಬೇಕು

    ಜನರನ್ನ ಕೂರಿಸಿಕೊಂಡು ರಸ್ತೆಗೆ ಎಂಟ್ರಿ ಕೊಟ್ಟ ಟ್ರ್ಯಾಕ್ಟರ್

ಅಬ್ಬಾ.. ಇದು ಗ್ರೇಟ್ ಎಸ್ಕೇಪ್ ಅಲ್ಲ ಡಬಲ್ ಗ್ರೇಟ್ ಎಸ್ಕೇಪ್‌.. ಯಾವ ಸಿನಿಮಾದ ಆ್ಯಕ್ಷನ್ ಸೀನ್‌ಗೂ ಈ ಭೀಕರ ಅಪಘಾತದ ದೃಶ್ಯ ನಿಜಕ್ಕೂ ಕಮ್ಮಿಯಿಲ್ಲ. ಈ ಟ್ರ್ಯಾಕ್ಟರ್ ಚಾಲಕನ ನಸೀಬು ಚೆನ್ನಾಗಿತ್ತು ಅಂತಾ ಕಾಣುತ್ತೆ. ಕೂದಲೆಳೆ ಅಂತರದಲ್ಲಿ ಟ್ರ್ಯಾಕ್ಟರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿರೋ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಸ್ತೆಯಲ್ಲಿ ಸಂಚಾರ ಮಾಡೋವಾಗ ನಾವು ಎಷ್ಟೇ ಪರ್ಫೆಕ್ಟ್​ ಆಗಿ ವಾಹನ ಚಲಾಯಿಸಿದ್ರು ಆ್ಯಕ್ಸಿಡೆಂಟ್ ಆಗೋದೇ ಇಲ್ಲ ಅಂತಾ ಹೇಳೋಕೆ ಆಗಲ್ಲ. ಯಾಕಂದ್ರೆ ನಮ್ಮ ಎದುರು ಬರುವ ವಾಹನದ ಚಾಲಕ ಪರ್ಫೆಕ್ಟ್​ ಇಲ್ಲಾ ಅಂದ್ರೆ ಅದು ನಮ್ಮ ಜೀವಕ್ಕೂ ಸಂಚಕಾರ ಬರಬಹುದು. ಯಾರೋ ಮಾಡುವ ತಪ್ಪಿಗೆ ನಾವು ಬೆಲೆ ತೆರಬೇಕಾಗಬಹುದು. ಇಲ್ಲೂ ಕೂಡ ಆಗಿರೋದು ಅದೇ ನೋಡಿ.

ಸೈಡ್ ರೋಡ್‌ನಿಂದ ಜನರನ್ನ ಕೂರಿಸಿಕೊಂಡ ಟ್ರ್ಯಾಕ್ಟರ್‌ ಒಂದು ಮುಖ್ಯರಸ್ತೆಗೆ ಸಾಗುತ್ತಾ ಬಂದಿದೆ. ಟ್ರ್ಯಾಕ್ಟರ್‌ ರಸ್ತೆಗೆ ಎಂಟ್ರಿ ಕೊಡ್ತಿದ್ದಂತೆ ಬಲಭಾಗದಿಂದ ಸ್ಪೀಡಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್​ ಎರಡು ಹೋಳಾಗಿ ಬಿಟ್ಟಿದೆ. ಟ್ರ್ಯಾಕ್ಟರ್​ ಪೀಸ್, ಪೀಸ್ ಆಗುವುದರ ಜೊತೆಗೆ ಚಾಲಕ ಕೂಡ ಕೆಳಕ್ಕೆ ಬೀಳ್ತಾನೆ. ಅದೃಷ್ಟವಶಾತ್​ ಚಾಲಕ ಹಾಗೂ ಟ್ರ್ಯಾಕ್ಟರ್​ನ ಹಿಂಬದಿ ಕೂತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಟ್ರ್ಯಾಕ್ಟರ್ ಪೀಸ್, ಪೀಸ್‌.. ಯಾವ ಆ್ಯಕ್ಷನ್ ಸೀನ್‌ಗೂ ಕಮ್ಮಿಯಿಲ್ಲ ಈ ದೃಶ್ಯ

https://newsfirstlive.com/wp-content/uploads/2023/08/Tractor-Accident.jpg

Load More