newsfirstkannada.com

ಬಿದ್ದು ಸಿಕ್ಕಿದ ಚಿನ್ನವನ್ನು ಹಿಂತಿರುಗಿಸಿ ‘ಬಂಗಾರದ ಮನುಷ್ಯ’ ಎಂದೆನಿಸಿಕೊಂಡ ಸೆಕ್ಯೂರಿಟಿ ಗಾರ್ಡ್​​! ಇವರಿಗೊಂದು ಸಲಾಂ

Share :

Published August 25, 2023 at 5:36pm

Update August 25, 2023 at 7:05pm

    ಸೆಕ್ಯೂರಿಟಿಗಾರ್ಡ್​ನ ಚಿನ್ನದಂತಹ ಮನಸ್ಸಿಗೆ ಎಲ್ಲರೂ ಫಿದಾ

    ಒಡತಿಯ ಒಡಲು ಸೇರಿದ ಕಳೆದ ಹೋದ 5 ಲಕ್ಷ ಮೌಲ್ಯದ ಚಿನ್ನ

    ಪಾರ್ಕಿಂಗ್ ಬಳಿ ಬಿದ್ದಿದ್ದ ಚಿನ್ನವನ್ನು ಹಿಂತಿರುಗಿಸಿದ ಸೆಕ್ಯೂರಿಟಿಗಾರ್ಡ್

ಬೆಂಗಳೂರು: ಸೆಕ್ಯೂರಿಟಿಗಾರ್ಡ್​ವೊಬ್ಬರು ಮಾನವೀಯತೆ ಮೆರೆದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರ ಕಳೆದು ಹೋದ ಚಿನ್ನವನ್ನ ಹಿಂತಿರುಗಿಸಿ ಕೊಡುವ ಮೂಲಕ ಸೆಕ್ಯೂರಿಟಿಗಾರ್ಡ್ ಗಮನಸೆಳೆದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಅಂದರೆ ಆ. 23 ರಂದು ರಾಜಾಜಿನಗರದ ಖಾಸಗಿ ಹೋಟೆಲ್​ನಲ್ಲಿ ಕಾರ್ಯಕ್ರಮವೊಂದು ನಡೆದಿತ್ತು. ಈ ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುವ ವೇಳೆ ಕಸ್ತೂರಿ ಎಂಬ ಹೆಸರಿನ ಮಹಿಳೆಯೊಬ್ಬರು 110 ಗ್ರಾಂ‌ಂ ಬಂಗಾರ ಕಳೆದುಕೊಂಡಿದ್ದರು. ಸುಮಾರು ಐದು ಲಕ್ಷ ಬೆಲೆ ಬಾಳುವ ಚಿನ್ನದ ನೆಕ್ಲೇಸ್ ಇದಾಗಿತ್ತು.

ಆದರೆ ಮಹಿಳೆ ಕಳೆದುಕೊಂಡಿದ್ದ ಚಿನ್ನ ಅಲ್ಲಿದ್ದ ಸೆಕ್ಯೂರಿಟಿಗಾರ್ಡ್​ ಶಂಕರ್ ಎಂಬವರಿಗೆ ಸಿಕ್ಕಿತ್ತು. ಕಾರು ಪಾರ್ಕಿಂಗ್ ಬಳಿ ಬಿದ್ದಿದ್ದ ಬಂಗಾರವನ್ನ ಶಂಕರ್​ ಮ್ಯಾನೇಜ್ ಮೆಂಟ್ ಗೆ ಒಪ್ಪಿಸಿದ್ದಾರೆ.

ಇನ್ನು ಬಂಗಾರ ಮಿಸ್ ಆಗಿರೋದು ಗಮನಕ್ಕೆ ಬರುತ್ತಿದ್ದ ಹಾಗೆ ಕಸ್ತೂರಿ ಮ್ಯಾನೇಜ್ಮೆಂಟ್ ಗೆ ಕಾಲ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಸೆಕ್ಯೂರಿಟಿ ಗಾರ್ಡ್ ಹೊಟೇಲ್ ಮ್ಯಾನೇಜ್ಮೆಂಟ್ ಕೈಗೆ ಚಿನ್ನವನ್ನ ತಲುಪಿಸಿದ್ದಾರೆ. ಬಳಿಕ ಸೆಕ್ಯೂರಿಟಿಗಾರ್ಡ್ ಸಮ್ಮುಖದಲ್ಲಿ ಹೋಟೆಲ್ ಮಾಲೀಕ ಗೋಪಾಲಕೃಷ್ಣ ನೆಕ್ಲೇಸ್ ಹಸ್ತಾಂತರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿದ್ದು ಸಿಕ್ಕಿದ ಚಿನ್ನವನ್ನು ಹಿಂತಿರುಗಿಸಿ ‘ಬಂಗಾರದ ಮನುಷ್ಯ’ ಎಂದೆನಿಸಿಕೊಂಡ ಸೆಕ್ಯೂರಿಟಿ ಗಾರ್ಡ್​​! ಇವರಿಗೊಂದು ಸಲಾಂ

https://newsfirstlive.com/wp-content/uploads/2023/08/Gold-2.jpg

Load More