newsfirstkannada.com

ಚಾಮುಂಡೇಶ್ವರಿ ದರ್ಶನ ಪಡೆಯಲು ಮುಂದಾದ ಖ್ಯಾತ ನಟನನ್ನು ತಡೆದು ನಿಲ್ಲಿಸಿದ ಸಿಬ್ಬಂದಿ! ಯಾಕೆ?

Share :

Published June 30, 2023 at 11:06am

Update June 30, 2023 at 7:02pm

    ಆಷಾಢದ 2ನೇ ಶುಕ್ರವಾರ ದೇವರ ದರ್ಶನಕ್ಕೆ ಮುಂದಾದ ನಟ

    ಚಾಮುಂಡೇಶ್ವರಿ ದರ್ಶನಕ್ಕಾಗಿ ಬೆಟ್ಟ ಏರಿದ ಕನ್ನಡದ ನಟ

    ಬಜಾರ್ ನಟನನ್ನು ತಡೆದು ನಿಲ್ಲಿಸಿದ ಸಿಬ್ಬಂದಿ; ಮುಂದೇನಾಯ್ತು?

ಮೈಸೂರು: ಇಂದು ಆಷಾಢದ 2ನೇ ಶುಕ್ರವಾರ. ನಾಡಿನಾದ್ಯಂತ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಅದಕ್ಕಾಗಿ ಪವಿತ್ರ ಕ್ಷೇತ್ರಗಳತ್ತ ಮುಖ ಮಾಡುತ್ತಿದ್ದಾರೆ. ನಟ-ನಟಿಯರು ಕೂಡ ಪುಣ್ಯ ಕ್ಷೇತ್ರಗಳ ದರ್ಶನ ಮಾಡುತ್ತಿದ್ದಾರೆ. ಅದರಂತೆಯೇ ನಟ ಧನ್ವೀರ್​ ಕೂಡ ಮೈಸೂರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿದ್ದು, ಈ ವೇಳೆ ಅಲ್ಲಿನ ಸಿಬ್ಬಂದಿ ಅವರನ್ನು ತಡೆದು ನಿಲ್ಲಿಸಿದ್ದಾರೆ. ಸರದಿ ಸಾಲಿನಲ್ಲಿ ಬರುವಂತೆ ಹೇಳಿದ್ದಾರೆ.

ಬಜಾರ್​, ಬೈಟು 2 ಲವ್ ಸಿನಿಮಾದ ನಟ ಧನ್ವೀರ್ ಅವರು​ ವಿಶೇಷ ದಿನವಾದ ಇಂದು ಪುಣ್ಯ ಕ್ಷೇತ್ರವಾದ ಚಾಮುಂಡೇಶ್ವರಿಯ ದರ್ಶನ ಮಾಡಲು ಬೆಟ್ಟಕ್ಕೆ ತರಳಿದ್ದರು. ಆದರೆ ಬೆಟ್ಟ ಪೂರ್ತಿ ಭಕ್ತಾದಿಗಳಿಂದ ತುಂಬಿ ತುಳುಕುತ್ತಿದ್ದು, ಜನರು ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ಈ ವೇಳೆ ನಟ ಧನ್ವೀರ್ ಕೂಡ ದೇವರ ದರ್ಶನ ಪಡೆಯಲು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದಿದ್ದರು. ಆದರೆ ಅಲ್ಲಿದ್ದ ಸಿಬ್ಬಂದಿ ನಟ ಧನ್ವೀರ್ ಅವರನ್ನ ಸೈಡ್​ನಲ್ಲಿ ನಿಲ್ಲಿಸಿದ್ದಾರೆ. ಬಳಿಕ ನಟ ಧನ್ವೀರ್​ ಕೆಲ ಹೊತ್ತು ನಿಂತುಕೊಂಡು ಒಳಗೆ ಹೋಗಿದ್ದಾರೆ. ನಂತರ ನಾಡ ಅಧಿದೇವತೆಯ ದರ್ಶನ ಪಡೆದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಚಾಮುಂಡೇಶ್ವರಿ ದರ್ಶನ ಪಡೆಯಲು ಮುಂದಾದ ಖ್ಯಾತ ನಟನನ್ನು ತಡೆದು ನಿಲ್ಲಿಸಿದ ಸಿಬ್ಬಂದಿ! ಯಾಕೆ?

https://newsfirstlive.com/wp-content/uploads/2023/06/Dhanveer.jpg

Load More