newsfirstkannada.com

ಮೋದಿ ಮುಂದೆ ಬಿಜೆಪಿ ನಾಯಕರು ಬ್ಯಾರಿಕೇಡ್​ ಹಿಂದೆ.. ಸ್ಥಿತಿ ನಾಯಿಪಾಡಾಗಿದೆ ಎಂದು ಕಾಲೆಳೆದ ಕಾಂಗ್ರೆಸ್​ ವಕ್ತಾರ

Share :

26-08-2023

    ಬಿಜೆಪಿ ನಾಯಕರಿಗೆ ಮಿನಿಮಮ್​ ಮರ್ಯಾದೆಯೂ ಇಲ್ಲದಾಯಿತೇ?

    ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ

    ಕಮಲ ನಾಯಕರಿಂದ ಅಂತರ ಕಾಯ್ದುಕೊಂಡ ಪ್ರಧಾನಿ ಮೋದಿ

ಇದೊಂದು ದೃಶ್ಯ ಸಾವಿರ ಕಥೆಗಳನ್ನ ಕಟ್ಟಿಕೊಡ್ತಿದೆ. ಹೀಗೆ ರಾಜ್ಯ ಬಿಜೆಪಿ ನಾಯಕರ ಸಾಲುಗಟ್ಟಿ ನಿಂತ ದುಸ್ಥಿತಿಯನ್ನ ಬಣ್ಣಿಸ್ತಿದೆ. ಹೌದು, ಶಶಿ ಶಿಖರದಲ್ಲಿ ಖುಷಿಯ ತೇರೆಳೆದ ಇಸ್ರೋ ವಿಜ್ಞಾನಿಗಳ ಸಾಹಸಕ್ಕೆ ಬೆನ್ನು ತಟ್ಟಲು ಬಂದಿದ್ದ ಪ್ರಧಾನಿ ಮೋದಿ, ರಾಜ್ಯ ನಾಯಕರ ಬೆನ್ನಿಗೆ ಚಪ್ಪರಿಸಿದಂತೆ ಕಾಣಿಸ್ತಿದೆ. ಬ್ಯಾರಿಕೇಡ್​​​ ಗೋಡೆ ಆಚೆ ನಿಂತು ಪ್ರಧಾನಿಯನ್ನ ಸ್ವಾಗತಿಸಿದ ಪರಿಗೆ ಈಗ ಟ್ರೋಲ್​​ ಆಹಾರ ಆಗ್ತಿದ್ದಾರೆ.

ಮೋದಿ ಸ್ವಾಗತ ಫೋಟೋಗೆ ‘ಹಸ್ತಪಡೆ’ ವ್ಯಂಗ್ಯದ ಚಾಟಿ!

ಬಾನಂಗಳದಲ್ಲಿ ಹುಣ್ಣಿಮೆ ಆಚರಿಸಿ ಬೀಗಿದ ಇಸ್ರೋನ ಸಂಭ್ರಮದ ಸಂಕ್ರಾಂತಿಯಲ್ಲಿ ಪ್ರಧಾನಿ ಮೋದಿ ಭಾಗಿ ಆಗಿದ್ರು. ಆದ್ರೆ, ಭೇಟಿಯನ್ನ ಸರ್ಕಾರಿ ಕಾರ್ಯಕ್ರಮವೂ ಆಗಿಸದೇ, ರಾಜಕೀಯವೂ ಮಾಡದೇ ಜ್ಞಾನ ಸಂಪತ್ತಿಗೆ ಸಲಾಂ ಹೇಳಲು ಮಾತ್ರ ಮೀಸಲಿಟ್ರು. ಇಸ್ರೋ ಭೇಟಿ ವೇಳೆ ರಾಜ್ಯ ಬಿಜೆಪಿ ನಾಯಕರಿಂದ ಅಂತರ ಕಾಯ್ದುಕೊಂಡ ಪ್ರಧಾನಿ ಮೋದಿ, ಜಾಣ್ಮೆ ಮೆರೆದ್ರು.

ಗ್ರೀಸ್​ನಿಂದ ಸಿಲಿಕಾನ್​ ಸಿಟಿಯಲ್ಲಿ ಬೆಳಕಿನ ವಾಕ್​​​ ಹೊರಟ ಮೋದಿಗೆ ಭರ್ಜರಿ ಸ್ವಾಗತ ಸಿಕ್ತು. ಆದ್ರೆ, ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರಿಗೆ ಕೈಬೀಸಿದ ನಮೋ, ಬಿಜೆಪಿ ಅತಿರಥರತ್ತ ಕೈಯೂ ಬೀಸಲಿಲ್ಲ. ಕಾರ್​​​​ ಒಳಗಡೆಯಿಂದಲೇ ಕೈ ಮಾಡಿ ತೆರಳಿದ್ರು. ಮೋದಿ ಸಾಗುವಾಗ ಸಾಲಾಗಿ ನಿಂತ ನಾಯಕರಲ್ಲಿ ಮುನಿರತ್ನ ಬ್ಯಾರಿಕೇಡ್ ಮೇಲೆ​​ ಹೆಜ್ಜೆ ಇಟ್ಟು ಕೈಬೀಸಿದ್ದು ಗಮನ ಸೆಳೆಯಿತು. ಕಾಂಗ್ರೆಸ್​​ ಪಾಲಿಗೆ ಇದೇ ದೃಶ್ಯ, ಫೋಟೋಗಳು ಹಬ್ಬದೂಟ ಆಗಿಸಿದೆ..

ರಾಜ್ಯ ಬಿಜೆಪಿ ಸ್ಥಿತಿಗೆ ಕೈ ಗೇಲಿ!

ಕರ್ನಾಟಕ ಬಿಜೆಪಿ ನಾಯಕರದ್ದು ಎಂಥ ದುಸ್ಥಿತಿ. ರಾಜ್ಯ ಬಿಜೆಪಿ ‘ದಂಡ’ನಾಯಕರು ಚಕ್ರವರ್ತಿಗಳು, ಸಾಮ್ರಾಟರೆಲ್ಲಾ ಬೀದಿ ಪಾಲಾಗಿದ್ದಾರೆ. ಬಿಜೆಪಿಯ ಹೈಕಮಾಂಡ್​ ಹಾಗೂ ಮೋದಿ ಹೀನಾಯ ಸೋಲಿನ ಬಳಿಕ ರಾಜ್ಯದ ನಾಯಕರನ್ನ ಹತ್ತಿರಕ್ಕೂ ಸೇರಿಸದೇ ಬೀದಿಪಾಲು ಮಾಡಿದ್ದಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ. ಛೇ, ಮಿನಿಮಮ್​ ಮರ್ಯಾದೆಯೂ ಇಲ್ಲದಾಯಿತೇ?

– ರಾಜ್ಯ ಕಾಂಗ್ರೆಸ್​

ಇನ್ನು, ಕಾಂಗ್ರೆಸ್​​ ವಕ್ತಾರ ರಮೇಶ್​​ ಬಾಬು ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ನಾಯಿಗೆ ಹೋಲಿಸಿ, ಪ್ರಧಾನಿಯನ್ನ ಸರ್ವಾಧಿಕಾರಿ ಅಂತ ಜರಿದಿದ್ದಾರೆ.

ರಾಜ್ಯ ಬಿಜೆಪಿಗರ ನಾಯಿಪಾಡು!

‘ಇಂತಹ ಪರಿಸ್ಥಿತಿ ಸರ್ವಾಧಿಕಾರಿ ಆಡಳಿತದಲ್ಲಿ ಮಾತ್ರ ಕಾಣಲು ಸಾಧ್ಯ. ಪ್ರಧಾನಿ ಮೋದಿ ರಾಜ್ಯ ಭೇಟಿಯ ಸಂದರ್ಭದಲ್ಲಿ ರಾಜ್ಯ ಬಿಜೆಪಿ ನಾಯಕರು ಸ್ಥಿತಿ ನಾಯಿಪಾಡಾಗಿದೆ. ಬಿಜೆಪಿ ಆರ್​ಎಸ್​ಎಸ್​ನಲ್ಲಿ ಸ್ವಾಭಿಮಾನ, ಆತ್ಮಗೌರವ ಸಂಸ್ಕೃತಿ ಕಳೆದು ಹೋಗಿದೆ. ಜೈ ಮೋದಿ’
– ರಮೇಶ್​ ಬಾಬು, ಕೆಪಿಸಿಸಿ ವಕ್ತಾರ

ಇನ್ನು, ಫಸ್ಟ್ ಡೇ ಫಸ್ಟ್ ಶೋ ಎಂಬಂತೆ ಬಿಜೆಪಿಗರ ಸ್ಥಿತಿ ಆಗಿದೆ ಅಂತ ಸಚಿವ ಪ್ರಿಯಾಂಕ್​​ ಖರ್ಗೆ, ಚಾಟಿ ಬೀಸಿದ್ದಾರೆ.

ಕಾಂಗ್ರೆಸ್​​ನ ಈ ಟ್ರೋಲ್​​ ದಾಳಿಗೆ ಬಿಜೆಪಿ ಕೂಡ ಪ್ರತ್ಯುತ್ತರ ನೀಡಿದೆ.. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ ಅಂತ ತಿರುಗೇಟು ನೀಡಿದೆ..

‘ನಿಮ್ಮದು ಗಾಂಧಿ ಕುಟುಂಬದ ಜೀತ’

ಮೋದಿಯವರು ಬೆಂಗಳೂರಿಗೆ ಬಂದಿದ್ದು ಚಂದ್ರಯಾನದ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ. ವಿಜ್ಞಾನಿಗಳನ್ನ ಅಭಿನಂದಿಸುವುದಕ್ಕೇ ಹೊರತು ಪಕ್ಷದ ಸಭೆಗಲ್ಲ. ಆದಾಗ್ಯೂ ನಮ್ಮ ಪ್ರಮುಖರು ಜನಸಾಮಾನ್ಯರಂತೆ ನಿಂತು ಅವರ ಸಂತಸದಲ್ಲಿ ಪಾಲ್ಗೊಂಡು, ಅವರೊಡನೆ ತಮ್ಮ ಅಭಿಮಾನ ಪ್ರದರ್ಶಿಸಿದ್ದಾರೆ. ಇದರಲ್ಲಿ ಹುಳುಕು ಹುಡುಕಲೆತ್ನಿಸಿರುವ ನಿಮಗೆ ಕಾಮಾಲೆಯಂತೆ ಏನೋ ಕಾಯಿಲೆ ಇರಬಹುದು. ಗಾಂಧಿ ಕುಟುಂಬದ ಜೀತಕ್ಕೆ ಬಿದ್ದವರಂತೆ ಸೇವೆ ಮಾಡುವ ಕಾಂಗ್ರೆಸ್ಸಿಗರ ಸ್ಥಿತಿ ಗೊತ್ತಿಲ್ಲವೆ.
– ರಾಜ್ಯ ಬಿಜೆಪಿ

ಒಟ್ಟಾರೆ, ವಿಜ್ಞಾನಿಗಳನ್ನ ಅಭಿನಂದಿಸಲು ಬಂದಿದ್ದ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ಸ್ವಾಗತ ಮಾತ್ರ ಸ್ವಾರಸ್ಯಕರ ರಾಜಕೀಯ ವಾಗ್ಯುದ್ಧಕ್ಕೆ ವೇದಿಕೆ ಆಗಿರೋದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಮುಂದೆ ಬಿಜೆಪಿ ನಾಯಕರು ಬ್ಯಾರಿಕೇಡ್​ ಹಿಂದೆ.. ಸ್ಥಿತಿ ನಾಯಿಪಾಡಾಗಿದೆ ಎಂದು ಕಾಲೆಳೆದ ಕಾಂಗ್ರೆಸ್​ ವಕ್ತಾರ

https://newsfirstlive.com/wp-content/uploads/2023/08/BNG_MODI_BJP_LEADERS.jpg

Load More