newsfirstkannada.com

ಮೀಸಲಾತಿಗಾಗಿ ಹೊಸ ಹೋರಾಟ ಹುಟ್ಟು ಹಾಕಿದ ಮಠಾಧೀಶರು; ಮೂರು ಸಾವಿರ ಮಠದಿಂದ ಸರ್ಕಾರಕ್ಕೆ ಖಡಕ್ ಸಂದೇಶ

Share :

15-06-2023

    ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮತ್ತೆ ಮೀಸಲಾತಿ ಹೋರಾಟ

    ಪಂಚಪೀಠಾಧೀಶರು, ವೀರಶೈವ ಲಿಂಗಾಯತ ಮುಖಂಡರಿಂದ ಹೊಸ ರೂಪ

    ವೀರಶೈವ ಒಳಪಂಗಡದ ಎಲ್ಲಾ ಸಮುದಾಯದ ನಾಯಕರಿಂದ ಹಕ್ಕೊತ್ತಾಯ

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿ ಹೋರಾಟ ಮುನ್ನಲೆಗೆ ಬಂದಿದೆ. ಪಂಚಪೀಠಾಧೀಶರು, ವೀರಶೈವ ಲಿಂಗಾಯತ ಮುಖಂಡರು ಮೀಸಲಾತಿಗಾಗಿ ಹೊಸ ಹೋರಾಟ ಹುಟ್ಟು ಹಾಕಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಮಠಾಧೀಶರ ಬೃಹತ್ ಸಭೆ ನಡೀದಿದೆ.

ಮೂರು ಸಾವಿರ ಮಠದಲ್ಲಿ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಡಿ ಚಿಂತನ ಮಂಥನ ಸಭೆ ನಡೆದಿದೆ. ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಉಜ್ಜಯನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಮೂರುಸಾವಿರ ಮಠದ ಗುರುಸಿದ್ದರಾಜಯೋಗಿಂದ್ರ ಸ್ವಾಮೀಜಿ, ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಮುಂಡರಗಿಯ ಅನ್ನದಾನೇಶ್ವರ ಸ್ವಾಮೀಜಿಗಳ ಸೇರಿದಂತೆ ಅನೇಕ ಸ್ವಾಮೀಜಿಗಳ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ.

ವೀರಶೈವ ಲಿಂಗಾಯತ ಮಠಾಧೀಶರು ಮೀಸಲಾತಿಗಾಗಿ ಹೊಸ ಹೋರಾಟ ಹುಟ್ಟು ಹಾಕಿದ್ದಾರೆ. ಪ್ರಮುಖವಾಗಿ ವೀರಶೈವ ಎಲ್ಲಾ ಪಂಗಡಗಳನ್ನ ಓಬಿಸಿಗೆ ಸೇರಿಸಲು ಹಕ್ಕೋತ್ತಾಯ ಮಾಡಲಾಗಿದೆ. ಈ ಸಭೆಯಲ್ಲಿ ವೀರಶೈವ ಒಳಪಂಗಡದ ಎಲ್ಲಾ ಸಮುದಾಯದ ನಾಯಕರು ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮೀಸಲಾತಿಗಾಗಿ ಹೊಸ ಹೋರಾಟ ಹುಟ್ಟು ಹಾಕಿದ ಮಠಾಧೀಶರು; ಮೂರು ಸಾವಿರ ಮಠದಿಂದ ಸರ್ಕಾರಕ್ಕೆ ಖಡಕ್ ಸಂದೇಶ

https://newsfirstlive.com/wp-content/uploads/2023/06/Veerashaiva-Lingayata.jpg

Load More