newsfirstkannada.com

1951ರಲ್ಲಿ ನಿರ್ಮಾಣವಾದ ದೇವಸ್ಥಾನ 40 ವರ್ಷಗಳ ಬಳಿಕ ಪ್ರತ್ಯಕ್ಷ!  

Share :

29-06-2023

    1951ರಲ್ಲಿ ನಿರ್ಮಾಣವಾದ ದೇವಸ್ಥಾನ ಇದ್ದಕ್ಕಿದ್ದಂತೆ ಪ್ರತ್ಯಕ್ಷ

    40 ವರ್ಷಗಳ ಬಳಿಕ ಹಿನ್ನೀರಿನಲ್ಲಿ ಕಂಡ ವಿಠ್ಠಲ ದೇವಸ್ಥಾನ

    ವಿಠ್ಠಲ ದೇವಸ್ಥಾನ ಎದ್ದು ಬಿದ್ದು ಬರುತ್ತಿರುವ ಭಕ್ತಾದಿಗಳು

ಬೆಳಗಾವಿ: ದೇವಸ್ಥಾನವೊಂದು ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷಗೊಂಡರೆ ಹೇಗಿರುತ್ತೆ?. ಅದು 40 ಬಳಿಕ ಐತಿಹಾಸಿಕ ದೇವಸ್ಥಾನ ಇದ್ದಕ್ಕಿದ್ದಂತೆಯೇ ಪ್ರತ್ಯಕ್ಷಗೊಂಡಿದೆ. ಇದನ್ನು ಕಂಡ ಜನರು ನಾ ಮುಂದು ತಾ ಮುಂದು ಎಂದು ಓಡಿ ಬರುತ್ತಿರುವ ಘಟನೆಗೆ ಬೆಳಗಾವಿ ಸಾಕ್ಷಿಯಾಗಿದೆ.

ಐತಿಹಾಸಿಕ ವಿಠ್ಠಲ ದೇವಸ್ಥಾನ

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನಲ್ಲಿರುವ ಹುನ್ನೂರ ಗ್ರಾಮದ ಜನರಿಗೆ ಅಚ್ಚರಿಯೊಂದು ಕಣ್ಣೆದುರಿಗೆ ಕಂಡಿದೆ. ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ವಿಠ್ಠಲ ದೇವಸ್ಥಾನ 40ವರ್ಷಗಳ ನಂತರ ಪ್ರತ್ಯಕ್ಷವಾಗಿದೆ. ಈ ದೇವಸ್ಥಾನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿತ್ತು. ಆದರೀಗ ಜಲಾಶಯದಲ್ಲಿ ಶೇಖರಣೆಯಾಗಿದ್ದ ನೀರಿನ ಮಟ್ಟ ಕುಸಿತದಿಂದ ಇದ್ದಕ್ಕಿದ್ದಂತೆಯೇ ದೇವಸ್ಥಾನ ಕಂಡಿದೆ.

ದೇವಸ್ಥಾನ ದರ್ಶನ

ಅಂದಹಾಗೆಯೇ ಹಿಡಕಲ್ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ದೇವಸ್ಥಾನ ಮುಳುಗಡೆಯಾಗಿತ್ತು. ಗ್ರಾಮದ ಜೊತೆಗೆ ವಿಠ್ಠಲ ದೇವಸ್ಥಾನವೂ ಮುಳುಗಡೆಯಾಗಿತ್ತು.  ಇದೀಗ ಪ್ರಥಮ ಬಾರಿ ಹಿಡಕಲ್ ಜಲಾಶಯ ಸಂಪೂರ್ಣ ಖಾಲಿಯಾಗಿದ್ದರಿಂದ ದೇವಸ್ಥಾನ ದರ್ಶನವಾಗಿದೆ. ಬೇಸಿಗೆಯಲ್ಲಿ ಜಲಾಶಯದಿಂದ ನೀರು ಕಡಿಮೆಯಾಗಿದ್ದ ದೇವಸ್ಥಾನ ಕಂಡಿದೆ.

1951ರಲ್ಲಿ ನಿರ್ಮಾಣ

ಅಚ್ಚರಿಯ ಸಂಗತಿ ಎಂದರೆ 40ವರ್ಷಗಳಲ್ಲಿ ಪ್ರಥಮ ಬಾರಿ ಇಡೀ ದೇವಸ್ಥಾನ ಜನರಿಗಾಗಿ ತೆರೆದುಕೊಂಡಿದೆ. ಮತ್ತೊಂದು ಸಂಗತಿ ಎಂದರೆ 40ವರ್ಷ ನೀರಿನಲ್ಲಿದ್ದರೂ ದೇವಸ್ಥಾನ, ದೇವರ ಮೂರ್ತಿಗೆ ಯಾವುದೇ ಹಾನಿಯಾಗಿಲ್ಲ. ಈ ದೇವಸ್ಥಾನವನ್ನು 1951ರಲ್ಲಿ ನಿರ್ಮಾಣ ಮಾಡಲಾಗಿತ್ತು. ಇಡೀ ಕಲ್ಲಿನಲ್ಲಿ ನಿರ್ಮಾಣ ಮಾಡಲಾಗಿತ್ತು. ಆದರೀಗ 40 ವರ್ಷಗಳಿಕ ದೇವಸ್ಥಾನ ಕಂಡಿದೆ.

ದೇವಸ್ಥಾನ ವೀಕ್ಷಣೆಗೆ ಭಕ್ತರ ದಂಡು ಹರಿದು ಬರುತ್ತಿದೆ. ನಿತ್ಯವೂ‌‌ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸಿ ದೇವಸ್ಥಾನ ವೀಕ್ಷಣೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

1951ರಲ್ಲಿ ನಿರ್ಮಾಣವಾದ ದೇವಸ್ಥಾನ 40 ವರ್ಷಗಳ ಬಳಿಕ ಪ್ರತ್ಯಕ್ಷ!  

https://newsfirstlive.com/wp-content/uploads/2023/06/Belagavi.jpg

Load More