ಐವರಲ್ಲ ಏಳು ಜನ ಶಂಕಿತ ಉಗ್ರರಿಂದ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್
ಬೆಂಗಳೂರಲ್ಲೇ ಕುಳಿತು ಬ್ಲಾಸ್ಟ್ ಮಾಡಲು ಸಂಚು ರೂಪಿಸಿದ್ದರು
ಬಂಧಿತರಿಂದ 36 HE ಮಾದರಿ ಗ್ರೆನೇಡ್ ವಶಪಡಿಸಿಕೊಂಡ ಸಿಸಿಬಿ
ಬೆಂಗಳೂರು ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಆ ಮೂಲಕ ಶಂಕಿತ ಉಗ್ರರು ಸಾರ್ವಜನಿಕ ಸ್ಥಳದಲ್ಲಿ ಹೂಡಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಜೊತೆಗೆ ಬಂಧಿತರಲ್ಲಿ ಓರ್ವ ಸೂಸೈಡ್ ಬಾಂಬರ್ ಇದ್ದು, 36 HE ಮಾದರಿ ಗ್ರೆನೇಡ್ ಅನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಉಗ್ರರಾದ ಟಿ ನಜೀರ್, ಜುನೈದ್, ಸುಹೇಲ್, ಉಮರ್, ಜಾಹಿದ್, ಮುದಾಸಿರ್, ಫೈಜಲ್ ಸಂಚು ರೂಪಿಸಿದ್ದರು. ಶಂಕಿತ ಉಗ್ರರ ಹಸಿ ವಾಸನೆಯನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಇದರಲ್ಲಿ ಭಾಗಿಯಾಗಿರುವ ಪ್ರಮುಖ ಆರೋಪಿ ಟಿ ನಜೀರ್ ಜೈಲಿನಲ್ಲಿ ಇದ್ದರೆ, ಜುನೈದ್ ಪರಾರಿಯಾಗಿದ್ದಾನೆ. ಉಳಿದ ಐವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಿಸಿಬಿ ತನಿಖೆಯ ವೇಳೆ ಶಂಕಿತ ಉಗ್ರರು ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ವೆಸಗಲು ಪ್ಲಾನ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಿಎಂಟಿಸಿ ನಿಲ್ದಾಣ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಬ್ಲಾಸ್ಟ್ ಮಾಡಲು ಶಂಕಿತ ಉಗ್ರರು ಪ್ಲಾನ್ ಮಾಡಿರುವ ಬಗ್ಗೆ ತನಿಖೆ ವೇಳೆ ತಿಳಿದುಬಂದಿದೆ.
ಇನ್ನು ಪರಾರಿಯಾಗಿರುವ ಜುನೈದ್ ಅಹಮ್ಮದ್ ವಿರುದ್ಧ ಒಟ್ಟು ನಾಲ್ಕು ಪ್ರಕರಣಗಳಿದ್ದು, ಕೊಲೆ, ರೆಡ್ ಸ್ಯಾಂಡಲ್ ಸಾಗಾಟ ಸೇರಿದಂತೆ 2 ದರೋಡೆ ಯತ್ನ ಪ್ರಕರಣಗಳು ಜುನೈದ್ ಮೇಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ