newsfirstkannada.com

PSI ಸರ್ವಿಸ್​​ ರಿವಾಲ್ವರ್​ ಕಸಿದು ಪರಾರಿಯಾದ ಕಳ್ಳ! ಖದೀಮನಿಗೆ ಪೊಲೀಸರ ಹುಡುಕಾಟ

Share :

17-07-2023

    ಕುಖ್ಯಾತ ಕಳ್ಳನ ಕೈ ಚಳಕ​.. PSI ಸರ್ವಿಸ್ ರಿವಾಲ್ವರ್ ಕದ್ದು ಪರಾರಿ

    ಪೊಲೀಸರ ಕಣ್ಣುತಪ್ಪಿಸಿದ ಕುಖ್ಯಾತ ಖಾಜಪ್ಪ.. ಕಳ್ಳನಿಗಾಗಿ ಪೊಲೀಸರ ಶೋಧ

    ಬಂಧಿಸುವ ವೇಳೆ ಪೊಲೀಸರಿಗೆ ಉಂಡೇ ನಾಮ.. ಗನ್​ ಹಿಡಿದು ಎಸ್ಕೇಪ್​ ಆದ ಕಳ್ಳ

ಕಲಬುರಗಿ: ಕುಖ್ಯಾತ ಕಳ್ಳನೊಬ್ಬ ಪೊಲೀಸ್​ ಸಬ್​ ಇನ್ಸ್​​ಸ್ಪೆಕ್ಟರ್​ನ ​ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ಖಾಜಪ್ಪ ಎಂಬ ಕಳ್ಳ ಅಫಜಲಪುರದ PSI ಭೀಮರಾಯ್ ಬಂಕಲಿ ಅವರ ಸರ್ವಿಸ್ ರಿವಾಲ್ವರ್ ಕಸಿದು ಕಾಲ್ಕಿತ್ತಿದ್ದಾನೆ.

ಖಾಜಪ್ಪನನ್ನ ಬಂಧಿಸಲು ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಅಫಜಲಪುರಕ್ಕೆ ಆಗಮಿಸಿದ್ದರು. ಆದರೆ ಆತನನ್ನು ಬಂಧಿಸುವ ವೇಳೆ ಅಫಜಲಪುರ ಪಿಎಸ್‌ಐ ಭೀಮರಾಯ್ ಸರ್ವಿಸ್ ರಿವಾಲ್ವರ್ ಕಸಿದು ಎಸ್ಕೇಪ್ ಆಗಿದ್ದಾನೆ.

ಖಾಜಪ್ಪ ಬಳ್ಳೂರ್ಗಿ ಮೂಲದವನಾಗಿದ್ದು, ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20 ಕ್ಕೂ ಅಧಿಕ ಕಳ್ಳತನ ಪ್ರಕರಣ ಈತನ ಮೇಲಿತ್ತು. ಈತನನ್ನ ಹಿಡಿಯಲೆಂದು ಪೊಲೀಸರು ಪ್ಲಾನ್​ ಕೂಡ ಹೆಣೆದಿದ್ದರು. ಆದರೆ ಖಾಜಪ್ಪ ಬಂಧನದ ವೇಳೆ ಸರ್ವಿಸ್ ರಿವಾಲ್ವರ್ ಕಸಿದು ಜೂಟ್​ ಆಗಿದ್ದಾನೆ.

ಇನ್ನು ಅಫಜಲಪುರ ಠಾಣೆಗೆ ಕಲಬುರಗಿ ‌ಎಸ್ಪಿ ಇಶಾ ಪಂತ್ ಭೇಟಿ ನೀಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PSI ಸರ್ವಿಸ್​​ ರಿವಾಲ್ವರ್​ ಕಸಿದು ಪರಾರಿಯಾದ ಕಳ್ಳ! ಖದೀಮನಿಗೆ ಪೊಲೀಸರ ಹುಡುಕಾಟ

https://newsfirstlive.com/wp-content/uploads/2023/07/PSI.jpg

Load More