newsfirstkannada.com

ಮಧ್ಯರಾತ್ರಿ ATM ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರೇ ಬೆಚ್ಚಿ ಬಿದ್ರು.. ಏನಾಯ್ತು ಗೊತ್ತಾ?

Share :

19-08-2023

    ಮಧ್ಯರಾತ್ರಿ 2 ಗಂಟೆಗೆ ATM ದರೋಡೆಗೆ ಪ್ಲಾನ್ ಮಾಡಿದ ಕಳ್ಳರು

    ಬ್ಯಾಗ್‌ ತುಂಬಾ ಹಣ ಸಿಕ್ತು ಅಂತಾ ಖುಷಿಪಡುವಷ್ಟರಲ್ಲೇ ಶಾಕ್‌

    ATM ದರೋಡೆ ಮಾಡಿದ ಮೇಲೆ ಕಳ್ಳರಿಗೆ ಕೈ ಕೊಟ್ಟ ನಸೀಬು!

ಮುಂಬೈ: ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದ್ರೆ ಅದೃಷ್ಟ ಚೆನ್ನಾಗಿರಬೇಕು. ನಸೀಬು ಕೈ ಕೊಟ್ರೆ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದ್ರೂ ಲಾಭ ಸಿಗೋದಿಲ್ಲ ಅನ್ನೋ ಮಾತಿದೆ. ಈ ಖದೀಮರ ಪ್ರಕರಣದಲ್ಲೂ ಆಗಿರೋದು ಅದೇ ನೋಡಿ. ಈ ಕಳ್ಳರಿಗೆ ಅಯ್ಯೋ ಪಾಪ ಅನ್ನೋದೋ ಬೇಡ್ವೋ ಗೊತ್ತಿಲ್ಲ. ಆದ್ರೆ, ಆಗಿರೋದು ಏನು ಅಂತಾ ಗೊತ್ತಾದ್ರೆ ಹೋಗ್ಲಿ ಬಿಡಿ ಪಾಪ ಅನ್ನೋಣ ಅನ್ಸುತ್ತೆ. ಅಸಲಿಗೆ ಈ ಕಳ್ಳರಿಗೆ ಆಗಿದ್ದೇನು ಅನ್ನೋದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಇಷ್ಟು ದಿನ ನಾವು ಎಟಿಎಂ ದರೋಡೆ ಪ್ರಕರಣಗಳನ್ನ ವರದಿ ಮಾಡುವಾಗ 5 ಲಕ್ಷ, 10 ಲಕ್ಷ, 50 ಲಕ್ಷ ರೂಪಾಯಿ ಕಳುವಾಗಿದೆ. ದರೋಡೆಕೋರರು ಎಟಿಎಂ ಮೆಷಿನ್ ಅನ್ನೇ ಕದ್ದುಕೊಂಡು ಹೋಗಿದ್ದಾರೆ ಅಂತೆಲ್ಲಾ ವರದಿ ಆಗೋದನ್ನ ನೋಡಿದ್ದೇವೆ. ಆದರೆ ಇದು ತುಂಬಾ ಅಪರೂಪದ ಪ್ರಕರಣವಾಗಿದೆ.

‘ದುಡ್ಡೇ ಇಲ್ಲದ ಎಟಿಎಂ ದೋಚಿದ ಕಳ್ಳರು’

ಮಧ್ಯರಾತ್ರಿ ಕಷ್ಟ ಪಟ್ಟು ATM ದರೋಡೆ ಮಾಡಲು ಯತ್ನಿಸಿದ ಕಳ್ಳರೇ ಬೆಚ್ಚಿ ಬಿದ್ದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಬ್ಬರು ಖದೀಮರು ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದರೋಡೆಗೆ ಪ್ಲಾನ್ ಮಾಡುತ್ತಾರೆ. ಕಷ್ಟಪಟ್ಟು ಎಂಟಿಎಂ ಬಾಗಿಲು ಮುರಿದು ಒಳಗೆ ಎಂಟ್ರಿ ಕೊಡ್ತಾರೆ. ಎಟಿಎಂ ನೋಡಿ ಅಬ್ಬಾ. ನಮ್ಮ ಬ್ಯಾಗ್‌ ತುಂಬಾ ಹಣ ಸಿಕ್ತು ಅಂತಾ ಖುಷಿ ಪಟ್ಟಿದ್ದಾರೆ. ಹೀಗೆ ಖುಷಿಪಡುವಷ್ಟರಲ್ಲೇ ಕಳ್ಳರಿಗೆ ಬಹಳ ದೊಡ್ಡ ನಿರಾಸೆಯಾಗಿದೆ.

ಕಳ್ಳರು ದರೋಡೆ ಮಾಡಲು ಯತ್ನಿಸಿದ ಎಟಿಎಂನಲ್ಲಿ ದುಡ್ಡೇ ಖಾಲಿಯಾಗಿದೆ. ದುಡ್ಡೇ ಇಲ್ಲದ ಎಟಿಎಂ ದರೋಡೆ ಮಾಡಲು ಯತ್ನಿಸಿದ ಕಳ್ಳರು ಬರೀ ಕೈಯಲ್ಲಿ ವಾಪಸ್ ಆಗಿದ್ದಾರೆ. ಖದೀಮರು ಕಷ್ಟ ಪಟ್ಟು ಕಳ್ಳತನ ಮಾಡಲು ಯತ್ನಿಸಿ ನಿರಾಸೆ ಅನುಭವಿಸಿದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಟಿಎಂ ಮೆಷಿನ್ ಒಡೆದು ಹಾಕಿರೋ ಕಳ್ಳರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ. ಮಹಾರಾಷ್ಟ್ರದ ಪ್ಲಗರ್ ಬಳಿಯ ಬ್ಯಾಂಕ್ ಆಫ್ ಬರೋಡಾ ಮಸ್ವಾನ್ ಶಾಖೆಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಧ್ಯರಾತ್ರಿ ATM ಬಾಗಿಲು ಮುರಿದು ಒಳಗೆ ನುಗ್ಗಿದ ಕಳ್ಳರೇ ಬೆಚ್ಚಿ ಬಿದ್ರು.. ಏನಾಯ್ತು ಗೊತ್ತಾ?

https://newsfirstlive.com/wp-content/uploads/2023/08/Maharashtra-ATM.jpg

Load More