newsfirstkannada.com

WATCH: ನಡುರೋಡಲ್ಲಿ ಹುಡುಗಿಗೆ ಅಟ್ಟಾಡಿಸಿ ಹೊಡೆದ ಪುಂಡರು; ಮೂಕ ಪ್ರೇಕ್ಷಕರಾದ ಸಾರ್ವಜನಿಕರು

Share :

16-08-2023

    ಅಮ್ಮ, ಮಗಳ ಮೇಲೆ ದ್ವೇಷ ತೀರಿಸಿಕೊಂಡು ಯುವಕರ ಗುಂಪು

    ಏಟು ತಿಂದು ಒದ್ದಾಡುತ್ತಿದ್ದರೂ ಸುಮ್ಮನೆ ನಿಂತಿದ್ದ ಸಾರ್ವಜನಿಕರು

    ಮಹಿಳೆಯರು ಅಂತಾನೂ ನೋಡದೇ ಅಟ್ಟಹಾಸ ಮೆರೆದ ಪುಂಡರು

ಸೂರತ್‌: ಇತ್ತೀಚೆಗೆ ಹಾಡಹಗಲೇ ಕೊಲೆ, ಸುಲಿಗೆ, ದರೋಡೆಯಂಥ ಪ್ರಕರಣಗಳು ಹೆಚ್ಚಾಗುತ್ತಿವೆ. ದುಷ್ಕರ್ಮಿಗಳ ಅಟ್ಟಹಾಸ ಮಿತಿಮೀರಿ ಹೋಗಿದೆ. ದೇಶದ ಪ್ರಮುಖ ನಗರಗಳಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗಿದ್ದು, ಕ್ರೌರ್ಯತೆಯ ದೃಶ್ಯಗಳು ಬೆಚ್ಚಿ ಬೀಳಿಸುತ್ತಿವೆ. ಈ ಘಟನೆಯೂ ಇದೇ ಸಾಲಿಗೆ ಸೇರಿದ್ದು, ನಡುರೋಡಲ್ಲಿ ಯುವಕರ ಗುಂಪು ಮಹಿಳೆಯರ ಮೇಲೆ ಮಾರಕಾಸ್ತ್ರಗಳಿಂದ ಮನಸೋ ಇಚ್ಛೆ ಹಲ್ಲೆ ಮಾಡಿದೆ. ಕಿಡಿಗೇಡಿಗಳು ಹಲ್ಲೆ ಮಾಡುವಾಗ ನೆರೆದಿದ್ದ ಜನರು ಮೂಕ ಪ್ರೇಕ್ಷಕರಾಗಿದ್ದಾರೆ.

ಇದು ನಿಜಕ್ಕೂ ಅಮಾನವೀಯ ಘಟನೆ. ಮಹಿಳೆಯರು ಅಂತಾನೂ ನೋಡದೇ ಯುವಕರ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ಒಬ್ಬನಂತೂ ಕೈಯಲ್ಲಿದ್ದ ರಾಡ್‌ನಲ್ಲಿ ಆ ಕಡೆ ಈ ಕಡೆ ಬಾರಿಸುತ್ತಾ ಇಬ್ಬರು ಮಹಿಳೆಯರಿಗೆ ಹಿಗ್ಗಾಮುಗ್ಗ ಬಾರಿಸಿದ್ದಾನೆ. ಒದೆ ತಿಂದ ರಭಸಕ್ಕೆ ಮಹಿಳೆಯರು ನೆಲಕ್ಕೆ ಬಿದ್ದಿದ್ದಾರೆ.

ಸೂರತ್ ಜಿಲ್ಲೆಯ ಪಂಡೆಸಾರಾದಲ್ಲಿ ನಡೆದ ಅಮಾನವೀಯ ಘಟನೆ

ಅಂದ ಹಾಗೆ ಈ ಘಟನೆ ನಡೆದಿರೋದು ಗುಜರಾತ್​ನ​ ಸೂರತ್ ಜಿಲ್ಲೆಯ ಪಂಡೆಸಾರಾದಲ್ಲಿ. ಯುವಕರ ಗುಂಪು ಮಹಿಳೆಯರಿಗೆ ಮನಬಂದಂತೆ ಥಳಿಸ್ತಿದ್ರೆ, ಅಲ್ಲಿದ್ದವರೆಲ್ಲಾ ಮೂಕ ಪ್ರೇಕ್ಷಕರಾಗಿದ್ರು. ಯಾರೊಬ್ಬರು ಅದನ್ನ ತಡೆಯದೇ ಸುತ್ತ ನಿಂತು ಸುಮ್ಮನೆ ನೋಡುತ್ತಾ ನಿಂತಿದ್ದಾರೆ. ಯುವಕರು ಗುಂಪು ಅಮಾನವೀಯವಾಗಿ ಹಲ್ಲೆ ಮಾಡಿರೋ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೂರತ್ ಜಿಲ್ಲೆಯ ಪಂಡೆಸಾರಾದಲ್ಲಿ ಈ ಹಿಂದೆ ಒಂದು ಕೊಲೆ ನಡೆದಿತ್ತು. ಹಳೇ ಕೊಲೆ ಪ್ರಕರಣ ಸಂಬಂಧ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಯುವಕರ ಗುಂಪು ಕೊಲೆಯಾದ ಕುಟುಂಬದ ಮಹಿಳೆಯರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಹಲ್ಲೆಯಿಂದಾಗಿ ತಾಯಿ, ಮಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಂಡೆಸಾರಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ನಡುರೋಡಲ್ಲಿ ಹುಡುಗಿಗೆ ಅಟ್ಟಾಡಿಸಿ ಹೊಡೆದ ಪುಂಡರು; ಮೂಕ ಪ್ರೇಕ್ಷಕರಾದ ಸಾರ್ವಜನಿಕರು

https://newsfirstlive.com/wp-content/uploads/2023/08/Gujarath-Lady-Attack.jpg

Load More