newsfirstkannada.com

ಎಣ್ಣೆ ಕೊಡೊ.. ಸಾಲ ಕೊಡಲ್ಲ ಎಂದಿದ್ದಕ್ಕೆ ಕ್ಯಾಶಿಯರ್​ಗೆ ಚೂರಿಯಿಂದ ಇರಿದ ಪುಂಡರು 

Share :

01-09-2023

  ಮದ್ಯ ಸಾಲ ಕೊಟ್ಟಿಲ್ಲ ಎಂದಿದ್ದಕ್ಕೆ ಕ್ಯಾಶಿಯರ್​ ಚುಚ್ಚಿದ ಗ್ಯಾಂಗ್​

  ಯಡಿಯೂರು ಬಳಿಯ ಎಂಬಿಆರ್ ಬಾರ್ ನಲ್ಲಿ ನಡೆದ ಘಟನೆ

  ಆರೋಪಿಗಳ ಪತ್ತೆಗೆ ಬಲೆ ಬೀಸಿದ ಬನಶಂಕರಿ ಠಾಣೆ ಪೊಲೀಸರು

ಎಣ್ಣೆ ಸಾಲ ಕೊಡಲಿಲ್ಲ ಎಂದು ಬಾರ್ ಕ್ಯಾಶಿಯರ್​​​ಗೆ ಚಾಕುವಿನಿಂದ ಇರಿದ ಘಟನೆ ಯಡಿಯೂರು ಬಳಿಯ ಎಂಬಿಆರ್ ಬಾರ್ ನಲ್ಲಿ ನಡೆದಿದೆ.

ಆಗಸ್ಟ್ 28ರ ರಾತ್ರಿ 1.40 ಸುಮಾರಿಗೆ ನಡೆದ ಘಟನೆ ಇದಾಗಿದ್ದು, ಪುನೀತ್ ಮತ್ತು ಸಹಚರರು ಕ್ಯಾಶಿಯರ್ ಸ್ವಾಗತ್ ಗೌಡ ಎಂಬಾತನಿಗೆ ಚಾಕುವಿನಿಂದ ಇರಿದಿದ್ದಾರೆ.

ಕ್ಯಾಶಿಯರ್ ಸ್ವಾಗತ್ ಗೌಡ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.

ಇನ್ನು ಈ ಘಟನೆ ಸಂಬಂಧಿಸಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ಕೊಡೊ.. ಸಾಲ ಕೊಡಲ್ಲ ಎಂದಿದ್ದಕ್ಕೆ ಕ್ಯಾಶಿಯರ್​ಗೆ ಚೂರಿಯಿಂದ ಇರಿದ ಪುಂಡರು 

https://newsfirstlive.com/wp-content/uploads/2023/09/Yadiyoor.jpg

Load More