ಬೆಳ್ಳಂಬೆಳಗ್ಗೆ ಹರಿದ ನೆತ್ತರು! ಮಚ್ಚಿನಿಂದ ಕೊಚ್ಚಿ ಉದ್ಯಮಿ ಹ*ತ್ಯೆ
ವರ್ಷಕ್ಕೆ 2 ಬಾರಿ ಉದ್ಯಮಿ ತನ್ನ ಹುಟ್ಟೂರು ಕಾರವಾರಕ್ಕೆ ಬರ್ತಿದ್ರು
ನೋಡ ನೋಡ್ತಿದ್ದಂತೆ ಮನೆಯೊಳಗೆ ನುಗ್ಗಿ ಸೆಕೆಂಡ್ನಲ್ಲೇ ಜೀವ ತೆಗೆದ್ರು!
ಕಾರವಾರ: ಇದು ಕ್ರೌರ್ಯಕ್ಕೂ ಮಿಗಿಲಾದ ಮಹಾ ಕ್ರೌರ್ಯ. ನೋಡಿದವರ ಎದೆ ಜಲ್ ಅನ್ನೋವಂತ ಪಾತಕ. ದೇಹ ಕತ್ತರಿಸಿ ಹೋಗಿದೆ. ಮನೆಯ ತುಂಬಾ ಕೆಂಪು ನೆತ್ತರು ನದಿಯಂತೆ ಹರಿದಿದೆ. ಬೆಳ್ಳನೆಯ ಟೈಲ್ಸ್ಗೆ ಮೆತ್ತಿರುವ ಕಡು ಕೆಂಪು ರಕ್ತದ ಮೆಹಂದಿ ನಡೆದ ಭೀಕರತೆಗೆ ಸಾಕ್ಷಿ ಹೇಳ್ತಿದೆ.
ಬೆಳ್ಳಂಬೆಳಗ್ಗೆ ಹರಿದ ನೆತ್ತರು! ಮಚ್ಚಿನಿಂದ ಕೊಚ್ಚಿ ಉದ್ಯಮಿ ಹ*ತ್ಯೆ!
ಮನೆಯ ಹಾಲ್ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿರುವ ವ್ಯಕ್ತಿ ಹೆಸರು ವಿನಾಯಕ. ಇವರು ಮೂಲತಃ ಕಾರವಾರದ ಹಣಕಣೋಣದ ನಿವಾಸಿ. ದೂರದ ಪುಣೆಯಲ್ಲಿ ವಿನಾಯಕ ಇಂಪೋರ್ಟ್ ಎಕ್ಸ್ಪೋರ್ಟ್ ಬ್ಯುಸಿನೆಸ್ ಮಾಡ್ಕೊಂಡಿದ್ದರು. ಬ್ಯುಸಿನೆಸ್ ಮಾಡ್ಕೊಂಡು ಪುಣೆಯಲ್ಲೆ ನೆಲೆ ಕಂಡುಕೊಂಡಿದ್ರು.
ಇದನ್ನೂ ಓದಿ: ಹೊಸ ಬೈಕ್ ಶೋಕಿ.. ತಂದೆ-ತಾಯಿ ಬುದ್ಧಿ ಮಾತಿಗೆ ಮನನೊಂದ ಮಗ ಸಾವಿಗೆ ಶರಣು; ಆಗಿದ್ದೇನು?
ವರ್ಷಕ್ಕೆ ಎರಡು ಬಾರಿ ಹ*ತ್ಯೆಯಾಗಿರುವ ವಿನಾಯಕ ಹುಟ್ಟೂರು ಕಾರವಾರಕ್ಕೆ ಬರ್ತಿದ್ರು.. ಈ ಬಾರಿ ಊರ ಜಾತ್ರೆ ಅಂತ ಪುಣೆಯಿಂದ ವಿನಾಯಕ ಹುಟ್ಟೂರಿಗೆ ಬಂದಿದ್ರು. ಆದ್ರೆ ಈ ಬಾರಿಯ ಊರ ಜಾತ್ರೆ ವಿನಾಯಕನ ಪಾಲಿಗೆ ಶುಭವಾಗಿರಲಿಲ್ಲ. ಯಾಕಂದ್ರೆ ಜಾತ್ರೆಗೆ ಅಂತ ಬಂದ ಉದ್ಯಮಿ ಹುಟ್ಟಿದ ಮನೆಯಲ್ಲೇ ರಣ ಭೀಕರವಾಗಿ ಕೊ*ಲೆಯಾಗಿ ಹೋಗಿದ್ದಾರೆ.
ವಿನಾಯಕ ಜಾತ್ರೆಗೆ ಅಂತ ಊರಿಗೆ ಬಂದಿದ್ರು. ಇನ್ನೇನು ಊರ ಹಬ್ಬ ಮುಗಿದಿತ್ತು. ಭಾನುವಾರ ಬೆಳಗ್ಗೆ ಐದು ಗಂಟೆಗೆ ವಿನಾಯಕ ವಾಪಸ್ ಪುಣೆಗೆ ಹೋಗಬೇಕಿತ್ತು. ಹೀಗಾಗಿ ರಾತ್ರಿಯೇ ಬ್ಯಾಗ್ ಎಲ್ಲಾ ಪ್ಯಾಕ್ ಮಾಡ್ಕೊಂಡು ರೆಡಿಯಾಗಿದ್ದರು. ಆದ್ರೆ ಮುಂಜಾನೆ ಸೂರ್ಯ ಮೂಡುವ ಮೊದಲೇ ತನ್ನ ಕೊ*ಲೆಯಾಗುತ್ತೆ ಅನ್ನೋ ಸಣ್ಣ ಸುಳಿವು ಕೂಡ ವಿನಾಯಕನಿಗೆ ಸಿಕ್ಕಿರಲಿಲ್ಲ.
ನಸುಕಿನ ಜಾವ 5.30 ರ ಸಮಯ ವಿನಾಯಕ್ ಲಗೇಜ್ಗಳನ್ನ ಮನೆಯ ಹೊರಗಡೆ ಇಡ್ಬೇಕು ಅಂತ ಬಾಗಿಲು ತೆರೆದಿದ್ರು. ಆದ್ರೆ ಮನೆಯ ಹೊಸ್ತಿಲಲ್ಲೇ ರಕ್ತ ಪಿಪಾಸುಗಳು ಮಚ್ಚು ಲಾಂಗ್ ಹಿಡ್ಕೊಂಡು ನಿಂತಿದ್ರು. ಉಸಿರು ಎಳೆದುಕೊಳ್ಳೋದಕ್ಕೂ ಸಮಯ ನೀಡದೇ ಹಂತಕರು ಮನೆಯೊಳಗೆ ನುಗ್ಗಿಯೇ ಬಿಟ್ಟಿದ್ದಾರೆ.
ಮನೆ ಹೊಸ್ತಿಲಲ್ಲೇ ನಿಂತಿದ್ದ ಹಂತಕರು! ಸೆಕೆಂಡ್ನಲ್ಲೇ ಜೀವ ತೆಗೆದ್ರು!
ವಿನಾಯಕ ಮನೆಯಲ್ಲಿದ್ದ ಲಗೇಜ್ಗಳನ್ನ ಹೊರಗೆ ಕಾರ್ನಲ್ಲಿಡಬೇಕು ಅಂತ ಡೋರ್ ಓಪನ್ ಮಾಡಿದ್ರು. ಆದ್ರೆ ಬಾಗಿಲಿನ ಹೊಸ್ತಿಲಲ್ಲೇ ಹಂತಕರು ಮಾರಾಕಾಸ್ತ್ರಗಳನ್ನ ಹಿಡಿದು ನಿಂತಿದ್ರು. ನೋಡ ನೋಡ್ತಿದ್ದಂತೆ ಮನೆಯೊಳಗೆ ನುಗ್ಗಿದ ರಕ್ಕಸರು ವಿನಾಯಕ ಮೇಲೆ ಅಟ್ಯಾಕ್ ಮಾಡಿಬಿಟ್ಟಿದ್ರು. ರಾಡ್ನಿಂದ ತಲೆಗೆ ಹೊಡೆದುಬಿಟ್ಟಿದ್ರು. ಪೆಟ್ಟು ತಿಂದು ನೆಲದ ಮೇಲೆ ಬೀಳ್ತಿದ್ದಂತೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ. ದುಷ್ಕರ್ಮಿಗಳ ಮಚ್ಚಿನೇಟಿಗೆ ವಿನಾಯಕ್ ದೇಹವೇ ರಕ್ತಸಿಕ್ತವಾಗಿತ್ತು.
ವಿನಾಯಕನ ಮೇಲೆ ದಾಳಿ ಮಾಡ್ತಿದ್ದಂತೆ ಒಳಗೆ ಸ್ನಾನ ಮಾಡ್ತಿದ್ದ ವಿನಾಯಕ ಪತ್ನಿಗೆ ಜೋರಾದ ಶಬ್ಧ ಕೇಳಿದೆ. ಏನಾಯ್ತು ಅಂತ ಹೊರ ಬಂದು ನೋಡಿದ್ರೆ ಗಂಡನ ದೇಹ ರಕ್ತಮಯವಾಗಿತ್ತು. ಭಯದಲ್ಲೇ ಗಂಡನ ಉಳಿಸಿಕೊಳ್ಳಬೇಕು ಅಂತ ವಿನಾಯಕ ಪತ್ನಿ ಪ್ರಯತ್ನ ಪಟ್ರೂ, ಖದೀಮರು ಆಕೆ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ರು. ಪತ್ನಿ ಕಣ್ಣೇದುರಲ್ಲೇ ವಿನಾಯಕ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಒದ್ದಾಡಿ ಜೀವ ಬಿಟ್ಟಿದ್ರು. ತನ್ನ ಮುಂದೆಯೇ ಪತಿ ಜೀವ ಬಿಡ್ತಿದ್ರು ಉಳಿಸಿಕೊಳ್ಳಲಾಗದೇ ವೈಶಾಲಿ ಅಕ್ಷರಶಃ ಕಣ್ನೀರಿಟ್ಟಿದ್ದಾರೆ.
ದುರಂತ ಏನಂದ್ರೆ ವಿನಾಯಕ ಜಾತ್ರೆ ಮುಗಿಸ್ಕೊಂಡು ಶುಕ್ರವಾರ ಊರಿಗೆ ಹೋಗ್ಬೇಕಾಗಿತ್ತು. ಆದ್ರೆ ಶನಿವಾರ ವಿನಾಯಕ ತಾಯಿ ತಿಥಿ ಕಾರ್ಯ ಇತ್ತು. ಹೀಗಾಗಿ ತಿಥಿ ಮುಗಿಸ್ಕೊಂಡು ಭಾನುವಾರ ವಾಪಸ್ ಪುಣೆಗೆ ಹೋಗೋಣ ಅಂತ ಅಂದುಕೊಂಡಿದ್ರು. ಇನ್ನೊಂದು ಗಂಟೆ ಕಳೆದಿದ್ರೆ ಕಾರಿನಲ್ಲಿ ಪ್ರಯಾಣ ಬೆಳೆಸ್ತಿದ್ರೆನೋ ಆದ್ರೆ ಅಷ್ಟೊತ್ತಿಗಾಗಲೇ ಮನೆಗೆ ನುಗ್ಗಿದ್ದ ಕಿರಾತಕರು ವಿನಾಯಕ್ ಮೇಲೆ ಮಚ್ಚು ಲಾಂಗ್ಗಳಿಂದ ದಾಳಿ ಮಾಡಿ ಬಿಟ್ಟಿದ್ರು. ಕ್ಷಣಾರ್ಧದದಲ್ಲೇ ಕೊಚ್ಚಿ ಕೊಚ್ಚಿ ವಿನಾಯಕ ಜೀವ ತೆಗೆದುಬಿಟ್ಟಿದ್ದಾರೆ.
ಇದನ್ನೂ ಓದಿ: BBMP ಗ್ರೌಂಡ್‌ನಲ್ಲಿ ಘೋರ ದುರಂತ.. ಆಟ ಆಡಲು ಹೋಗಿದ್ದ 10 ವರ್ಷದ ಬಾಲಕ ಸಾವು!
ವಿನಾಯಕ ಹುಟ್ಟೂರು ಕಾರವಾರವಾದ್ರೂ ಪುಣೆಯಲ್ಲಿ ಬದುಕು ಕಟ್ಟಿಕೊಂಡಿದ್ರು, ಹಬ್ಬ ಹರಿದಿನ ಅಂತ ಊರಿಗೆ ಬರ್ತಿದ್ರು. ಆದ್ರೆ ಈ ಬಾರಿ ಜಾತ್ರೆಗೆ ಬಂದವನ ಬದುಕಿನ ಯಾತ್ರೆ ಹೀಗೆ ದುರಂತಮಯವಾಗಿ ಅಂತ್ಯವಾಗಿ ಹೋಗಿತ್ತು. ರಕ್ಕಸರ ಕ್ರೌರ್ಯಕ್ಕೆ ಇದೀಗ ಕಾರವಾರದ ಜನತ್ತೆ ಅಕ್ಷರಶಃ ಬೆಚ್ಚಿಬಿದ್ದಿದೆ. ಅತ್ತ ವಿನಾಯಕ ಭೀಕರ ಕೊಲೆ ಕಂಡು ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.
ಕಿರಾತಕರು ಮನೆಯಿಂದ ಪರಾರಿಯಾಗ್ತಿದ್ದಂತೆ ವೈಶಾಲಿ ಸಂಬಂಧಿಕರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸಂಬಂಧಿಕರೆಲ್ಲ ವಿನಾಯಕ ಮನೆಗೆ ಓಡೋಡಿ ಬಂದಿದ್ದಾರೆ. ಮನೆಯ ರಕ್ತಾಂಗಣದ ದೃಶ್ಯ ನೋಡಿ ಅವರಿಗೂ ದಿಗ್ಭ್ರಮೆಯಾಗಿದೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ವಿನಾಯಕ ಪತ್ನಿ ವೈಶಾಲಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹತ್ಯೆ ನಡೆದ ಸ್ಥಳಕ್ಕೆ ಎಸ್ ಪಿ ನಾರಾಯಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವೈಯುಕ್ತಿಕ ಕಾರಣಕ್ಕಾಗಿ ಈ ಕೊಲೆ ನಡೆದಿರಬಹುದು ಎನ್ನಲಾಗಿದ್ದು, ಹತ್ಯೆಗೆ ನಿಖರ ಕಾರಣ ಏನೂ ಅಂತ ತಿಳಿದು ಬಂದಿಲ್ಲ. ಮನೆಯಂಗಳದಲ್ಲಿ ಬಿದ್ದಿದ್ದ ಚಾಕು ರಾಡ್ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಒಟ್ನಲ್ಲಿ ಜಾತ್ರೆಗೆ ಅಂತ ಊರಿಗೆ ಬಂದವನು ಬೆಳಗಾಗುವ ಹೊತ್ತಿಗೆ ಹತ್ಯೆಯಾಗಿ ಹೋಗಿದ್ದ. ಕೊಂದವರು ಯಾರು? ಕೊಂದವರ ಉದ್ದೇಶ ಏನು? ಅನ್ನೋದು ತನಿಖೆ ಬಳಿಕವೇ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ