newsfirstkannada.com

ನಿಲ್ದಾಣವನ್ನೇ ಮರೆತು ಹೋದ ರೈಲು ಬರೋಬ್ಬರಿ 1 ಕಿ.ಮೀ ರಿವರ್ಸ್‌ ಬಂತು.. ಅಯ್ಯೋ ಏನಾಯ್ತು?

Share :

23-05-2023

    ಸ್ಟೇಷನ್‌ಗೆ ಬಂದ ರೈಲು ನಿಲ್ಲಲೇ ಇಲ್ಲ..

    ರಿವರ್ಸ್‌ ಬಂತು ಈ ಎಕ್ಸ್‌ಪ್ರೆಸ್‌ ರೈಲು

    ರೈಲ್ವೆ ನಿಲ್ದಾಣದಲ್ಲಿದ್ದವರಿಗೆಲ್ಲ ಬಿಗ್ ಶಾಕ್‌

ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ನಾವು ಕಾಯಬೇಕು. ನಮಗೋಸ್ಕರ ರೈಲು ಕಾಯೋದಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಟ್ರೈನ್ ಹೊರಡುವ ಟೈಮಿಂಗ್ಸ್ ಒಂದು ಸಾರಿ ಫಿಕ್ಸ್ ಆದ್ರೆ ಸ್ವಲ್ಪ ಹೆಚ್ಚು ಕಡಿಮೆ ಆಗಬಹುದಷ್ಟೇ. ಯಾರಿಗೂ ಕಾಯದೇ ತನ್ನ ಚುಕುಬುಕು ಪ್ರಯಾಣ ಆರಂಭಿಸುತ್ತೆ. ಆದ್ರೆ, ಕೇರಳದ ಸಣ್ಣ ರೈಲ್ವೆ ನಿಲ್ದಾಣದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

ಕೇರಳದ ಅಲಪ್ಪುಜಾ ಜಿಲ್ಲೆಯ ಛೇರಿಯನಾಡ್ ರೈಲ್ವೆ ನಿಲ್ದಾಣದಲ್ಲಿ ಎಂದಿನಂತೆ ಪ್ರಯಾಣಿಕರು ರೈಲಿಗಾಗಿ ಕಾಯ್ತಾ ಇದ್ದರು. ಎಕ್ಸ್‌ಪ್ರೆಸ್‌ ರೈಲು ಕೂಡ ಬಂತು ಆದರೆ ಅದು ನಿಲ್ಲಲೇ ಇಲ್ಲ. ರೈಲಿಗಾಗಿ ಕಾಯ್ತಾ ಇದ್ದವರೆಲ್ಲಾ ಒಂದು ಕ್ಷಣ ಶಾಕ್ ಆಗಿದ್ದಾರೆ. ಈ ರೈಲು ಚಲಾಯಿಸುತ್ತಿದ್ದ ಲೋಕೋ ಪೈಲಟ್ ಈ ನಿಲ್ದಾಣದಲ್ಲಿ ಟ್ರೈನ್ ನಿಲ್ಲಿಸೋದನ್ನೇ ಮರೆತು ಬಿಟ್ಟಿದ್ದ. ಕಣ್ ಮುಂದೆ ರೈಲು ಪಾಸಾಗಿದ್ದನ್ನ ನೋಡಿ ಪ್ರಯಾಣಿಕರು ಗಾಬರಿಯಾಗಿದ್ದಾರೆ.

ಛೇರಿಯನಾಡ್ ರೈಲ್ವೆ ನಿಲ್ದಾಣದಲ್ಲಿ ಬೆಳಗ್ಗೆ 7.45ರ ಸಮಯದಲ್ಲಿ ಈ ಘಟನೆ ನಡೆದಿದೆ. ನಿಲ್ದಾಣದಲ್ಲಿ ನಿಲ್ಲಸದೇ ಹೋದ ಪೈಲಟ್‌ಗೆ ನಂತರ ಅರಿವಾಗಿದೆ. ಸುಮಾರು 1 ಕಿಲೋ ಮೀಟರ್ ದೂರ ಹೋಗಿದ್ದ ಶೋರನೂರ್‌ ವೇನಾಡ್ ಎಕ್ಸ್‌ಪ್ರೆಸ್‌ ರೈಲು ಮತ್ತೆ ರಿವರ್ಸ್ ಬಂದಿದೆ. ಸುಮಾರು 700 ಮೀಟರ್ ಅಷ್ಟು ದೂರ ರಿವರ್ಸ್ ಬಂದ ಪೈಲಟ್, ಕೊನೆಗೆ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಿದ್ದಾರೆ.

ಸ್ಟಾಪ್ ಕೊಡದೇ ಹೋದ ರೈಲು ರಿವರ್ಸ್‌ ಬಂದ ಬಗ್ಗೆ ಯಾವ ಪ್ರಯಾಣಿಕರೂ ದೂರು ಕೊಟ್ಟಿಲ್ಲ. ಸರಿಯಾದ ಸಮಯಕ್ಕೆ ಈ ರೈಲು ತನ್ನ ನಿಗಧಿತ ಸ್ಥಳವನ್ನು ತಲುಪಿದೆ ಎನ್ನಲಾಗಿದೆ. ಈ ಘಟನೆಯಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಆದರೂ ಲೋಕೋ ಪೈಲೆಟ್‌ನಿಂದ ಈ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸಾಮಾನ್ಯವಾಗಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಇಂತಹ ಘಟನೆಗಳು ನಡೆದಿರೋದು ಅಪರೂಪ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಿಲ್ದಾಣವನ್ನೇ ಮರೆತು ಹೋದ ರೈಲು ಬರೋಬ್ಬರಿ 1 ಕಿ.ಮೀ ರಿವರ್ಸ್‌ ಬಂತು.. ಅಯ್ಯೋ ಏನಾಯ್ತು?

https://newsfirstlive.com/wp-content/uploads/2023/05/TRAIN.jpg

Load More