newsfirstkannada.com

ಚಂದ್ರನಿಗೆ ಹಿಡಿದ ಗ್ರಹಣ ಬಿಡಬಹುದು ಆದರೆ.. ಸಿದ್ದರಾಮಯ್ಯ ಸರ್ಕಾರವನ್ನು ಕಿಚಾಯಿಸಿದ ಬಿಜೆಪಿ ಹೇಳಿದ್ದೇನು?

Share :

29-10-2023

    5 ತಿಂಗಳಿನಿಂದ ರಾಜ್ಯಕ್ಕೆ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡೋ ಲಕ್ಷಣಗಳಿಲ್ಲ

    ಕಾಂಗ್ರೆಸ್ ಸರ್ಕಾರ ಬಂದಿದೆ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ ಎಂದು ವ್ಯಂಗ್ಯ

    ಕಾವೇರಿಗೆ ಗ್ರಹಣ, ವಿದ್ಯುತ್‌ಗೆ ಗ್ರಹಣ, ಬ್ರ್ಯಾಂಡ್‌ ಬೆಂಗಳೂರಿಗೆ ಗ್ರಹಣ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ. ಚಂದ್ರನಿಗೆ ಹಿಡಿದ ಗ್ರಹಣ ಬಿಡಬಹುದು. ಆದರೆ ರಾಜ್ಯಕ್ಕೆ 5 ತಿಂಗಳಿನಿಂದ ಹಿಡಿದಿರುವ ಗ್ರಹಣ ಸದ್ಯಕ್ಕೆ ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಸರ್ಕಾರ ಎಂದು ರಾಜ್ಯ ಬಿಜೆಪಿ ಕಿಚಾಯಿಸಿದೆ.

ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ನಿನ್ನೆ ತಡರಾತ್ರಿ ದೇಶಕ್ಕೆ ಏರ್ಪಟ್ಟ ಚಂದ್ರಗ್ರಹಣಕ್ಕೆ ರಾಜ್ಯ ಸರ್ಕಾರವನ್ನು ಹೋಲಿಕೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದೆ ಕರ್ನಾಟಕಕ್ಕೆ ಗ್ರಹಣ ಹಿಡಿದಿದೆ ಎಂದು ವ್ಯಂಗ್ಯ ಚಿತ್ರದ ಜೊತೆಗೆ ರಾಜ್ಯದಲ್ಲಿ ಯಾವುದಕ್ಕೆಲ್ಲಾ ಗ್ರಹಣ ಹಿಡಿದಿದೆ ಅನ್ನೋದರ ಪಟ್ಟಿ ಮಾಡಿದ್ದು, ಸರ್ಕಾರಕ್ಕೆ ಹಿಡಿದ ಗ್ರಹಣ ಬಿಟ್ಟಿಲ್ಲ ಎಂದು ಕಿಡಿಕಾರಿದೆ.

ರಾಜ್ಯ ಬಿಜೆಪಿ ಗ್ರಹಣದ 8 ಪಟ್ಟಿ!

ಕಾವೇರಿಗೆ ಗ್ರಹಣ
ವಿದ್ಯುತ್‌ಗೆ ಗ್ರಹಣ
ಅಭಿವೃದ್ಧಿಗೆ ಗ್ರಹಣ
ಅನ್ನಭಾಗ್ಯಕ್ಕೆ ಗ್ರಹಣ
ಕೈಗಾರಿಕೆಗಳಿಗೆ ಗ್ರಹಣ
ಕುಡಿಯುವ ನೀರಿಗೆ ಗ್ರಹಣ
ಕೃಷಿ ಉತ್ಪನ್ನಗಳಿಗೆ ಗ್ರಹಣ
ಬ್ರ್ಯಾಂಡ್‌ ಬೆಂಗಳೂರಿಗೆ ಗ್ರಹಣ

ಹೀಗೆ ರಾಜ್ಯದ 8 ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿರುವ ರಾಜ್ಯ ಬಿಜೆಪಿ, 30 ವರ್ಷಗಳ ಹಿಂದಿನ ಆ ದಿನಗಳ ಗ್ರಹಣ ಇದೀಗ ಸಿದ್ದರಾಮಯ್ಯರವರ ಸರ್ಕಾರದ ಕೃಪೆಯಿಂದ ಕರ್ನಾಟಕಕ್ಕೆ ಮತ್ತೊಮ್ಮೆ ವಕ್ಕರಿಸಿದೆ. ಕೈ ಕಚ್ಚಾಟ ಎಂದು ವ್ಯಂಗ್ಯವಾಡಿ ಟ್ವೀಟ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರನಿಗೆ ಹಿಡಿದ ಗ್ರಹಣ ಬಿಡಬಹುದು ಆದರೆ.. ಸಿದ್ದರಾಮಯ್ಯ ಸರ್ಕಾರವನ್ನು ಕಿಚಾಯಿಸಿದ ಬಿಜೆಪಿ ಹೇಳಿದ್ದೇನು?

https://newsfirstlive.com/wp-content/uploads/2023/10/Bjp-Garahana-Tweet.jpg

Load More