newsfirstkannada.com

Video: ಯುವತಿಗೆ ಮೆಸೇಜ್​ ಮಾಡಿದ್ದೇ ತಪ್ಪು.. ಇಬ್ಬರು ಯುವಕರಿಗೆ ಗ್ರಾಮಸ್ಥರಿಂದ ಬಿತ್ತು ಸರಿಯಾದ ಒದೆ

Share :

12-08-2023

    ಯುವಕರನ್ನ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ ಗ್ರಾಮಸ್ಥರು

    ಫಿರ್ಯಾದಿ ಸಮುದಾಯದ ಇಬ್ಬರು ಯುವಕರಿಗೆ ಧರ್ಮದೇಟು

    ಮೊಬೈಲ್​​ನಲ್ಲಿ ಸೆರೆಯಾಯ್ತು ದೃಶ್ಯ.. ಇಲ್ಲಿದೆ ವಿಡಿಯೋ

ಯುವತಿಗೆ ಮೆಸೇಜ್ ಮಾಡಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಯುವಕರನ್ನ ಕಟ್ಟಿ ಹಾಕಿ ಮನಬಂದಂತೆ ಥಳಿಸಿದ ಘಟನೆ ಗುಜರಾತ್​ನ ಬನಸ್ಕಾಂತದ ಗಡಿ ಭಾಗದ ವಾವ್ ಗ್ರಾಮದಲ್ಲಿ ನಡೆದಿದೆ.

ಯುವತಿಗೆ ಮೆಸೇಜ್​ ಮಾಡಿದ್ದಕ್ಕಾಗಿ ಫಿರ್ಯಾದಿ ಸಮುದಾಯದ ಇಬ್ಬರು ಯುವಕರಿಗೆ ಮಹಿಳೆಯರು ಹಾಗೂ ಗ್ರಾಮದವರು ಥಳಿಸಿದ್ದಾರೆ. ಯುವಕರ ಕಾಲಿಗೆ ಸರಪಳಿ, ಸೊಂಟಕ್ಕೆ ಹಗ್ಗ ಕಟ್ಟಿ ಹಾಕಿ ಮಹಿಳೆಯರು ಕೋಲಿನಿಂದ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಅತ್ತ ಪುರುಷರು ಕೂಡ ಯುವಕರಿಗೆ ಹಿಗ್ಗಾಮುಗ್ಗ ಹೊಡೆದಿದ್ದು, ಯುವಕರಿಗೆ ಥಳಿಸಿದ ಬಳಿಕ ಊರಿನ ಮುಖಂಡರಿಗೆ ಇವರನ್ನ ಒಪ್ಪಿಸಿದ್ದಾರೆ. ಊರಿನ ಮುಖಂಡರು ಮಹಿಳೆಯರ ಬಟ್ಟೆ ತೊಡಿಸಿ ಕೊರಳಿಗೆ ಚಪ್ಪಲಿ ಹಾರ ಹಾಕಿ ಶಿಕ್ಷಿಸಿದ್ದಾರೆ.

ಕೋಲಿನಿಂದ ಯುವಕರ ಮೇಲೆ ಹಲ್ಲೆ ನಡೆಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಂಜಯ್​ ದೇಸಾಯಿ ಎಂಬ ಟ್ವಿಟ್ವಿಗ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅನೇಕರು ಕಾಮೆಂಟ್​ ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಯುವತಿಗೆ ಮೆಸೇಜ್​ ಮಾಡಿದ್ದೇ ತಪ್ಪು.. ಇಬ್ಬರು ಯುವಕರಿಗೆ ಗ್ರಾಮಸ್ಥರಿಂದ ಬಿತ್ತು ಸರಿಯಾದ ಒದೆ

https://newsfirstlive.com/wp-content/uploads/2023/08/Gujarat.jpg

Load More