newsfirstkannada.com

×

Udupi Murder: ಗಗನಸಖಿ ಗುಪ್ತಾಂಗಕ್ಕೆ ಚಾಕು ಇರಿದಿದ್ದ.. ಮೊಬೈಲ್ ನಂಬರ್‌ ಬ್ಲಾಕ್ ಮಾಡಿದ್ದಕ್ಕೆ ಹುಚ್ಚನಾಗಿದ್ದ ಹಂತಕ

Share :

Published November 16, 2023 at 7:44am

    ಬೆಡ್ ಮೇಲೆ ಮಲಗಿದ್ದ ಅಯ್ನಾಸ್‌ಳನ್ನು ಕೊಚ್ಚಿ ಕೊಲೆ ಮಾಡಿದ

    ಆಕೆ ಗುಪ್ತಾಂಗದ ಮೇಲೂ ಹಲವು ಬಾರಿ ಚಾಕು ಇರಿದು ಕ್ರೌರ್ಯ

    ಕ್ಯಾಬಿನ್ ಕ್ರ್ಯೂ, ಗಗನಸಖಿ ಮಧ್ಯೆ ಒನ್ ಸೈಡ್ ಲವ್ ಸ್ಟೋರಿ?

ಉಡುಪಿ: ಗಗನಸಖಿ ಅಯ್ನಾಸ್‌ ಮತ್ತವರ ಫ್ಯಾಮಿಲಿ ಹತ್ಯೆ ಪ್ರಕರಣದಲ್ಲಿ ಬೆಚ್ಚಿ ಬೀಳಿಸೋ ಅಂಶಗಳು ಬಯಲಾಗುತ್ತಿವೆ. ಉಡುಪಿ ತಾಯಿ‌ ಮಕ್ಕಳ ಹತ್ಯಾಕಾಂಡದಲ್ಲಿ ಪ್ರವೀಣ ಚೌಗಲೆ ಈಗ ಅಧಿಕೃತ ಆರೋಪಿ. ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ ಹಂತಕ ಗಗನಸಖಿ ಅಯ್ನಾಸ್‌ಳನ್ನು ಕೊಲ್ಲಲೆಂದೇ ಉಡುಪಿಗೆ ಬಂದಿದ್ದ. ಅಯ್ನಾಸ್ ಒಬ್ಬಳನ್ನ ಹತ್ಯೆ ಮಾಡೋದು ಒಂದೇ ಇವನ ಉದ್ದೇಶವಾಗಿತ್ತು.

ಅಯ್ನಾಸ್‌ಳನ್ನು ಕೊಲ್ಲಲು ಬಂದಿದ್ದ ಪ್ರವೀಣ ಚೌಗಲೆ ಬೆಡ್ ಮೇಲೆ ಮಲಗಿದ್ದ ಅಯ್ನಾಸ್‌ಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಎದೆ ಹಾಗೂ ಕಿಬ್ಬೊಟ್ಟೆ ಭಾಗವನ್ನು ಇರಿದಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈತನ ಅಮಾನುಷ ಕ್ರೌರ್ಯ ಇಷ್ಟಕ್ಕೆ ನಿಂತಿಲ್ಲ. ಆಕೆಯ ಗುಪ್ತಾಂಗದ ಮೇಲೂ ಹಲವು ಬಾರಿ ಚಾಕು ಇರಿದಿದ್ದಾನೆ ಎನ್ನಲಾಗಿದೆ.

ಮೊಬೈಲ್ ನಂಬರ್‌ ಬ್ಲಾಕ್ ಮಾಡಿದ್ದಕ್ಕೆ ಹುಚ್ಚನಾಗಿದ್ದ!

ವಿಮಾನದ ಕ್ಯಾಬಿನ್ ಕ್ರ್ಯೂ ಹಾಗೂ ಗಗನಸಖಿ ಅಯ್ನಾಸ್‌ ಮಧ್ಯೆ ಇದಿದ್ದು ಒನ್ ಸೈಡ್ ಲವ್ ಸ್ಟೋರಿ ಎನ್ನಲಾಗುತ್ತಿದೆ. ಅಯ್ನಾಸ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಪ್ರವೀಣ್ ಚೌಗಲೆ ಹುಚ್ಚನಂತಾಗಿದ್ದನಂತೆ.
ಅಯ್ನಾಸ್ ಜೊತೆಗಿನ ಸಲಿಗೆಯಿಂದ ಪ್ರವೀಣ್‌ ಚೌಗಲೆ ಪತ್ನಿ ಕೂಡ ಕೋಪಗೊಂಡಿದ್ದಳಂತೆ. ಈ ವಿಚಾರ ತಿಳಿದ ಅಯ್ನಾಸ್‌, ಪ್ರವೀಣ್ ಸ್ನೇಹದಿಂದ ದೂರವಾಗಿದ್ದಳು. ಇದೊಂದೇ ಕಾರಣಕ್ಕೆ ಅಯ್ನಾಸ್‌ಳನ್ನು ಹತ್ಯೆ ಮಾಡಲೆಂದೇ ಪ್ರವೀಣ್ ಬಂದಿದ್ದ. ಸಾಕ್ಷ್ಯ ನಾಶದ ದೃಷ್ಟಿಯಿಂದ ತಾಯಿ, ಅಕ್ಕ ಹಾಗೂ ತಮ್ಮನ ಹತ್ಯೆ ಮಾಡಿದ್ದಾನೆ. ಪೊಲೀಸ್ ವಿಚಾರಣೆಯಲ್ಲಿ ಈ ಸತ್ಯವನ್ನ ಆರೋಪಿ ಒಪ್ಪಿಕೊಂಡಿದ್ದಾನೆ.

ಹತ್ಯೆಗೂ ಮುನ್ನ ಮನೆಗೆ ಬಂದಿದ್ದ ಶಂಕೆ!

ನಾಲ್ವರ ಹತ್ಯೆಗೂ ಮೊದಲೇ ಹಂತಕ ಪ್ರವೀಣ್ ಚೌಗಲೆ ಗಗನಸಖಿ ಅಯ್ನಾಸ್ ಮನೆಗೆ ಬಂದಿರುವ ಸಾಧ್ಯತೆ ಇದೆ. ಈ ಬಗ್ಗೆ ಸಿಸಿಟಿವಿ ಸುಳಿವು ನೀಡಿದೆ. ಪ್ರವೀಣ್ ನಡಿಗೆಯನ್ನು ಆಧರಿಸಿ ಉಡುಪಿ ಪೊಲೀಸರು ಕಾರ್ಯೋನ್ಮುಖರಾಗಿದ್ದಾರೆ. ಸೈನ್ಯ ಅಥವಾ ಪೊಲೀಸ್ ಇಲಾಖೆ ಶೈಲಿಯ ನಡುಗೆ ಕಂಡು ಪೊಲೀಸರು ಸಂಶಯಗೊಂಡಿದ್ದಾರೆ. ಏರ್ ಇಂಡಿಯಾದಲ್ಲಿ ಕೆಲಸಕ್ಕೆ ಸೇರುವ ಮುಂಚೆ ಕೆಲವು ತಿಂಗಳ ಕಾಲ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಪ್ರವೀಣ್ ಕೆಲಸ ಮಾಡಿದ್ದ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Udupi Murder: ಗಗನಸಖಿ ಗುಪ್ತಾಂಗಕ್ಕೆ ಚಾಕು ಇರಿದಿದ್ದ.. ಮೊಬೈಲ್ ನಂಬರ್‌ ಬ್ಲಾಕ್ ಮಾಡಿದ್ದಕ್ಕೆ ಹುಚ್ಚನಾಗಿದ್ದ ಹಂತಕ

https://newsfirstlive.com/wp-content/uploads/2023/11/Udupi-Murder-3.jpg

Load More