newsfirstkannada.com

VIDEO: ಒಮ್ಮೊಮ್ಮೆ ಹೀಗೂ ಆಗುತ್ತೆ ಚಿಂತೆ ಬಿಡಿ.. ಟೀಂ ಇಂಡಿಯಾ ಆಟಗಾರರ ಬೆನ್ನು ತಟ್ಟಿದ ಪ್ರಧಾನಿ ಮೋದಿ

Share :

21-11-2023

    ಅಜೇಯರಾಗಿದ್ದ ಟೀಂ ಇಂಡಿಯಾಗೆ ಫೈನಲ್ ಪಂದ್ಯದಲ್ಲಿ ಸೋಲು

    ಡ್ರೆಸ್ಸಿಂಗ್ ರೂಮ್‌ನಲ್ಲಿ ಬೇಸರದಲ್ಲಿದ್ದ ಟೀಂ ಇಂಡಿಯಾ ಆಟಗಾರರು

    ಸೋತ ಟೀಮ್​ ಇಂಡಿಯಾ ಆಟಗಾರರನ್ನು ಸಂತೈಸಿದ ಪ್ರಧಾನಿ ಮೋದಿ

ವಿಶ್ವಕಪ್‌ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸೋಲಿನ ಬಿಗ್‌ ಶಾಕ್ ಇನ್ನೂ ಹಾಗೇ ಇದೆ. ಕೋಟ್ಯಾಂತರ ಅಭಿಮಾನಿಗಳು ಇನ್ನೂ ಆ ನೋವಿನಿಂದ ಹೊರ ಬಂದಿಲ್ಲ. ವಿಶ್ವಕಪ್ ಟೂರ್ನಿಯಲ್ಲಿ ಅಜೇಯರಾಗಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಈಗಲೂ ಊಹಿಸಿಕೊಳ್ಳೋದು ಕಷ್ಟವಾಗಿದೆ.

ನವೆಂಬರ್ 19ರಂದು ವಿಶ್ವಕಪ್‌ ಪಂದ್ಯದ ಬಳಿಕ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಿಶ್ಯಬ್ಧವಾಗಿತ್ತು. ಡ್ರೆಸ್ಸಿಂಗ್ ರೂಮ್‌ನಲ್ಲಿ ಟೀಂ ಇಂಡಿಯಾ ಆಟಗಾರರು ಬೇಸರದಲ್ಲಿ ಕಾಲ ಕಳೆಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕಪ್​ ಟೂರ್ನಿಯ ಫೈನಲ್​ನಲ್ಲಿ ಸೋತ ಟೀಮ್​ ಇಂಡಿಯಾ ಆಟಗಾರರನ್ನು ಸಂತೈಸಿದ್ರು. ಕೆಲವೊಮ್ಮೆ ಹೀಗೂ ಆಗುತ್ತೆ. ನೀವು ಚಿಂತಿಸಬೇಡಿ. ವಿಶ್ವಕಪ್ ಟೂರ್ನಿ ಎಲ್ಲರೂ ಅದ್ಭುತವಾದ ಪ್ರದರ್ಶನ ನೀಡಿದ್ದೀರಿ ಎಂದು ಹೇಳಿದ್ದಾರೆ.

ಪಂದ್ಯದ ಬಳಿಕ ಡ್ರೆಸ್ಸಿಂಗ್​ ರೂಮ್​ಗೆ ತೆರಳಿದ ಪ್ರಧಾನಿ ಮೋದಿ ಅವರು ದುಃಖದಲ್ಲಿದ್ದ ಪ್ರತಿಯೊಬ್ಬ ಆಟಗಾರರನ್ನು ಸಮಾಧಾನ ಮಾಡೋ ಯತ್ನ ಮಾಡಿದ್ದಾರೆ. ನಾಯಕ ರೋಹಿತ್​ ಶರ್ಮಾ, ಕೋಚ್‌ ರಾಹುಲ್​ ದ್ರಾವಿಡ್​​, ವಿರಾಟ್​ ಕೊಹ್ಲಿ, ಮೊಹಮ್ಮದ್​ ಶಮಿ ಸೇರಿದಂತೆ ಎಲ್ಲಾ ಆಟಗಾರರನ್ನ ಮೋದಿ ಮಾತನಾಡಿಸಿದ್ದಾರೆ. ಮೋದಿ ಆಟಗಾರರನ್ನ ಸಂತೈಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಒಮ್ಮೊಮ್ಮೆ ಹೀಗೂ ಆಗುತ್ತೆ ಚಿಂತೆ ಬಿಡಿ.. ಟೀಂ ಇಂಡಿಯಾ ಆಟಗಾರರ ಬೆನ್ನು ತಟ್ಟಿದ ಪ್ರಧಾನಿ ಮೋದಿ

https://newsfirstlive.com/wp-content/uploads/2023/11/PM-modi-6.jpg

Load More