newsfirstkannada.com

ಓದಿಸಿ ಸರ್ಕಾರಿ ಕೆಲಸ ಸಿಗುವಂತೆ ಮಾಡಿಕೊಟ್ಟ ಪತಿಗೆ ಚಳ್ಳೆಹಣ್ಣು ತಿನ್ನಿಸಿದ ಪತ್ನಿ! ಬೇರೊಬ್ಬನ ಜೊತೆಗೆ ಲವ್ವಿ ಡವ್ವಿ

Share :

12-07-2023

    ಡಿ ಗ್ರೂಪ್ ನೌಕರ ಅಲೋಕ್​ ತನ್ನ ಪತ್ನಿ ಜ್ಯೋತಿ ಮೌರ್ಯ

    ಹೋಮ್ ಗಾರ್ಡ್ ಕಮಾಡೆಂಟ್‌ ಜೊತೆಗೆ ಪತ್ನಿಯ ಲವ್ವಿಡವ್ವಿ

    ಪತ್ನಿಗಾಗಿ ಹಗಲು ರಾತ್ರಿ ದುಡಿದ, ಆದ್ರೆ ಪತ್ನಿ ಮಾಡಿದ್ದೇ ಬೇರೆ

ಉತ್ತರ ಪ್ರದೇಶ: ಇತ್ತೀಚೆಗೆ ಪತ್ನಿಯೇ ತನ್ನ ಪತಿಯನ್ನು ಓದಿಸಿ, ನೌಕರಿ ಗಿಟ್ಟಿಸುವಂತೆ ಮಾಡಿದ್ದ. ಕೊನೆಗೆ ತನ್ನ ಪತ್ನಿಗೆ ಮೋಸ ಮಾಡಿ ಪರಸ್ತ್ರೀಯನ್ನು ವಿವಾಹವಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿತ್ತು. ಆದರೀಗ ಈ ಘಟನೆಗೆ ಉಲ್ಟಾ ಎಂಬಂತೆ ಪತಿಯೋರ್ವ ತನ್ನ ಪತ್ನಿಗೆ ಸರಿಯಾಗಿ ಓದಿಸಿ ಆಕೆಯನ್ನು ಉಪವಿಭಾಗಾಧಿಕಾರಿಯನ್ನಾಗಿ ಮಾಡಿ, ಕೊನೆಗೆ ಆಕೆ ತನ್ನ ಗಂಡನಿಗೆ ಮೋಸ ಮಾಡಿ ಹೋದ ಪ್ರಕರಣ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

ಡಿ ಗ್ರೂಪ್ ನೌಕರ ಅಲೋಕ್​ ತನ್ನ ಪತ್ನಿ ಜ್ಯೋತಿ ಮೌರ್ಯಳನ್ನು ಉಪವಿಭಾಗಾಧಿಕಾರಿ ಹುದ್ದೆಗೇರಲು ದುಡಿದ. ಆತನ ಪರಿಶ್ರಮದಂತೆ ಪತ್ನಿ ಜ್ಯೋತಿಗೆ ರಾಜ್ಯ ಸರ್ಕಾರದಲ್ಲಿ ಉಪವಿಭಾಗಾಧಿಕಾರಿ ಹುದ್ದೆಯೂ ಸಿಕ್ಕಿತು. ಆದರೆ ಹುದ್ದೆ ಸಿಕ್ಕ ಬಳಿಕ ಪತ್ನಿ ತನ್ನ ಪತಿಗೆ ಮೋಸ ಮಾಡಿ ಹೋಮ್ ಗಾರ್ಡ್ ಕಮ್ಯಾಂಡೆಂಟ್ ಜೊತೆಗೆ ಲವ್ವಿಗೆ ಬಿದ್ದಿದ್ದಾಳೆ.

ವಾಟ್ಸ್​ಆ್ಯಪ್​ ಮೂಲಕ ಹೋಮ್ ಗಾರ್ಡ್ ಕಮ್ಯಾಡೆಂಟ್ ಜೊತೆಗೆ ಪತ್ನಿ ಜ್ಯೋತಿ ಮೌರ್ಯ ಅಶ್ಲೀಲವಾಗಿ ಚಾಟಿಂಗ್ ಮಾಡಿದ್ದಾಳೆ. ಇದನ್ನು ನೋಡಿ ಪತಿರಾಯ ನೊಂದಿದ್ದಾನೆ. ಬಳಿಕ ಈ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಕೊನೆಗೆ ಮಾಧ್ಯಮದ ಮುಂದೆ ಅಲೋಕ್ ಜ್ಯೋತಿ ಮೌರ್ಯಳಿಗೆ ಹೋಮ್ ಗಾರ್ಡ್ ಕಮಾಡೆಂಟ್ ಜೊತೆಗೆ ಅನೈತಿಕ ಸಂಬಂಧ ಇದೆ ಎಂದ ಆರೋಪ ಮಾಡಿದ್ದಾನೆ. ಜೊತೆಗೆ ಪತ್ನಿಯೇ ತನ್ನನ್ನು ಕೊಲೆ ಮಾಡಿಸುತ್ತಾಳೆ ಎಂದು ಹೇಳಿಕೆ ನೀಡಿದ್ದಾನೆ.

ಡಿ ಗ್ರೂಪ್ ನೌಕರ ಅಲೋಕ್​ ಆರೋಪದ ಮೇರೆಗೆ ಹೋಮ್ ಗಾರ್ಡ್ ಕಮಾಂಡೆಂಟ್ ಮನೀಶ್ ದುಬೆಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಮನೀಶ್ ದುಬೆ ಸಸ್ಪೆಂಡ್ ಮಾಡಿ ಎಂದು ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಇದರೊಂದಿಗೆ ಪತ್ನಿ ಜ್ಯೋತಿ ಮೌರ್ಯ- ಮನೀಶ್ ದುಬೆಯ ವಾಟ್ಸ್ಆ್ಯಪ್​ ಚಾಟ್ ಅನ್ನು ಅಲೋಕ್​ ಬಿಡುಗಡೆ ಮಾಡಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಓದಿಸಿ ಸರ್ಕಾರಿ ಕೆಲಸ ಸಿಗುವಂತೆ ಮಾಡಿಕೊಟ್ಟ ಪತಿಗೆ ಚಳ್ಳೆಹಣ್ಣು ತಿನ್ನಿಸಿದ ಪತ್ನಿ! ಬೇರೊಬ್ಬನ ಜೊತೆಗೆ ಲವ್ವಿ ಡವ್ವಿ

https://newsfirstlive.com/wp-content/uploads/2023/07/Uttarpradesh-Wife-Case.jpg

Load More