newsfirstkannada.com

16 ವರ್ಷದ ಮಗಳಿಗೆ ಮದುವೆ ಮಾಡಿಸು.. ಗಂಡ ಮಾತು ನಿರಾಕರಿಸಿದನೆಂದು ನೇಣಿಗೆ ಕೊರಳೊಡ್ಡಿದ ಹೆಂಡತಿ

Share :

Published August 18, 2023 at 12:39pm

    ಸಾಯುವ ಮುನ್ನ ಎರಡನೇ ಮಗಳ ಮದುವೆ ನೋಡಬೇಕು

    ಮಗಳಿಗೆ ಮದುವೆ ಮಾಡಿಸಿದ್ರೆ ಜೈಲೂಟ ಫಿಕ್ಸ್​ ಎಂದಿದ್ದ ಗಂಡ

    ಪತಿ ಮಾತು ನಿರಾಕರಿಸಿದನೆಂದು ಆತ್ಮಹತ್ಯೆ ಮಾಡಿಕೊಂಡ ಪತ್ನಿ

ಬೆಂಗಳೂರು: ಗಂಡ ತನ್ನ ಮಾತು ಕೇಳುತ್ತಿಲ್ಲವೆಂದು ಹೆಂಡತಿ ನೇಣಿಗೆ ಶರಣಾದ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹಫೀಸ ಸುಲ್ತಾನ ( 42) ಆತ್ಮಹತ್ಯೆ ಮಾಡಿಕೊಂಡ ಪತ್ನಿ.

ಹಫೀಸ ಸುಲ್ತಾನ್​ ಎರಡನೇ ಪತಿಯನ್ನಾಗಿ ಸೈಯದ್ ಎಂಬಾತನನ್ನು ವಿವಾಹವಾಗಿದ್ದಳು. ಹಫೀಸಗೆ ಮೊದಲ ಗಂಡನಿಂದ ಇಬ್ಬರು ಹೆಣ್ಣು ಮಕ್ಕಳಿದ್ದರು. ಮೊದಲ ಪತಿ ವಿಚ್ಚೇದನ ಬಳಿಕ 9 ವರ್ಷದ ಹಿಂದೆ ಸೈಯದ್(34) ನನ್ನು ಮದುವೆಯಾಗಿದ್ದಳು.

ಕಳೆದ 6 ತಿಂಗಳ ಹಿಂದಷ್ಟೇ ಮೊದಲ ಮಗಳ ಮದುವೆ ಮಾಡಲಾಗಿತ್ತು. ಬಳಿಕ 16 ವರ್ಷದ ಎರಡನೇ ಮಗಳಿಗೂ ಮದುವೆ ಮಾಡುವಂತೆ ಒತ್ತಾಯ ಮಾಡಿದ್ದಳು. ಸಾಯುವ ಮುನ್ನ ಎರಡನೇ ಮಗಳ ಮದುವೆ ನೋಡಬೇಕು ಎಂದು ಪಟ್ಟು ಹಿಡಿದಿದ್ದಳು.

ಆದರೆ 2ನೇ ಮಗಳು ಇನ್ನೂ ಚಿಕ್ಕ ವಯಸ್ಸಿನವಳಾಗಿದ್ದು, ಮದುವೆ ಮಾಡಿಸಿದರೆ ಕಾನೂನು ಸಮಸ್ಯೆ ಎದುರಿಸಬೇಕೆಂದು ಪತ್ನಿಯ ಮಾತನ್ನು ಸೈಯದ್​ ನಿರಾಕರಿಸಿದ್ದ. ಇದರಿಂದ ಮನನೊಂದು ಹಫೀಸ ಸುಲ್ತಾನ್ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

16 ವರ್ಷದ ಮಗಳಿಗೆ ಮದುವೆ ಮಾಡಿಸು.. ಗಂಡ ಮಾತು ನಿರಾಕರಿಸಿದನೆಂದು ನೇಣಿಗೆ ಕೊರಳೊಡ್ಡಿದ ಹೆಂಡತಿ

https://newsfirstlive.com/wp-content/uploads/2023/08/Marriage.jpg

Load More