newsfirstkannada.com

ಟೈಟ್‌ ಆಗಿದ್ದ ಸಬ್ ಇನ್ಸ್‌ಪೆಕ್ಟರ್‌ಗೆ ಗುಂಡಿಕ್ಕಿ ಕೊಂದ ಪತ್ನಿ.. ಗಂಡ, ಹೆಂಡತಿ ಜಗಳ ದುರಂತದಲ್ಲಿ ಅಂತ್ಯ

Share :

04-11-2023

    ಗಂಡನ ಮೇಲಿರೋ ಕೋಪಕ್ಕೆ 3 ಬಾರಿ ಗುಂಡು ಹಾರಿಸಿ ಕೊಂದ ಪತ್ನಿ

    ಮನೆಯಲ್ಲಿ ಟೈಟ್ ಆಗಿ ಹೆಂಡತಿ ಜೊತೆ ಜಗಳವಾಡಿದ ಸಬ್ ಇನ್ಸ್‌ಪೆಕ್ಟರ್

    ಗಂಡನ ಶೂಟೌಟ್‌ಗೆ ಗಾಯಗೊಂಡಿದ್ದ ಆರತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ಗುರುಗ್ರಾಮ: ರೈಲ್ವೇ ಪೊಲೀಸ್ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಅನ್ನು ಆತನ ಹೆಂಡತಿಯೇ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಹರಿಯಾಣದಲ್ಲಿ ನಡೆದಿದೆ. ಮನೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್ ಹಾಗೂ ಆತನ ಪತ್ನಿ ಮಧ್ಯೆ ಜಗಳವಾಗಿದೆ. ಕೊನೆಗೆ ಆ ಮಹಿಳೆ ತನ್ನ ಗಂಡನ ಬಳಿಯಿದ್ದ ಗನ್‌ ಕಸಿದುಕೊಂಡು ಶೂಟ್ ಮಾಡಿದ್ದಾರೆ ಎನ್ನಲಾಗಿದೆ.

ಮೃತ ರೈಲ್ವೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅನ್ನು 49 ವರ್ಷದ ರಾಜ್‌ಬೀರ್ ಎಂದು ಗುರುತಿಸಲಾಗಿದೆ. ಇವರು ರೇವಾರಿ ರೈಲು ನಿಲ್ದಾಣದ ಜಿಆರ್‌ಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಾಜ್‌ಬೀರ್ ಅವರು ತನ್ನ ಪತ್ನಿ ಆರತಿ ಹಾಗೂ ಮಕ್ಕಳ ಜೊತೆ ಗುರುಗ್ರಾಮ್‌ನ ಶಿಕೋಪುರ್ ಗ್ರಾಮದಲ್ಲಿ ನೆಲೆಸಿದ್ದರು.

ಬೆಳಗಿನ ಜಾವ 5 ಗಂಟೆ ಸುಮಾರಿಗೆ ರಾಜ್‌ಬೀರ್ ಹಾಗೂ ಆರತಿ ನಡುವೆ ಜೋರು ಜಗಳ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಸಬ್‌ ಇನ್ಸ್‌ಪೆಕ್ಟೆರ್‌ ರಾಜ್‌ಬೀರ್ ಅವರು ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದರು. ಮೊದಲಿಗೆ ರಾಜ್‌ಬೀರ್‌, ಆರತಿಯ ಮೇಲೆ ಗುಂಡು ಹಾರಿಸಿದ್ದಾರೆ. ಆಗ ಆಕೆ ಗಾಯಗೊಂಡಿದ್ದು, ಜಗಳದಲ್ಲಿ ಗನ್ ಹಾಸಿಗೆಯ ಮೇಲೆ ಬಿದ್ದಿದೆ. ಕೊನೆಗೆ ಆ ಗನ್‌ ಕಸಿದುಕೊಂಡ ಆರತಿ, ಗಂಡನ ಮೇಲೆ ಮೂರು ಬಾರಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಡ, ಹೆಂಡತಿಯ ಈ ಜಗಳದಲ್ಲಿ ಗುಂಡು ತಗುಲಿದ ಸಬ್ ಇನ್ಸ್‌ಪೆಕ್ಟರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುಂಡೇಟಿನಲ್ಲಿ ಗಾಯಗೊಂಡಿದ್ದ ಆರತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆ ಮತ್ತು ಆಕೆಯ ಮಗನ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅಪರಾಧಕ್ಕೆ ಬಳಸಲಾದ ಆಯುಧವು ನಾಡ ಪಿಸ್ತೂಲ್ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಟೈಟ್‌ ಆಗಿದ್ದ ಸಬ್ ಇನ್ಸ್‌ಪೆಕ್ಟರ್‌ಗೆ ಗುಂಡಿಕ್ಕಿ ಕೊಂದ ಪತ್ನಿ.. ಗಂಡ, ಹೆಂಡತಿ ಜಗಳ ದುರಂತದಲ್ಲಿ ಅಂತ್ಯ

https://newsfirstlive.com/wp-content/uploads/2023/09/Gun-Fire.jpg

Load More