ಮದುವೆಯಾದ 20 ದಿನಕ್ಕೆ ಪತಿಗೆ ಶಾಕ್ ಕೊಟ್ಟ ಪತ್ನಿ
2 ಲಕ್ಷ ರೂಪಾಯಿ ಕೊಟ್ಟು ಯುವತಿಯನ್ನ ಮನೆ ತುಂಬಿಸಿಕೊಂಡ್ರು
ಪತಿಯ ಬೈಕ್ ಏರಿ ಪ್ರಿಯಕನೊಂದಿಗೆ ಪರಾರಿಯಾದ ಪತ್ನಿ
ಮಹಾರಾಷ್ಟ್ರ: ಮದುವೆ ಆಗೋದು ತುಂಬಾ ಈಸಿ. ಆದರೆ ಈ ಕಾಲದಲ್ಲಿ ಮದುವೆ ಮಾಡಿಸೋದು ಅಂದ್ರೆ ತುಂಬಾ ಕಷ್ಟ. ಪೋಷಕರಂತೂ ತಮ್ಮ ಮಕ್ಕಳನ್ನು ಸಾಲ ಮಾಡಿ ಮದುವೆ ಮಾಡಿಸಿ ಕೊನೆಗೆ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ ಅದೆಷ್ಟೋ ಪ್ರಸಂಗಗಳು ಆಗಾಗ ಕೇಳಿ ಬರುತ್ತಿರುತ್ತವೆ. ಆದರೆ ಇದು ಮದುವೆ ಮಾಡಿಸಿದ 20 ದಿನಕ್ಕೆ ಗಂಡನಿಗೆ ಕೈಕೊಟ್ಟು ಪ್ರಿಯಕರನೊಂದಿಗೆ ಓಡಿ ಹೋದ ಸಂಗತಿ. ಅಚ್ಚರಿ ಎಂದರೆ ಓಡಿ ಹೋಗಲು ಗಂಡನ ಬೈಕನ್ನೇ ಬಳಸಿರೋದೆ ಇಲ್ಲಿ ವಿಚಿತ್ರ.
ಹೌದು. ಎರಡು ಲಕ್ಷ ಪಡೆದು ಮದುವೆಯಾಗಿದ್ದ ಯುವತಿ, ಜಸ್ಟ್ 20 ದಿನಕ್ಕೆ ಗಂಡನ ಬೈಕ್ ಏರಿ ಪ್ರಿಯಕರನೊಂದಿಗೆ ಪರಾರಿಯಾಗಿರೋ ವಿಚಿತ್ರ ಘಟನೆ ಮಹಾರಾಷ್ಟ್ರದ ಸಂಭಾಜಿನಗರದಲ್ಲಿ ನಡೆದಿದೆ.
ಇಲ್ಲಿನ ಪಲಾಸ್ವಾಡಿ ಗ್ರಾಮದಲ್ಲಿನ ಯುವಕನಿಗೆ ಎಷ್ಟೇ ಹುಡುಕಿದ್ರೂ ಹುಡುಗಿ ಸಿಗ್ತಿರಲಿಲ್ಲ. ಆಗ, ಮಧ್ಯವರ್ತಿಯೊಬ್ಬ ಒಂದು ಸಂಬಂಧ ಮುಂದಿಟ್ಟಿದ್ದ. ಓರ್ವ ರೈತನ ಮಗಳಿದ್ದು, ಅವರದ್ದು ಬಡ ಕುಟುಂಬ. 2 ಲಕ್ಷ ಕೊಟ್ರೆ ಮದುವೆಯಾಗ್ತಾರೆ ಎಂದಿದ್ದ.
ಇದನ್ನ ನಂಬಿದ ಹುಡುಗನ ಕುಟುಂಬ 2 ಲಕ್ಷ ರೂಪಾಯಿ ಕೊಟ್ಟು ಯುವತಿಯನ್ನ ಮನೆ ತುಂಬಿಸಿಕೊಂಡಿತ್ತು. ಹೀಗೆ ಮದುವೆಯಾದ 20 ದಿನಕ್ಕೆ ಗಂಡನ ಹೊಸ ಬೈಕ್ನ ಜೊತೆಗೆ ಪ್ರಿಯಕರನೊಂದಿಗೆ ಪತ್ನಿ ಪರಾರಿಯಾಗಿದ್ದಾಳೆ.
छत्रपती संभाजीनगर : दोन लाख देऊन नवी बायको आणली, नववधू नवी बाईक घेऊन साथीदारासोबत फरार; Video पाहून चक्रावाल pic.twitter.com/usPyA37PLx
— Maharashtra Times (@mataonline) August 20, 2023
ಯುವತಿ ಬೈಕ್ನಲ್ಲಿ ಹೋಗ್ತಿರೋ ದೃಶ್ಯ ಟೋಲ್ ಬಳಿಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. ಆದರೆ ಪ್ರಿಯಕರನೊಂದಿಗೆ ಓಡಿ ಹೋದ ಪತ್ನಿಗಾಗಿ ಪತಿ ಕಾದು ಕುಳಿತ್ತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ