ಎರಡೇ ಎರಡು ಟೊಮ್ಯಾಟೋ ತಂದಿಟ್ಟ ಕಿತಾ‘ಪತಿ’
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಟೊಮ್ಯಾಟೋ ಕಿರಿಕ್
2 ಟೊಮ್ಯಾಟೋ ಕಟ್ ಮಾಡಿದ ತಪ್ಪಿಗೆ ಗಂಡ ಹೇಳಿದ್ದೇನು?
ಭೋಪಾಲ್: ಎರಡೇ ಎರಡು ಟೊಮ್ಯಾಟೋ ಗಂಡ, ಹೆಂಡತಿ ಮಧ್ಯೆ ಜಗಳ ತಂದಿಟ್ಟಿತ್ತು. ಕರಿಗೆ ಎರಡು ಟೊಮ್ಯಾಟೋ ಕಟ್ ಮಾಡಿದ್ದಕ್ಕೆ ಮಧ್ಯಪ್ರದೇಶದ ಈ ಹೆಂಡತಿ ಮನೆ ಬಿಟ್ಟು ಹೋಗಿದ್ದಳು. ಈ ಗಂಡ, ಹೆಂಡತಿ ಟೊಮ್ಯಾಟೋ ಕಿತ್ತಾಟ ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಜಗಳ ತಂದಿಟ್ಟ ಟೊಮ್ಯಾಟೋದಿಂದಲೇ ಗಂಡ, ಹೆಂಡ್ತಿ ಜಗಳ ಸುಖಾಂತ್ಯವಾಗಿದೆ. ಅದೂ ಕೂಡ ಪೊಲೀಸರ ಮಧ್ಯಸ್ಥಿಕೆಯಲ್ಲಿ ಅನ್ನೋದು ಮತ್ತೊಂದು ವಿಶೇಷ. ಟೊಮ್ಯಾಟೋ ಜಗಳ ಬಗೆಹರಿದಿದ್ದು ಹೇಗೆ ಅನ್ನೋದಕ್ಕೆ ಈ ಸ್ಟೋರಿ ಓದಿ.
2 ಟೊಮ್ಯಾಟೋಗೆ ಮನೆ ಬಿಟ್ಟು ಹೋದ ಹೆಂಡ್ತಿಯ ಈ ಪ್ರಕರಣ ಮಧ್ಯಪ್ರದೇಶದ ಧನ್‌ಪುರಿ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಕೊನೆಗೆ ಗಂಡ ಸಂಜೀವ್ ವರ್ಮಾ, ಹೆಂಡ್ತಿ ಆರ್ತಿ ಇಬ್ಬರನ್ನು ಒಂದು ಮಾಡಲು ಪೊಲೀಸರೇ ಮಧ್ಯಸ್ಥಿಕೆವಹಿಸಿದ್ದಾರೆ. ಗಂಡ, ಹೆಂಡ್ತಿ ಇಬ್ಬರನ್ನು ಠಾಣೆಗೆ ಕರೆಸಿದ್ದ ಧನ್‌ಪುರಿ ಪೊಲೀಸರು ಪಂಚಾಯ್ತಿ ಮಾಡಿ ಜಗಳ ಸುಖಾಂತ್ಯವಾಗುವಂತೆ ಮಾಡಿದ್ದಾರೆ.
ಅರ್ಧ kg ಟೊಮ್ಯಾಟೋ ಗಿಫ್ಟ್!
ಪೊಲೀಸ್ ಠಾಣೆಯಲ್ಲಿ ಸಂಜೀವ್ ವರ್ಮಾ, ಆರ್ತಿಯ ಟೊಮ್ಯಾಟೋ ಜಗಳ ಬಗೆಹರಿದಿದೆ. 2 ಟೊಮ್ಯಾಟೋ ಕಟ್ ಮಾಡಿದ ತಪ್ಪು ಒಪ್ಪಿಕೊಂಡಿರೋ ಸಂಜೀವ್ ವರ್ಮಾ, ತನ್ನ ಪತ್ನಿಗೆ ಅರ್ಧ ಕೆಜಿ ಟೊಮ್ಯಾಟೋ ಗಿಫ್ಟ್ ಕೊಟ್ಟು ಮನವೊಲಿಸಿದ್ದಾನೆ. ಅಷ್ಟೇ ಅಲ್ಲ, ಪೊಲೀಸ್ ಠಾಣೆಯಲ್ಲಿ ಇನ್ನು ಮುಂದೆ ಹೆಂಡತಿ ಅನುಮತಿ ಇಲ್ಲದೇ ನಾನು ಟೊಮ್ಯಾಟೋ ಕತ್ತರಿಸುವುದಿಲ್ಲ. ಹೆಂಡತಿ ಹೇಳಿದಂತೆಯೇ ಅಡುಗೆ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ್ದಾನೆ. ಈ ಮೂಲಕ 2 ಟೊಮ್ಯಾಟೋಗೆ ಮನೆ ಬಿಟ್ಟು ಹೋದ ಹೆಂಡ್ತಿ ಅರ್ಧ ಕೆಜಿ ಟೊಮ್ಯಾಟೋಗೆ ವಾಪಸ್ ಬಂದು ಗಂಡ, ಹೆಂಡ್ತಿ ಜಗಳ ಕೊನೆಗೂ ಸುಖಾಂತ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ