newsfirstkannada.com

ವಿಶ್ವದ 3ನೇ ನೇತ್ರ ತಜ್ಞ ಖ್ಯಾತಿಯ ಡಾ. ಚಂದ್ರಪ್ಪ ರೇಷ್ಮೆ ಇನ್ನಿಲ್ಲ.. ಇಂದು ಚಿತ್ತಾಪುರದಲ್ಲಿ ಅಂತ್ಯಕ್ರಿಯೆ

Share :

13-08-2023

  ಕಲಬುರಗಿಯಲ್ಲಿ ವಿಶ್ವ ವಿಖ್ಯಾತ ನೇತ್ರ ತಜ್ಞ ಡಾ. ಚಂದ್ರಪ್ಪ ರೇಷ್ಮೆ ನಿಧನ

  ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಸೇರಿ ಹಲವರಿಗೆ ಯಶಸ್ವಿ ಚಿಕಿತ್ಸೆ

  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದ ಖ್ಯಾತ ವೈದ್ಯರು

ಕಲಬುರಗಿ: ವಿಶ್ವ ವಿಖ್ಯಾತ ನೇತ್ರ ತಜ್ಞ ಡಾ. ಚಂದ್ರಪ್ಪ ರೇಷ್ಮೆ (90) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಡಾ. ಚಂದ್ರಪ್ಪ ರೇಷ್ಮೆ ಅವರು ಕಲಬುರಗಿ ಜಯನಗರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಡಾ. ಚಂದ್ರಪ್ಪ ರೇಷ್ಮೆ ಅವರು ವಿಶ್ವದ ಮೂರನೇ ಬೆಸ್ಟ್ ಐ ಡಾಕ್ಟರ್ ಎಂದೇ ಪ್ರಖ್ಯಾತಿ ಪಡೆದಿದ್ದರು. ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್, ಟಾಟಾ ಸಮೂಹ ಸಂಸ್ಥೆಯ ಸಂಸ್ಥಾಪಕ ಜೆ.ಆರ್.ಡಿ ಟಾಟಾ ಸೇರಿದಂತೆ ಅನೇಕ ಗಣ್ಯರಿಗೆ ಡಾ. ಚಂದ್ರಪ್ಪ ಅವರು ನೇತ್ರ ಚಿಕಿತ್ಸೆ ಮಾಡಿದ್ದರು.

ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಜೊತೆ ಡಾ. ಚಂದ್ರಪ್ಪ ರೇಷ್ಮೆ

ಡಾ. ಚಂದ್ರಪ್ಪ ರೇಷ್ಮೆ ಅವರ ಸೇವೆ ಗಮನಿಸಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇಂದು ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಡಾ. ಸಿ.ಎಸ್ ಚಂದ್ರಪ್ಪ ಅವರ ಅಂತ್ಯಕ್ರಿಯೆ ನೇರವೇರಲಿದೆ. ವಿಶ್ವ ವಿಖ್ಯಾತ ನೇತ್ರ ತಜ್ಞ ಚಂದ್ರಪ್ಪ ರೇಷ್ಮೆ ಅವರ ನಿಧನ ಇಡೀ ತುಂಬಲಾರದ ನಷ್ಟ ತಂದಿದ್ದು, ನಾಡಿನ ಗಣ್ಯಾತಿಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಶ್ವದ 3ನೇ ನೇತ್ರ ತಜ್ಞ ಖ್ಯಾತಿಯ ಡಾ. ಚಂದ್ರಪ್ಪ ರೇಷ್ಮೆ ಇನ್ನಿಲ್ಲ.. ಇಂದು ಚಿತ್ತಾಪುರದಲ್ಲಿ ಅಂತ್ಯಕ್ರಿಯೆ

https://newsfirstlive.com/wp-content/uploads/2023/08/Chandrappa-Reshme.jpg

Load More