3 ವರ್ಷದ ಜೀಯಸ್ ಗಿನ್ನಿಸ್ ರೆಕಾರ್ಡ್‌ಗೆ ಪಾತ್ರವಾಗಿದ್ದ ಶ್ವಾನ
ಕೆಲವೇ ದಿನಗಳ ಹಿಂದೆ ಜೀಯಸ್‌ಗೆ ನ್ಯುಮೋನಿಯಾ ಕಾಯಿಲೆ
ಜೀಯಸ್ ನಿಧನಕ್ಕೆ ಕಂಬನಿ ಮಿಡಿಯುತ್ತಿರುವ ಪ್ರಾಣಿಪ್ರಿಯರು
ವಿಶ್ವದ ಅತಿ ಎತ್ತರದ ಶ್ವಾನ ಅನ್ನೋ ಖ್ಯಾತಿಗಳಿಸಿದ್ದ ಜೀಯಸ್ ಸಾವನ್ನಪ್ಪಿದೆ. 3 ವರ್ಷದ ಈ ಜೀಯಸ್ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗೂ ಪಾತ್ರವಾಗಿತ್ತು. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಜೀಯಸ್ ಇಂದು ಕೊನೆಯುಸಿರೆಳೆದಿದೆ.
ಇದನ್ನೂ ಓದಿ: ಉಗ್ರರ ವಿರುದ್ಧ ಎನ್ಕೌಂಟರ್: ಸೈನಿಕರ ರಕ್ಷಣೆಗೆ ಮುಂದಾಗಿ ಪ್ರಾಣವನ್ನೇ ಅರ್ಪಿಸಿದ ಸೇನಾ ಶ್ವಾನ
ಅತಿ ಎತ್ತರದ ಡಾಗ್ ಜೀಯಸ್ ಮೂಳೆ ಸಂಬಂಧಿತ ಕ್ಯಾನ್ಸರ್ ರೋಗಕ್ಕೆ ತುತ್ತಾಗಿತ್ತು. ಕೆಲವೇ ದಿನಗಳ ಹಿಂದೆ ಜೀಯಸ್‌ಗೆ ನ್ಯುಮೋನಿಯಾ ಕಾಯಿಲೆ ಕೂಡ ಕಾಣಿಸಿಕೊಂಡಿತ್ತು. ಬಲಗಾಲನ್ನು ಕತ್ತರಿಸುವ ಆಪರೇಷನ್ ಮಾಡಿದ ಬಳಿಕ ಜೀಯಸ್ ಸಾವನ್ನಪ್ಪಿದೆ. ಜೀಯಸ್ ಅನ್ನು 3 ವರ್ಷಗಳಿಂದ ಪ್ರೀತಿಯಿಂದ ನೋಡಿಕೊಂಡಿದ್ದ ಮಾಲೀಕರು ಸೋಷಿಯಲ್ ಮೀಡಿಯಾದಲ್ಲಿ ಈ ಸಂಗತಿಯನ್ನು ಹಂಚಿಕೊಂಡಿದ್ದು, ಪ್ರಾಣಿಪ್ರಿಯರು ಕಂಬನಿ ಮಿಡಿದಿದ್ದಾರೆ.
3 ವರ್ಷದ ಜೀಯಸ್ 2022ರಲ್ಲಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಬರೆದಿತ್ತು. ಅಂದು ಜೀಯಸ್ ಅನ್ನು ಅಳತೆ ಮಾಡಲಾಗಿತ್ತು. ತೀರ್ಪುಗಾರರ ಪ್ರಕಾರ 1.046 ಮೀ (3 ಅಡಿ 5.18 ಇಂಚು) ಎತ್ತರವನ್ನು ಹೊಂದಿತ್ತು. ಈ ಮೂಲಕ ಜೀಯಸ್ ವಿಶ್ವದ ಅತಿ ಎತ್ತರದ ಶ್ವಾನ ಅನ್ನೋ ಅವಾರ್ಡ್ ಪಡೆದಿತ್ತು. ಗ್ರೇಟ್ ಡೇನ್ ತಳಿಯ ಜೀಯಸ್ ಇಂದು ಇಹಲೋಕವನ್ನ ತ್ಯಜಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ