newsfirstkannada.com

ಸಾವಿನ ಮನೆಯನ್ನೂ ಬಿಡದ ಕಳ್ಳರು.. 7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್

Share :

06-09-2023

    ಪತ್ನಿಯ ಅಂತ್ಯಸಂಸ್ಕಾರದ ವೇಳೆ ಮನೆ ದೋಚಿದ ಕಳ್ಳರು

    ಒಂಟಿ‌ ದೀಪವನ್ನೇ ಸರಿಸಿ ಅಮಾನವೀಯ ಕೃತ್ಯ ಎಸಗಿದ್ರು

    ಗಂಡನನ್ನು ಕಳೆದುಕೊಂಡು ದುಃಖದಲ್ಲಿದ್ದ ಮಹಿಳೆಗೆ ಶಾಕ್​

ಬೆಂಗಳೂರು: ಸಾವಿನ ಮನೆ ಅಂದ್ರೆ ಅಲ್ಲಿ ದುಖಃ, ಕಣ್ಣೀರು ಆವರಿಸಿರತ್ತೆ. ತನ್ನವರನ್ನ ಕಳೆದುಕೊಂಡ ಕುಟುಂಬಸ್ಥರ ನೋವು ಮುಗಿಲುಮುಟ್ಟಿರುತ್ತೆ. ಇಂತಹ ಜಾಗಕ್ಕೆ ಹೋಗುವ ಎಲ್ಲರ ಎದೆಯೂ ಭಾರವಾಗಿರತ್ತೆ. ಆದ್ರೆ, ಕರುಣೆಯೇ ಇಲ್ಲದ್ದ ಇಲ್ಲೊಂದಿಷ್ಟು ಜನ ಸಾವಿನ ಮನೆಯನ್ನೇ ತಮ್ಮ ಬಂಡವಾಳ ಮಾಡ್ಕೊಂಡಿದ್ದಾರೆ. ಅತ್ತ ಅಂತ್ಯಸಂಸ್ಕಾರವಾಗ್ತಿದ್ರೆ ಇತ್ತ ಸಾವಿನ ದೀಪ ಸರಿಸಿ ಮನೆ ದೋಚುತ್ತಿದ್ರು ಈ ಖದೀಮರು.

ಮಾಗಡಿ ರಸ್ತೆಯ ಗೋಪಾಲಪುರ ಬಳಿಯ ಈ ಮನೆಯಲ್ಲೇ ನಡೆದಿದ್ದು ಇಂತಹದ್ದೊಂದು ದುರ್ಘಟನೆ. ಪತ್ನಿ ಶವವಾಗಿ ಮಲಗಿದ್ದಾಳೆ. ಅವಳನ್ನ ಅಂತಿಮ ಯಾತ್ರೆ ಮೂಲಕ ಕಳುಹಿಸಿಕೊಟ್ಟು ಬಾಳಿ ಬದುಕಿದ ಮನೆಗೆ ಬಂದ್ರೆ ಮತ್ತೊಂದು ಅಘಾತ. ಮನೆಯಲ್ಲಿ‌ ಕಳ್ಳತನ ವಾಗಿದೆ. ಸುಮಾರು ಏಳು ಲಕ್ಷ ಮೌಲ್ಯದ ದೇವಿಯ ಮುಖವಾಡ, ಚಿನ್ನದ ಸರ , ಕೈ ಖಡ್ಗಗಳು ಸೇರಿ ಹಲವಾರು ಚಿನ್ನಭರಣಗಳನ್ನ ಕಳ್ಳರು ಕದ್ದೋಯ್ದಿದ್ದಾರೆ.

ಒಂಟಿ‌ ದೀಪವನ್ನ ಸರಿಸಿ.. ಅಮಾನವೀಯ ಕೃತ್ಯ

ಇವ್ರು ರಾಮಾಂಜಿ.. ಈಕೆ ರಾಮಾಂಜಿ ಅವ್ರ ಪತ್ನಿ ಭಾಗ್ಯಮ್ಮ. ಇವ್ರ ಮನೆಯಲ್ಲಿಯೇ ಇಂತಹದ್ದೊಂದು ಘಟನೆ ನಡೆದಿದೆ. ಆಟೋ ಚಾಲಕರಾದ ರಾಮಾಂಜಿ ಅವರ ಪತ್ನಿ ಭಾಗ್ಯಮ್ಮ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ಮೂರು ದಿನಗಳವರೆಗೂ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದ ಬಳಿಕ‌ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಈ ದುಖಃದಲ್ಲಿದ್ದ ಕುಟುಂಬಕ್ಕೆ ಪೆಟ್ಟಿನ ಮೇಲೆ ಪೆಟ್ಟು ಎಂಬಂತೆ ಅವರ ಮನೆಯಲ್ಲಿ ಕಳ್ಳತನವಾಗಿದೆ.

ಸ್ಮಶಾನಕ್ಕೆ ಹೋಗಿ ಬರುವಷ್ಟರಲ್ಲಿ ಮನೆಯಲ್ಲಿದ್ದ ದೀಪವನ್ನೂ ಬೀಳಿಸಿ ನುಗ್ಗಿದ ಕಳ್ಳರು, ಲಾಕರ್ ಅನ್ನ ಒಡೆದು ಬಂಗಾರವನ್ನ ಕದ್ದೊಯ್ದಿದ್ದಾರೆ. ಇನ್ನು ಕುಟುಂಬಸ್ಥರ ಪ್ರಕಾರ ಆ ಮನೆಯ ಅಕ್ಕ ಪಕ್ಕದಲ್ಲಿ ಕೆಲವರು ಒರಟಾಗಿ ನಡೆದುಕೊಂಡು ಏರಿಯಾ ಜನರಿಗೆ ತೊಂದರೆ ಕೊಡ್ತಿದ್ದಾರಂತೆ. ಈಗ ಅವ್ರು ನಾಪತ್ತೆಯಾಗಿದ್ದು, ಅವ್ರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ, ಕುಟುಂಬಸ್ಥರಿಂದ ದೂರು ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಅದೇನೇ ಹೇಳಿ, ಸಾವಿನ ಮನೆಯಲ್ಲೂ ಕಳ್ಳರು ತಮ್ಮ ಕೈಚಳಕ ತೊರಿದ್ದು, ನಿಜಕ್ಕೂ ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿನ ಮನೆಯನ್ನೂ ಬಿಡದ ಕಳ್ಳರು.. 7 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್

https://newsfirstlive.com/wp-content/uploads/2023/09/Theft.jpg

Load More