newsfirstkannada.com

ಚೀಲಗಟ್ಟಲೇ ಚಿನ್ನ, ಬರೋಬ್ಬರಿ 9 ಲಕ್ಷ ನಗದು ಕದ್ದು ಪರಾರಿ; ಅನ್ನ ತಿಂದ ಮನೆಗೇ ಕನ್ನ ಹಾಕಿದ ಕಿಲಾಡಿ..!

Share :

17-11-2023

    ರಾಜಸ್ಥಾನದಿಂದ ಬಂದ ಖತರ್ನಾಕ್ ಗ್ಯಾಂಗ್​ನಿಂದ ಕಳ್ಳತನ

    ಅಕ್ಟೋಬರ್ 29 ರಂದು ಕಳ್ಳತನ ಮಾಡಿ ಗ್ಯಾಂಗ್ ಪರಾರಿ

    ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬೆಂಗಳೂರು: ರಾಜಸ್ಥಾನದಿಂದ ಬಂದ ಖತರ್ನಾಕ್ ಗ್ಯಾಂಗ್ ಒಂದು ಭಾರೀ ಕಳ್ಳತನ ನಡೆದಿರುವ ಪ್ರಕರಣ ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿದೆ. ಚಿನ್ನದ ವ್ಯಾಪಾರಿ ಮನೆಗೆ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡವನ ವಿರುದ್ಧ ಕಳ್ಳತನ ಮಾಡಿದ ಆರೋಪ ಕೇಳಿಬಂದಿದೆ.

ಆರೋಪಗಳ ಪ್ರಕಾರ, ಅಕ್ಟೋಬರ್ 29 ರಂದು ಒಂದಲ್ಲಾ.. ಎರಡಲ್ಲಾ.. ಬರೋಬ್ಬರಿ 4 ಚೀಲದಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿದೆ. ಅವುಗಳ ಒಟ್ಟು ಮೌಲ್ಯ 4 ಕೆಜಿ ಚಿನ್ನ ಹಾಗೂ 9 ಲಕ್ಷ ನಗದು ದೋಚಿ ಪರಾರಿ ಆಗಿದ್ದಾರೆ.

ಚಿನ್ನಾಭರಣ ಯಾರಿಗೆ ಸೇರಿದ್ದು..?

ಕಳ್ಳತನವಾಗಿರುವ ಹಣ ಮತ್ತು ಚಿನ್ನಾಭರಣ ಅರವಿಂದ್ ಕುಮಾರ್ ತಾಡೆ ಅನ್ನೋರಿಗೆ ಸೇರಿದೆ. ಅರವಿಂದ್ ಕುಮಾರ್ ತಾಡೆ ಅಂಗಡಿಯಲ್ಲಿ ಕೆಲಸಕ್ಕೆ ಎಂದು ಕಳೆದ ಎರಡು ತಿಂಗಳ ಕೇತರಾಮ್ ಎಂಬ ವ್ಯಕ್ತಿ ಸೇರಿದ್ದ. ಮಾಲೀಕ ಮನೆಯಲ್ಲಿ ಒಳ್ಳೆಯವನ ರೀತಿಯಲ್ಲಿ ನಟಿಸಿ ಆತನ ಆರ್ಥಿಕ ವ್ಯವಹಾರಗಳ ಬಗ್ಗೆ ಅರಿತುಕೊಂಡಿದ್ದ ಎನ್ನಲಾಗಿದೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಮಾಲೀಕ ಅರವಿಂದ್ ಮುಂಬೈಗೆ ತೆರಳಿದ್ದ. ಈ ಸಂದರ್ಭದಲ್ಲಿ ಕೇತರಾಮ್ ಅಂಡ್ ಗ್ಯಾಂಡ್ ಚಿನ್ನಾಭರಣ ಕದಿಯಲು ಮಾಸ್ಟರ್ ಮೈಂಡ್ ಮಾಡಿದೆ. ತನ್ನದೇ ಊರಿನ ರಾಕೇಶ್ ಎಂಬಾತನ ಕರೆಸಿಕೊಂಡಿದ್ದ ಕೇತರಾಮ್, ಮಾಲೀಕ ಮುಂಬೈಗೆ ತೆಗೆದುಕೊಂಡು ಹೋಗುತ್ತಿದ್ದ ಬ್ಯಾಗ್ ನಲ್ಲಿದ್ದ ಕೀಯನ್ನು ಕಳ್ಳತನ ಮಾಡಿದ್ದರು.

ಕೀ ಕಳ್ಳತನ ಮಾಡಿದ ಆರೋಪಿಗಳು ಅಂಗಡಿಗೆ ಎಂಟ್ರಿ ಕೊಟ್ಟಿದ್ದಾರೆ. ಅಂಗಡಿಯಲ್ಲಿದ್ದ 4 ಕೆಜಿ ಚಿನ್ನ, 34 ಕೆಜಿ ಬೆಳ್ಳಿ ಹಾಗೂ 9 ಲಕ್ಷ ನಗದು ಹಣವನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೀಲಗಟ್ಟಲೇ ಚಿನ್ನ, ಬರೋಬ್ಬರಿ 9 ಲಕ್ಷ ನಗದು ಕದ್ದು ಪರಾರಿ; ಅನ್ನ ತಿಂದ ಮನೆಗೇ ಕನ್ನ ಹಾಕಿದ ಕಿಲಾಡಿ..!

https://newsfirstlive.com/wp-content/uploads/2023/11/GOLD-2-1.jpg

Load More