newsfirstkannada.com

ಡಿಕೆಶಿ CM ಆಗಲಿಲ್ಲ, ಸಿದ್ದು ಆಪ್ತರ ಕಾಟ ತಡೆಯಕಾಗ್ತಿಲ್ಲ; DK ಸುರೇಶ್​​​ ರಾಜಕೀಯ ನಿವೃತ್ತಿ ಮಾತಿನ ಹಿಂದಿವೆ 3 ಕಾರಣ!

Share :

18-06-2023

  ಅಣ್ಣ ಡಿಕೆ ಶಿವಕುಮಾರ್ ಸಿಎಂ ಆಗೋ ಮಹದಾಸೆ ಈಡೇರಲಿಲ್ಲ

  ಸಿದ್ದರಾಮಯ್ಯ ಬೆಂಬಲಿಗ ಸಚಿವರ ಹೇಳಿಕೆಗಳಿಗೆ ಸುರೇಶ್ ಕೆಂಡ

  ಹೈಕಮಾಂಡ್ ಎಂಟ್ರಿಗೆ ರಾಜಕೀಯ ನಿವೃತ್ತಿ, ವೈರಾಗ್ಯದ ಮಾತು?

ಬೆಂಗಳೂರು: ರಾಜ್ಯದ ಏಕೈಕ ಕಾಂಗ್ರೆಸ್‌ ಸಂಸದ ಡಿ.ಕೆ ಸುರೇಶ್ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲ್ವಾ. ಡಿಸಿಎಂ ಡಿ.ಕೆ ಶಿವಕುಮಾರ್ ಸಹೋದರ ರಾಜಕೀಯ ನಿವೃತ್ತಿ ಘೋಷಿಸೋದು ಪಕ್ಕಾನಾ. ಇತ್ತೀಚೆಗೆ ಈ ಎರಡು ಪ್ರಶ್ನೆ ಕಾಂಗ್ರೆಸ್ ಪಾಳಯದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿದೆ. ಡಿ.ಕೆ ಸುರೇಶ್ ಮಾತುಗಳ ಹಿಂದಿನ ಮರ್ಮವೇ ಬೇರೆ ಅನ್ನೋ ಲೆಕ್ಕಾಚಾರವೂ ಇದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಡಿ.ಕೆ ಸುರೇಶ್ ಅವರು ಪದೆ ಪದೇ ನನಗೆ ರಾಜಕೀಯ ಸಾಕಾಗಿದೆ ಅನ್ನೋ ಮೂಲಕ ವೈರಾಗ್ಯದ ಮಾತನಾಡ್ತಿದ್ದಾರೆ. ನೇರವಾಗಿ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರುತ್ತಿದ್ದಾರೆ. ಡಿ.ಕೆ ಸುರೇಶ್ ಅವರು ರಾಜಕೀಯದಿಂದ ದೂರಾಗುವ ಮಾತಾಡ್ತಿರೋದೇಕೆ ಅನ್ನೋದೇ ಕುತೂಹಲಕಾರಿಯಾಗಿದೆ.

 • ಅಣ್ಣ ಸಿಎಂ ಆಗೋ ಮಹದಾಸೆ ಈಡೇರಲಿಲ್ಲ

ಎಲೆಕ್ಷನ್ ರಿಸಲ್ಟ್ ಹೊರ ಬಂದ ಬಳಿಕ ಸಂಸದ ಡಿ.ಕೆ ಸುರೇಶ್ ಅವರು ಅಣ್ಣನ ಮಹದಾಸೆ ಈಡೇರಿಸಲು ದೆಹಲಿಯಲ್ಲಿ ಬಹಳಷ್ಟು ಕಸರತ್ತು ನಡೆಸಿದ್ರು. ಡಿ.ಕೆ ಶಿವಕುಮಾರ್ ಅವರಿಗೆ ಸಿಎಂ ಪಟ್ಟ ಕಟ್ಟಲು ಸಾಕಷ್ಟು ಸರ್ಕಸ್ ಮಾಡಿದ್ರು. ಆದ್ರೆ ಅದು ಸದ್ಯಕ್ಕೆ ಸಾಧ್ಯವಾಗಿಲ್ಲ. ಇದಾದ ಮೇಲೆ ಮಾತನಾಡಿದ್ದ ಡಿ.ಕೆ ಸುರೇಶ್ ಅವರು ಕೂಲಿ ಮಾಡಿದ್ದೇವೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ರು. ಇದು ಕೂಡ ಡಿ.ಕೆ ಸುರೇಶ್ ಅವರ ಬೇಸರಕ್ಕೆ ಪ್ರಮುಖವಾದ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಆಪ್ತ ‘ಸಚಿವ ಮಹಾದೇವಪ್ಪಗೆ ಕೆಲಸ ಮಾಡೋ ಬದಲು ಬೇರೆಯದೇ ಆಸಕ್ತಿ ಇದೆ’- ಸಂಸದ ಡಿ.ಕೆ ಸುರೇಶ್

 • ಸಿದ್ದರಾಮಯ್ಯ ಬೆಂಬಲಿಗ ಸಚಿವರ ಪ್ರಸ್ತಾಪ

ಇದಾದ ಮೇಲೆ ಸಿಎಂ ಸಿದ್ದರಾಮಯ್ಯ ಬೆಂಬಲಿಗ ಸಚಿವರು ಸಿದ್ದರಾಮಯ್ಯನವರೇ ಪೂರ್ಣಾವಧಿಯ ಮುಖ್ಯಮಂತ್ರಿ ಎಂದು ಪ್ರಸ್ತಾಪ ಮಾಡಿದ್ದನ್ನು ಡಿಕೆ ಸುರೇಶ್ ಅವರು ಖಂಡಿಸಿದ್ದರು. ಪೂರ್ಣಾವಧಿ ಸಿಎಂ ಚರ್ಚೆಗೆ ಬ್ರೇಕ್‌ ಹಾಕಲು ರಾಜಕೀಯ ಸಾಕಾಗಿದೆ ಎಂದ್ರಾ ಸುರೇಶ್? ಸಿದ್ದರಾಮಯ್ಯ ಬೆಂಬಲಿಗ ಸಚಿವರ ಹೇಳಿಕೆಗೆ ಹೈಕಮಾಂಡ್ ಮೌನವಾಗಿರೋದು ಡಿಕೆ ಸುರೇಶ್ ಬೇಜಾರಾಗಿ ಕಾರಣವಿರಬಹುದು.

 • ಹೈಕಮಾಂಡ್ ಎಂಟ್ರಿಗೆ ರಾಜಕೀಯ ನಿವೃತ್ತಿ ಮಾತು

ರಾಜ್ಯದ ಏಕೈಕ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದ್ರೆ, ಇತರೆ ಲೋಕಸಭಾ ಕ್ಷೇತ್ರಗಳಿಗೆ ಬೇರೆಯದ್ದೇ ಸಂದೇಶ ರವಾನೆಯಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ಸುರೇಶ್ ಸ್ಪರ್ಧೆ ಮಾಡದಿದ್ರೆ ಇತರೆ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನ ಮೇಲೆ ಪರಿಣಾಮ ಬೀರೋ ಸಾಧ್ಯತೆಯಿದೆ. ಹೀಗಾಗಿ ಹೈಕಮಾಂಡ್ ಮಧ್ಯಪ್ರವೇಶಕ್ಕೆ ರಾಜಕೀಯ ವೈರಾಗ್ಯದ ಅಸ್ತ್ರ ಪ್ರಯೋಗಿಸಿದ್ರಾ ಸುರೇಶ್ ಅನ್ನೋ ಚರ್ಚೆಗಳು ನಡೆದಿದೆ. ಹೈಕಮಾಂಡ್ ಎಂಟ್ರಿಗೆ ರಾಜಕೀಯ ವೈರಾಗ್ಯದ ಮಾತಾಡಿದ್ರೆ ಸಂಸದ ಸುರೇಶ್ ಅವರನ್ನು ದೆಹಲಿಯ ನಾಯಕರು ಕರೆಸಿಕೊಂಡು ಮಾತುಕತೆ ನಡೆಸುವ ಸಾಧ್ಯತೆಗಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಡಿಕೆಶಿ CM ಆಗಲಿಲ್ಲ, ಸಿದ್ದು ಆಪ್ತರ ಕಾಟ ತಡೆಯಕಾಗ್ತಿಲ್ಲ; DK ಸುರೇಶ್​​​ ರಾಜಕೀಯ ನಿವೃತ್ತಿ ಮಾತಿನ ಹಿಂದಿವೆ 3 ಕಾರಣ!

https://newsfirstlive.com/wp-content/uploads/2023/06/DK-Suresh1.jpg

Load More