newsfirstkannada.com

ದರ್ಶನ್‌, ಪವಿತ್ರಾ ನಡುವೆ ಮಹಾ ಬಿರುಕು.. ಮಾತಿಲ್ಲ, ಕಥೆ ಇಲ್ಲ? ವಿಜಯಲಕ್ಷ್ಮಿ ಹಾಕಿದ ಷರತ್ತಿಗೆ ಸೈಲೆಂಟ್‌!

Share :

Published August 23, 2024 at 10:39pm

    ಜೈಲಲ್ಲಿ ಇದೆ ಭೇಟಿಗೆ ಅವಕಾಶ.. ಆದ್ರೂ ಇಬ್ಬರೂ ದೂರ-ದೂರ!

    ವಿಡಿಯೋ ಕಾನ್ಫರೆನ್ಸ್‌ ರೂಮ್‌ನಲ್ಲಿ ಮುಖಾಮುಖಿಯಾದ್ರೂ ಮಾತಾಡಿಲ್ಲ

    ದರ್ಶನ್, ಪವಿತ್ರಾ ಗೌಡ ಇಬ್ಬರ 10 ವರ್ಷದ ಬಂಧನ ಅಂತ್ಯವಾಯ್ತಾ?

ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್‌ ಮಾಡ್ತಾರೆ. ಪಟ್ಟಣಗೆರೆ ಶೆಡ್‌ಗೆ ಕರ್ಕೊಂಡ್‌ ಹೋಗ್ತಾರೆ. ಅಲ್ಲಿ ಮನಸೋ ಇಚ್ಛೆ ಹಲ್ಲೆ ನಡೆಸಿ ಹತ್ಯೆ ಮಾಡ್ತಾರೆ ಅಂದ್ರೆ ಅದಕ್ಕೆ ಕಾರಣ. ದರ್ಶನ್‌ ಮತ್ತು ಪವಿತ್ರಾ ಗೌಡ ನಡುವಿನ ಸ್ನೇಹ ಅಂದ್ರೆ ತಪ್ಪಾಗದು. ತಮ್ಮ ಗೆಳತಿ ಪವಿತ್ರಾಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್‌ ಮಾಡಿದ್ದಾರೆ ಅನ್ನೋ ಉದ್ದೇಶಕ್ಕೆ ಹತ್ಯೆ ಮಾಡಲಾಗಿದೆ ಅನ್ನೋ ಆರೋಪವಿದೆ. ಈ ನಡುವೆ, ದರ್ಶನ್‌ ಮತ್ತು ಪವಿತ್ರಾ ಗೌಡ ದೂರ ದೂರವಾಗಿದ್ದಾರೆ. ತಮ್ಮ ನಡುವೆ 10 ವರ್ಷದ ಬಂಧನಕ್ಕೆ ಎಳ್ಳು ನೀರು ಬಿಟ್ಟಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಆ ಎಳ್ಳುನೀರಿಗೆ ಕಾರಣ, ಅದೊಂದು ಅವಕಾಶ ಇದ್ರೂ ಇಬ್ಬರು ಭೇಟಿಯಾಗದೇ ಇರೋದು.

ದರ್ಶನ್‌-ಪವಿತ್ರಾ ನಡುವೆ ಮಹಾ ಬಿರುಕು… ಮಾತಿಲ್ಲ ಕಥೆ ಇಲ್ಲ?
ದರ್ಶನ್‌ ಮತ್ತು ಪವಿತ್ರಾ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ, ಸ್ಥಳ ಮಹಜರಿಗೆ ಕರೆದುಕೊಂಡು ಹೋಗುವಾಗ ಇಬ್ಬರು ಮಾತಾಡಿಕೊಳ್ತಿದ್ರು. ಪಟ್ಟಣಗೆರೆ ಶೆಡ್‌ನಲ್ಲಿ ಆ ದೃಶ್ಯಗಳು ಸೆರೆ ಕೂಡ ಆಗಿತ್ತು. ಆದ್ರೆ, ಅದ್ಯಾವಾಗ ಜೈಲು ಸೇರಿದ್ರೋ? ಅವಾಗ್ಲೇ ಇಬ್ಬರು ನಾನೊಂದು ತೀರ ನೀನೊಂದು ತೀರ ಅನ್ನೋ ಹಾಗಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಕಾರಣ, ಜೈಲಲ್ಲಿ ಭೇಟಿಯಾಗಿ ಮಾತಾಡಲು ಅವಕಾಶವಿದ್ರೂ ದರ್ಶನ್‌ ಮತ್ತು ಪವಿತ್ರಾ ಗೌಡ ಭೇಟಿಯಾಗುತ್ತಿಲ್ಲ, ಮಾತುಕತೆಯನ್ನು ಮಾಡುತ್ತಿಲ್ಲ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಸ್ಫೋಟಕ ಟ್ವಿಸ್ಟ್‌.. ದರ್ಶನ್​ A1 ಮಾಡ್ತಿರೋದೇಕೆ? ಅಸಲಿ ರಹಸ್ಯ ಇಲ್ಲಿದೆ! 

ಸಾಮಾನ್ಯವಾಗಿ ಒಂದೇ ಕೇಸ್‌ನಲ್ಲಿ ಜೈಲು ಸೇರಿದ್ರೆ, ಅವರೆಲ್ಲ ಒಂದೇ ಜೈಲಲ್ಲಿ ಇದ್ರೆ ಸಹಕೈದಿಗಳನ್ನು ಭೇಟಿಯಾಗಲು ವಾರದಲ್ಲಿ ಒಂದು ದಿನ ಕಾಲಾವಕಾಶವಿರುತ್ತೆ. ಅದನ್ನು ಜೈಲಾಧಿಕಾರಿಗಳ ಒಪ್ಪಿಗೆ ಪಡ್ಕೊಂಡ್‌ ಭೇಟಿಯಾಗಿ ಮಾತಾಡ್ಬಹುದು. ಯೋಗ ಕ್ಷೇಮ ವಿಚಾರಿಸ್ಕೊಳ್ಳಬಹುದು. ಆದ್ರೆ, ದರ್ಶನ್‌ ಮತ್ತು ಪವಿತ್ರಾ ಭೇಟಿ ಮಾಡ್ತಿಲ್ಲ.

ಜೈಲಲ್ಲಿ ಇಬ್ಬರು ಭೇಟಿ ಮಾಡ್ತಿಲ್ಲ, ವಿಚಾರಣೆಗೆ ವಿಡಿಯೋ ಕಾನ್ಫರೆನ್ಸ್‌ ರೂಮ್‌ನಲ್ಲಿ ಮುಖಾಮುಖಿಯಾದ್ರೂ ದರ್ಶನ್‌ ಮಾತಾಡಿಲ್ಲ ಅನ್ನೋ ಸುದ್ದಿ ಮೊದಲೇ ಸ್ಫೋಟವಾಗಿತ್ತು. ಅದರ ಬೆನ್ನಲ್ಲಿಯೇ ಪವಿತ್ರಾ ಗೌಡ ಇದೇ ವಿಚಾರವನ್ನು ಹೇಳ್ಕೊಂಡ್‌ ತನ್ನ ತಾಯಿ ಬಳಿ ಕಣ್ಣೀರು ಹಾಕಿದ್ರು. ತಮ್ಮನ್ನು ನೋಡಲು ಬಂದಿದ್ದ ಗೆಳತಿಯ ಜೊತೆಗೂ ಇದೇ ವಿಚಾರ ಹೇಳ್ಕೊಂಡ್‌ ಕಣ್ಣೀರು ಹಾಕಿದ್ರಂತೆ.

ಇದನ್ನೂ ಓದಿ: ದರ್ಶನ್​ಗೆ ಮತ್ತಷ್ಟು ಸಂಕಷ್ಟ, ಮೊಬೈಲ್​ ರಿಟ್ರೀವ್​.. ಫೋನ್​​ನಲ್ಲಿ ಸಿಕ್ಕ ಆ 4 ಸತ್ಯಗಳೇನು?

ಇದರಲ್ಲಿ ತನ್ನ ತಪ್ಪು ಏನಿದೆ ಅನ್ನೋ ಪ್ರಶ್ನೆಯನ್ನು ಮಾಡಿದ್ರಂತೆ. ಇದೀಗ ಇಬ್ಬರು ಬೇರೆ ಬೇರೆ ವಕೀಲರನ್ನು ನೇಮಿಸ್ಕೊಂಡಿದ್ದಾರೆ. ಅಂದ್ರೆ ಕಾನೂನು ಹೋರಾಟಕ್ಕೆ ಬೇರೆ ಬೇರೆ ಹಾದಿಗಳನ್ನು ಕಂಡುಕೊಂಡಿದ್ದಾರೆ. ಜೈಲಲ್ಲಿ ಭೇಟಿ ಮಾಡೋ ಅವಕಾಶ ಇದ್ರೂ ಭೇಟಿಯಾಗ್ತಿಲ್ಲ.

ದರ್ಶನ್‌ ಪವಿತ್ರಾ ಭೇಟಿಯಾಗ್ತಿಲ್ಲ, ದರ್ಶನ್‌ ಗ್ಯಾಂಗ್‌ನಲ್ಲಿರೋರು ಪ್ರತ್ಯೇಕವಾಗಿ ಬೇಲ್‌ ಮೊರೆ ಹೋಗಿದ್ದಾರೆ. ಇದೆಲ್ಲವನ್ನು ನೋಡ್ತಿದ್ರೆ ಡಿ ಗ್ಯಾಂಗ್‌ ಛಿದ್ರ ಛಿದ್ರವಾಗಿದ್ದು ಗ್ಯಾರಂಟಿ. ಜೈಲಿಗೆ ಸೇರೋದಕ್ಕೂ ಮುನ್ನ ದರ್ಶನ್‌ಗಾಗಿ ತಾವ್‌ ಏನ್‌ ಮಾಡೋದಕ್ಕೂ ಸಿದ್ದ ಅಂತಾ ಗ್ಯಾಂಗ್‌ ಇತ್ತು. ಹಾಗೆ ಪವಿತ್ರಾಗಾಗಿ ಯಾವ್‌ ಅಗ್ನಿ ಪರೀಕ್ಷೆ ಎದುರಿಸಲು ಸಿದ್ಧ ಅಂತಾ ದರ್ಶನ್‌ ನಿಂತುಕೊಂಡಿದ್ರು. ಬಟ್, ಅದ್ಯಾವಾಗ ಜೈಲು ಸೇರಿದ್ರೋ? ಕಂಬಿ ಹಿಂದೆ ನಿಂತುಕೊಂಡ್ರೋ? ಅವಾಗ್ಲೇ ಒಬ್ಬರ ಮೇಲೆ ಮತ್ತೊಬ್ಬರಿಗೆ ಅಸಮಾಧಾನ ಹುಟ್ಟಿಕೊಳ್ಳಲು ಶುರುವಾಗಿದೆ.

ಇದನ್ನೂ ಓದಿ: ಕ್ಲೈಮ್ಯಾಕ್ಸ್‌ನಲ್ಲಿದೆ ರೋಚಕ ಟ್ವಿಸ್ಟ್‌.. ಪಟ್ಟಣಗೆರೆ ಶೆಡ್‌ ಚಕ್ರವ್ಯೂಹದಲ್ಲೇ ನಟ ದರ್ಶನ್‌ & ಗ್ಯಾಂಗ್‌ ಲಾಕ್‌? 

ಪವಿತ್ರಾ ಗೌಡಳಿಂದಾಗಿಯೇ ತಾನು ಜೈಲು ಸೇರುವಂತಾಯ್ತು ಅನ್ನೋದ್‌ ದರ್ಶನ್‌ ಭಾವನೆಯಾಗಿದ್ರೆ, ದರ್ಶನ್‌ ದುಡುಕಿನ ನಿರ್ಧಾರದಿಂದ ಇಂಥಾ ಸ್ಥಿತಿ ಬಂತು ಅನ್ನೋದ್‌ ಪವಿತ್ರಾ ಗೌಡ ಭಾವನೆ. ದರ್ಶನ್‌ಗೆ ತನ್ನ ಶಿಷ್ಯರ ಅಚಾತುರ್ಯದಿಂದ ಜೈಲು ಅನುಭವಿಸ್ಬೇಕಾಯ್ತು ಅನ್ನೋದು. ಹಾಗೇ ಶಿಷ್ಯರಿಗೆ ದರ್ಶನ್‌ಗಾಗಿ ತಾವು ಹೋಗಿ ತಗ್ಲಾಕಿಕೊಂಡಿದ್ದೇವೆ ಅನ್ನೋದು. ಈ ರೀತಿಯಾಗಿದ್ದ ಡಿಗ್ಯಾಂಗ್‌ನಲ್ಲಿಯೇ ಒಬ್ಬರಿಂದ ಮತ್ತೊಬ್ಬರ ಮೇಲೆ ಅಪನಂಬಿಕೆ ಕಾಣಿಸ್ಕೊಂಡಿದೆ. ಇದೇ ಕಾರಣಕ್ಕೆ ಇಡೀ ಗ್ಯಾಂಗ್‌ ಛಿದ್ರ ಛಿದ್ರವಾಗಿದೆ.

ಪವಿತ್ರಾಳನ್ನು ದರ್ಶನ್‌ ಬಿಡ್ಬೇಕು ಅಂತಾ ಸಭೆ ನಡೆದಿತ್ತಾ?
ದರ್ಶನ್‌ಗೆ ಹಾಕಿದ್ದ ಷರತ್ತೇನು? ಅದ್ಕೆ ದರ್ಶನ್‌ ದೂರವಾದ್ರಾ?
ಜೈಲಲ್ಲಿರೋ ದರ್ಶನ್‌ ಅನ್ನು ಸಿನಿಮಾ ತಾರೆಯರು ಭೇಟಿಯಾಗ್ತಿದ್ದಾರೆ. ಹೊರಗೆ ಬಂದು ದರ್ಶನ್ ಅನ್ನು ಇಂಥಾ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗ್ತಿಲ್ಲ ಅಂತಾ ಕಣ್ಣೀರು ಹಾಕ್ತಿದ್ದಾರೆ. ಆದ್ರೆ, ದರ್ಶನ್‌ ಜೈಲಿಗೆ ಹೋಗ್ತಾ ಇದ್ದಂತೆ ಮೊದಲು ದುಃಖ ಪಟ್ಟಿದ್ದು ಜೈಲಿಗೆ ಓಡೋಡಿ ಹೋಗಿದ್ದು ಕುಟುಂಬಸ್ಥರು. ಅದ್ರಲ್ಲಿಯೂ ಧರ್ಮಪತ್ನಿ ವಿಜಯಲಕ್ಷ್ಮಿ ಅನೇಕ ಬಾರಿ ಜೈಲಿಗೆ ಹೋಗಿ ದರ್ಶನ್‌ ಭೇಟಿಯಾಗಿ ಬಂದಿದ್ದಾರೆ. ಕಾನೂನು ಹೋರಾಟದ ಚರ್ಚೆ ನಡ್ಸಿದ್ದಾರೆ. ಹಾಗೇ ದರ್ಶನ್‌ಗೆ ಒಂದು ಷರತ್ತು ಹಾಕಲಾಗಿದೆ ಅಂತೆ. ಆ ಷರತ್ತು ರೆಡಿಯಾಗಿದ್ದು ದರ್ಶನ್‌ಗೆ ಆಪ್ತರಾಗಿರೋ ಒಬ್ಬ ರಾಜಕಾರಣಿಯ ಮನೆಯಲ್ಲಿ ಅಂತಾ ಹೇಳಲಾಗ್ತಿದೆ.

ಆಪ್ತರ ಮನೆಯಲ್ಲಿ ನಡೆದ ಸಭೆಯಲ್ಲಿ ದರ್ಶನ್‌ ಕುಟುಂಬಸ್ಥರು, ಸ್ನೇಹಿತರು ಇದ್ದರಂತೆ. ಆ ಸಂದರ್ಭದಲ್ಲಿ ದರ್ಶನ್‌ ಪರ ಕಾನೂನು ಹೋರಾಟ ಮಾಡ್ಬೇಕು ಅಂತಾದ್ರೆ, ಪವಿತ್ರಾ ಗೌಡ ಇಂದ ದರ್ಶನ್‌ ದೂರವಾಗ್ಬೇಕು ಅನ್ನೋದಂತೆ. ಅಂತಹದೊಂದು ಷರತ್ತಿಗೆ ದರ್ಶನ್‌ ಒಪ್ಪಿದ್ರೆ ಮಾತ್ರ ಚಾಣಾಕ್ಷ್ಯ ವಕೀಲರನ್ನು ಭೇಟಿ ಮಾಡಿ ಕಾನೂನು ಹೋರಾಟ ಮಾಡೋ ತೀರ್ಮಾನ ಆಗಿದೆ ಅಂತೆ. ಇದನ್ನು ಜೈಲಲ್ಲಿರೋ ದರ್ಶನ್‌ಗೆ ಮೆಸೇಜ್‌ ಮುಟ್ಟಿಸಲಾಗಿದೆ. ಇನ್ನು ಇದನ್ನು ಕೇಳಿದ ದರ್ಶನ್‌ ಆಯ್ತು ತಾನು ಪವಿತ್ರಾ ಇಂದ ದೂರವಾಗ್ತೀನಿ, ಕಾನೂನು ಹೋರಾಟದ ನೆರವು ನೀಡಿ ಅಂತಾ ಭರವಸೆ ಕೊಟ್ಟಿದ್ದಾರಂತೆ. ಬಹುಶಃ ಇದೇ ಕಾರಣಕ್ಕೆ ಜೈಲಲ್ಲಿ ವಾರಕ್ಕೊಮ್ಮೆ ಭೇಟಿಯಾಗೋ ಅವಕಾಶ ಇದ್ರೂ ಪವಿತ್ರಾ ಗೌಡ ಅನ್ನು ಭೇಟಿಯಾಗದೇ ದರ್ಶನ್‌ ದೂರವಾದಂತೆ ಕಾಣಿಸುತ್ತಿದೆ.

ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್‌ ಅಂಡ್‌ ಗ್ಯಾಂಗ್‌ ಆರೋಪಿಗಳ ಸ್ಥಾನದಲ್ಲಿದ್ದಾರೆ. ಅವ್ರು ತಪ್ಪು ಮಾಡಿದ್ದಾರೋ ಇಲ್ವೋ ಅನ್ನೋದನ್ನು ಕೋರ್ಟ್‌ ತೀರ್ಮಾನ ಮಾಡುತ್ತೆ. ಆದ್ರೆ, ಕಾನೂನಿನ ಮುಂದೆ ಅದೆಷ್ಟೇ ಪ್ರಭಾವಿಯಾಗಿದ್ರೂ? ಸ್ಟಾರ್‌ ಆಗಿದ್ರೂ ತಲೆ ತಗ್ಗಿಸ್ಬೇಕು ಅನ್ನೋದನ್ನು ಈ ಕೇಸ್‌ ಸಾರಿ ಸಾರಿ ಹೇಳುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌, ಪವಿತ್ರಾ ನಡುವೆ ಮಹಾ ಬಿರುಕು.. ಮಾತಿಲ್ಲ, ಕಥೆ ಇಲ್ಲ? ವಿಜಯಲಕ್ಷ್ಮಿ ಹಾಕಿದ ಷರತ್ತಿಗೆ ಸೈಲೆಂಟ್‌!

https://newsfirstlive.com/wp-content/uploads/2024/08/Darshan-Pavithra-gowda.jpg

Load More