newsfirstkannada.com

ದಿ ಓವಲ್​ ಮೈದಾನಕ್ಕೂ ಟೀಂ ಇಂಡಿಯಾಗೂ ಇದೆ ನಂಟು! ಅದೇನು ಗೊತ್ತಾ?

Share :

06-06-2023

  ಬಿಗ್​ ಬ್ಯಾಟಲ್​​ಗೆ ರೆಡಿಯಾಗಿದೆ ಓವಲ್​ ಮೈದಾನ

  ಚಾಂಪಿಯನ್​ ಆಗೋದೊಂದೆ ಉಭಯ ತಂಡಗಳ ಗುರಿ

  ಈ ಪ್ಲೇಯರ್​ಗೆ ಓವರ್​ ಮೈದಾನ ಅಂದ್ರೆ ಅಚ್ಚುಮೆಚ್ಚು

ಟೆಸ್ಟ್​ ಫೈಟ್​ಗೆ ವೇದಿಕೆ ಸಜ್ಜಾಗಿದೆ. ಲಂಡನ್​ ಕೆನ್ನಿಂಗ್ಟನ್​ ಓವಲ್​ ಮೈದಾನ ಬಿಗ್​ ಬ್ಯಾಟಲ್​​ಗೆ ರೆಡಿಯಾಗಿದ್ದು, ವಿಶ್ವ ಕ್ರಿಕೆಟ್​​​ ಮದಗಜಗಳ ನಡುವಿನ ಕಾದಾಟಕ್ಕೆ ಕಾದು ಕುಳಿತಿದೆ. ತಂಡಗಳ ಬಲಾಬಲಗಳು, ವಿನ್ನಿಂಗ್​ ಪ್ರಿಡಿಕ್ಷನ್​ಗಳು ಜೋರಾಗಿವೆ. ಈ ಎಲ್ಲಾ ಅಬ್ಬರದ ಮಧ್ಯೆ ದಿ ಓವಲ್​ ಮೈದಾನ ರೋಚಕ ಕಥೆಯೊಂದನ್ನ ಹೇಳ್ತಿದೆ. ಆ ಕುತೂಹಲಕಾರಿ ಕಥೆ, ನಿಮ್ಮನ್ನೂ ಫುಲ್​ ಖುಷ್​​ ಮಾಡಲಿದೆ.

ವಿಶ್ವ ಟೆಸ್ಟ್​​ ಚಾಂಪಿಯನ್​ ಶಿಪ್​ ಫೈನಲ್​ ಫೈಟ್​ಗೆ ಇನ್ನೊಂದೆ ದಿನ ಬಾಕಿ. ಕ್ರಿಕೆಟ್​​​ ಜಗತ್ತಿನ ಮದಗಜಗಳ ಕಾದಾಟಕ್ಕೆ ಕ್ರಿಕೆಟ್​ ಲೋಕ ಕಾದು ಕುಳಿತಿದೆ. ಅಲ್ಟಿಮೇಟ್​ ಫೈಟ್​​​ನಲ್ಲಿ ಗೆದ್ದು ಬೀಗಲು ಇಂಡೋ – ಆಸಿಸ್​ ಭರ್ಜರಿ ತಯಾರಿ ನಡೆಸಿವೆ. ವಿಶ್ವ ಚಾಂಪಿಯನ್​ ಆಗೋದೊಂದೆ ಉಭಯ ತಂಡಗಳ ಗುರಿಯಾಗಿದ್ದು, ತಂತ್ರ – ರಣತಂತ್ರಗಳನ್ನ ಹೆಣೆಯೋದ್ರಲ್ಲಿ ಬ್ಯುಸಿಯಾಗಿವೆ.

ಫೈನಲ್​ ಫೈಟ್​​ ಇಂಗ್ಲೆಂಡ್​ನಲ್ಲಿ ನಡೀತಾ ಇರೋದು ಆಸ್ಟ್ರೇಲಿಯಾ ಅಡ್ವಾಂಟೇಜ್​ ಅನ್ನೋದು ಕ್ರಿಕೆಟ್​ ಲೋಕದಲ್ಲಿ ಇರೋ ವಿಶ್ಲೇಷಣೆಯಾಗಿದೆ. ಆಂಗ್ಲರ ನಾಡಿನ ಪ್ಲೆಯಿಂಗ್​ ಕಂಡಿಷನ್ಸ್​ ಬಹುತೇಕ ಆಸ್ಟ್ರೇಲಿಯಾದಲ್ಲಿಂದ್ದಂತೆ ಇದೆ. ಪೇಸ್​ & ಬೌನ್ಸಿ ಟ್ರ್ಯಾಕ್​​ನಲ್ಲಿ ಕಾಂಗರೂ ಪಡೆಗೆ ಆಡಿದ ಅನುಭವ ಹೆಚ್ಚಿದೆ. ಹೀಗಾಗಿ ಆಸಿಸ್​ ಗೆಲ್ಲೋ ಫೇವರಿಟ್​ ಅನ್ನೋ ವಾದ ಮಂಡಿಸ್ತಿದ್ದಾರೆ. ಆದ್ರೆ, ಓವಲ್​ ಮೈದಾನ ಹೇಳ್ತಿರೋ ಕಥೆ ಬೇರೆನೆ ಇದೆ.

ದಿ ಓವಲ್​ ಮೈದಾನ ಹೇಳ್ತಿದೆ ರೋಚಕ ಕಥೆ..!

ಆಸ್ಟ್ರೇಲಿಯಾದ ಆಟಗಾರರಿಗೆ ಇಂಗ್ಲೆಂಡ್​ ಪ್ಲೆಯಿಂಗ್​ ಕಂಡೀಷನ್​ಗೆ ಹೊಂದಿಕೊಳ್ಳೋದು ಸಿಕ್ಕಾಪಟ್ಟೆ ಈಸಿ. ಭಾರತಕ್ಕೆ ಹೋಲಿಸಿದ್ರೆ, ಅಡ್ವಾಂಟೇಜ್​ ಆಸಿಸ್​ ಪಡೆಗೆ ಜಾಸ್ತಿ. ಆದ್ರೆ, ಈ ಪರ್ಟಿಕ್ಯುಲರ್ ಆಗಿ ಕೆನ್ನಿಂಗ್ಟನ್​ ಓವಲ್​ ಮೈದಾನವನ್ನ ತೆಗೆದುಕೊಂಡ್ರೆ, ಆಸ್ಟ್ರೇಲಿಯಾದ ಸಾಧನೆ ತೀರಾ ಕಳಪೆಯಾಗಿದೆ. ವಿಶ್ವದ 2ನೇ ಅತ್ಯಂತ ಹಳೆಯ ಮೈದಾನ ಕಾಂಗರೂಗಳ ಪಾಲಿಗೆ ಅನ್​​ಲಕ್ಕಿ.

ಕೆನ್ನಿಂಗ್ಟನ್​ ಓವಲ್​ ಮೈದಾನದಲ್ಲಿ ಈವರೆಗೆ 38 ಟೆಸ್ಟ್ ಪಂದ್ಯಗಳನ್ನ ಆಸ್ಟ್ರೇಲಿಯಾ ತಂಡ ಆಡಿದೆ. ಇದ್ರಲ್ಲಿ 07 ಪಂದ್ಯಗಳನ್ನ ಜಯಿಸಿದ್ರೆ, 17 ಪಂದ್ಯಗಳಲ್ಲಿ ಸೋಲುಂಡಿದೆ. ಉಳಿದ 14 ಪಂದ್ಯ ಟೈನಲ್ಲಿ ಅಂತ್ಯವಾಗಿವೆ.

ಓವಲ್ನಲ್ಲಿ ಬ್ಯಾಟ್ಸ್​ಮನ್​ಗಳದ್ದೇ ದರ್ಬಾರ್​.!

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಸಜ್ಜಾಗಿರುವ ಟೀಮ್​ ಇಂಡಿಯಾದ ಸ್ಟ್ರೆಂಥ್​ ಬ್ಯಾಟಿಂಗ್​.! ಆಸ್ಟ್ರೇಲಿಯಾಗೆ ಹೋಲಿಸಿದ್ರೆ, ಭಾರತೀಯ ಬ್ಯಾಟ್ಸ್​ಮನ್​ಗಳು ಫೈನ್​ ಫಾರ್ಮ್​ನಲ್ಲಿದ್ದಾರೆ. ಕನ್ಸಿಸ್ಟೆನ್ಸಿಯನ್ನೂ ಕಾಯ್ದುಕೊಂಡಿದ್ದಾರೆ. ಹಿಂದಿನ ಟ್ರ್ಯಾಕ್​​ ರೆಕಾರ್ಡ್​​ ಪ್ರಕಾರ ಓವಲ್​ ಮೈದಾನದಲ್ಲಿ ಬ್ಯಾಟಿಂಗ್​ ದರ್ಬಾರ್​​ ನಡೆದಿದೆ. ಅದರಲ್ಲೂ ಮುಖ್ಯವಾಗಿ ದಿನ ಕಳೆದಂತೆ ಲೀಲಾಜಾಲವಾಗಿ ಬ್ಯಾಟ್ಸ್​ಮನ್​ಗಳು ರನ್​ಗಳಿಸಿದ ದಾಖಲೆಯಿದೆ. ಇದೇ ಟೀಮ್​ ಇಂಡಿಯಾ ಬಲ ಹೆಚ್ಚಿಸಿದೆ.

ಕೊನೆಯ ಪಂದ್ಯದಲ್ಲಿ ಭರ್ಜರಿ ಜಯಭೇರಿ.!

ದಿ ಓವಲ್​ ಮೈದಾನದಲ್ಲಿ ಟೀಮ್​ ಇಂಡಿಯಾ ಕೊನೆಯ ಬಾರಿ ಕಣಕ್ಕಿಳಿದಿದ್ದು, 2022ರ ಸಪ್ಟೆಂಬರ್​ನಲ್ಲಿ.. ಅಂದು ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್​ ಇಂಡಿಯಾ ತವರಿನಂಗಳದಲ್ಲೇ ಆಂಗ್ಲರಿಗೆ ದಂಗು ಬಡಿಸಿತ್ತು. ಬ್ಯಾಟಿಂಗ್​, ಬೌಲಿಂಗ್​ ಎರಡರಲ್ಲೂ ಅಬ್ಬರದ ಪ್ರದರ್ಶನ ನೀಡಿದ ಟೀಮ್​ ಇಂಡಿಯಾ, 157 ರನ್​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ರಾಹುಲ್, ರಿಷಭ್​ ಪಂತ್​ ಹೊರತುಪಡಿಸಿದ್ರೆ, ಅಂದು ಆಡಿದ್ದ ಉಳಿದೆಲ್ಲಾ ಆಟಗಾರರು ಈಗಲೂ ತಂಡದಲ್ಲೇ ಇದ್ದಾರೆ. ಇದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.

ಘರ್ಜಿಸಿದ್ದ ಹಿಟ್​ಮ್ಯಾನ್​ ರೋಹಿತ್​ ಶರ್ಮಾ.!

ಓವಲ್​ನಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಆಂಗ್ಲರ ಮೇಲೆ ಸವಾರಿ ಮಾಡಿದ್ರು. ಆ ಇನ್ನಿಂಗ್ಸ್​ ರೋಹಿತ್​ ಶರ್ಮಾ ಎದುರಿಸಿದ್ದು, ಬರೋಬ್ಬರಿ 256 ಎಸೆತಗಳನ್ನ… ಅಂದು ತಾಳ್ಮೆಯ ಜೊತೆಗೆ ಎಚ್ಚರಿಕೆಯ ಆಟವಾಡಿದ್ದ ಮುಂಬೈಕರ್​, 2ನೇ ಇನ್ನಿಂಗ್ಸ್​ನಲ್ಲಿ ಶತಕ ಸಿಡಿಸಿ ಘರ್ಜಿಸಿದ್ರು. ಸದ್ಯ ಫಾರ್ಮ್​ ಸಮಸ್ಯೆ ಎದುರಿಸ್ತಾ ಇರೋ ರೋಹಿತ್​ ಪಾಲಿಗೆ ಇದೇ ಸಂಜೀವಿನಿಯಾಗಿದೆ.

ಒಟ್ಟಿನಲ್ಲಿ, ಓವಲ್​ ಮೈದಾನದ ಹಿಂದಿನ ಅಂಕಿ-ಅಂಶಗಳೆಲ್ಲಾ ರೋಹಿತ್​ ಪಡೆಯ ಪರವಾಗಿಯೆ ಇವೆ. ಇದನ್ನ ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕಿದೆ. ಅದರ ಬದಲಾಗಿ ಪೂರ್ತಿಯಾಗಿ ತೆಗೆದುಕೊಂಡು ಓವರ್​​ ಕಾನ್ಪಿಡೆನ್ಸ್​ನಲ್ಲಿ ಕಣಕ್ಕಿಳಿದ್ರೆ, ಹಿನ್ನಡೆಯಾಗೋದ್ರಲ್ಲಿ ಅನುಮಾನವೇ ಇಲ್ಲ..

  ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ದಿ ಓವಲ್​ ಮೈದಾನಕ್ಕೂ ಟೀಂ ಇಂಡಿಯಾಗೂ ಇದೆ ನಂಟು! ಅದೇನು ಗೊತ್ತಾ?

https://newsfirstlive.com/wp-content/uploads/2023/06/Team-India-3.jpg

Load More