newsfirstkannada.com

ಮುಂದಿನ 4 ದಿನ ಭಾರೀ ಮಳೆಯಾಗುವ ಸಾಧ್ಯತೆ..ಆರೆಂಜ್​ ಅಲರ್ಟ್​ ಘೋಷಣೆ

Share :

16-07-2023

    ದಿನೇದಿನೇ ತತ್ತರಿಸಿ ಹೋಗುತ್ತಿವೆ ಉತ್ತರಾಖಂಡ ರಾಜ್ಯಗಳು

    ಮಳೆಯ ಅಟ್ಟಹಾಸಕ್ಕೆ ಸಂಕಷ್ಟ ಎದುರಿಸುತ್ತಿದ್ದಾರೆ ಹಿಮಾಚಲ ಪ್ರದೇಶದ ಜನರು

    ಆರೆಂಜ್ ಅಲರ್ಟ್​ ಘೋಷಿಸಿದ ಭಾರತೀಯ ಹವಾಮಾನ ಇಲಾಖೆ

ವಿನಾಶಕಾರಿ ಮಳೆಯ ಅಟ್ಟಹಾಸಕ್ಕೆ ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳು ದಿನೇದಿನೇ ತತ್ತರಿಸಿ ಹೋಗುತ್ತಿವೆ. ನಿಲ್ಲದ ಮಳೆಯ ಅಬ್ಬರ ಭಾರೀ ಪ್ರಮಾಣದ ಹಾನಿ ಉಂಟು ಮಾಡುತ್ತಿದೆ. ಮುಂದಿನ ನಾಲ್ಕು ದಿನಗಳು ಇದಕ್ಕಿಂತಲೂ ಭಾರೀ ಅತ್ಯಧಿಕ ಮಳೆಯಾಗುವ ಆತಂಕ ಎದುರಾಗಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಹಿಮಾಚಲದಲ್ಲಿ ಜುಲೈ 17 ರವರೆಗೆ ಮತ್ತು ಉತ್ತರಾಖಂಡದಲ್ಲಿ 18 ರವರೆಗೆ ಆರೆಂಜ್ ಅಲರ್ಟ್​ ಘೋಷಿಸಿದೆ.

ಈಗಾಗಲೆ ವರುಣಾರ್ಭಟದ ಮುಂದೆ ಸೋತು ಶರಣಾಗಿರುವ ಜನರು ಹೈರಾಣಾಗಿದ್ದಾರೆ. ಎಡೆಬಿಡದೆ ಸುರಿಯುತ್ತಿರುವ ಭಾರೀ ವರ್ಷಧಾರೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮತ್ತೊಂದೆಡೆ ಉತ್ತರ ಪ್ರದೇಶ, ಪಂಜಾಬ್​ ಸೇರಿದಂತೆ ಹಲವೆಡೆ ಯಮುನೆಯ ಆರ್ಭಟ ಜೋರಾಗಿದೆ. ಪ್ರವಾಹದಿಂದ ಜನರು  ಸಂಕಷ್ಟ ಎದುರಿಸುತ್ತಿದ್ದಾರೆ. ಸದ್ಯ ಜನ, ಜಾನುವಾರಗಳನ್ನು ಎನ್​ಡಿಆರ್​ಎಫ್​ ತಂಡ ರಕ್ಷಣೆ ಮಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮುಂದಿನ 4 ದಿನ ಭಾರೀ ಮಳೆಯಾಗುವ ಸಾಧ್ಯತೆ..ಆರೆಂಜ್​ ಅಲರ್ಟ್​ ಘೋಷಣೆ

https://newsfirstlive.com/wp-content/uploads/2023/07/Rain-2-6.jpg

Load More