newsfirstkannada.com

ಭಾರತ ಅಗ್ರೆಸ್ಸಿವ್​ ತಂಡವಾಗಿ ಬದಲಾಗಲು ಕಾರಣವೊಂದಿದೆ.. ಇದರ ಹಿಂದಿರುವ ಆದಿಪುರುಷ ಯಾರು ಗೊತ್ತಾ?

Share :

02-07-2023

    ಭಾರತ ತಂಡದಲ್ಲಿ ಅಗ್ರೆಸ್ಸಿವ್​ನೆಸ್ ತಂದ ಶ್ರೇಯ ಯಾರಿಗೆ ಸಲ್ಲುತ್ತೆ?

    ಭಾರತ ಆಕ್ರಮಣಕಾರಿ ಆಟವಾಡಲು ಶುರು ಮಾಡಿದ್ದೇ ಇವರೆರಿಂದ

    ಆಸೀಸ್​​​ ಕೆಣಕ್ಕಿದ್ದಕ್ಕೆ ಟೀಂ ಇಂಡಿಯಾ ಅಗ್ರೆಸ್ಸಿವ್ ತಂಡವಾಗಿ ಬದಲಾಯ್ತು

ಮಾಜಿ ಕ್ಯಾಪ್ಟನ್​​ ಸೌರವ್ ಗಂಗೂಲಿ ಅಗ್ರೆಸ್ಸಿವ್ ಸ್ವಭಾವಕ್ಕೆ ಹೆಸರುವಾಸಿ.ಬರೀ ತಾವಷ್ಟೇ ಅಲ್ಲ ಇಡೀ ಟೀಮ್​​ ಅಲ್ಲಿ ಅಗ್ರೆಸ್ಸಿವ್​ನೆಸ್​​ ತಂದ ಶ್ರೇಯ ಗಂಗೂಲಿ ಅವರಿಗೆ ಸಲ್ಲಬೇಕು. ಆದರೆ ಟೀಮ್ ಇಂಡಿಯಾ ಅಗ್ರೆಸ್ಸಿವ್​ ತಂಡವಾಗಿ ರೂಪುಗೊಂಡಿದ್ದರ ಹಿಂದೆ ಒಂದು ಇಂಟ್ರೆಸ್ಟಿಂಗ್ ಕಥೆಯೊಂದಿದೆ. ಅದೇನು ಗೊತ್ತಾ? ಈ ಸ್ಟೋರಿ ಓದಿ.

ದಾದಾ ಆಕ್ರಮಣಕಾರಿ ಆಟ

ಸೌರವ್ ಗಂಗೂಲಿ. ನಾಯಕನಾಗಿ ಭಾರತ ತಂಡದ ಚಹರೆ ಬದಲಿಸಿದ್ರು. ನಾನಾ ಹೊಸ ಪ್ರಯೋಗಗಳಿಗೆ ಮುನ್ನಡಿ ಬರೆದರು. ಆ ಪೈಕಿ ಅಗ್ರೆಸ್ಸಿವ್​​​​ನೆಸ್​ ಕೂಡ ಒಂದು. ಹೌದು, ದಾದಾ ನಾಯಕತ್ವದಲ್ಲಿ ಭಾರತ ಆಕ್ರಮಣಕಾರಿ ಆಟವಾಡಲು ಶುರುಮಾಡ್ತು. ಅಂದಹಾಗೇ ಗಂಗೂಲಿ ತಂಡದಲ್ಲಿ ಅಗ್ರೆಸ್ಸಿವ್​​ ಸ್ವಭಾವ ತುಂಬಿದ್ದರ ಹಿಂದೆ ಒಂದು ರೋಚಕ ಕಥನೇ ಇದೆ.

ಗಂಗೂಲಿಯನ್ನ ಕೆಣಕಿದ ಆಸೀಸ್​​​ ಕ್ಯಾಪ್ಟನ್ ಸ್ಟೀವ್​ ವಾ

ಅದು 2001ನೇ ಇಸವಿ ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸಕೈಗೊಂಡಿತ್ತು. ಆಗ ಆಸೀಸ್​​​ ಕ್ಯಾಪ್ಟನ್ ಸ್ಟೀವ್​ ವಾ ಒಂದು ಸ್ಟೇಜ್​​ಮೆಂಟ್​​​ ನೀಡ್ತಾರೆ. ಅದೇನಂದ್ರೆ ಟೀಮ್ ಇಂಡಿಯಾ ಆಟಗಾರರ ನಡೆ ಉತ್ತಮವಾಗಿಲ್ಲ ಎಂದು ಹೇಳಿದ್ರು. ಬೆಳಗ್ಗೆ ಪೇಪರ್​ ಓದಿದ ಗಂಗೂಲಿಗೆ ಈ ಹೇಳಿಕೆ ಕಂಡು ಅಚ್ಚರಿ ಆಯ್ತು. ಸಾಲದೆಂಬಂತೆ ದಾದಾ ಕೋಲ್ಕತ್ತಾಗೆ ಹೋದ ವಿಷ್ಯವನ್ನೇ ಸ್ಟೀವ್ ವಾ ದೊಡ್ಡದಾಗಿ ಬಿಂಬಿಸಿದ್ರು. ಇದನ್ನ ಗಂಭೀರವಾಗಿ ಪರಿಗಣಿಸಿದ ಗಂಗೂಲಿ ಕೂಡಲೇ ಬಿಸಿಸಿಐಗೆ ಪತ್ರ ಬರಿತಾರೆ. ಪತ್ರದಲ್ಲಿ ನಾವು ಈ ಸರಣಿ ಗೆಲ್ಲಬೇಕಾದ್ರೆ ಎಲ್ಲಾ ಆಟಗಾರರು ಮೊದಲು ಸರಿಯಾಗಿ ಆಡಬೇಕು. ಆಗ ಮಾತ್ರ ಅವರನ್ನ ಸೋಲಿಸಲು ಸಾಧ್ಯ ಎಂದು ಪತ್ರದಲ್ಲಿ ಖಡಕ್ ಆಗಿ ಸೂಚಿಸಿದ್ದರಂತೆ.

ಪರಿಣಾಮ ಭಾರತ ತಂಡ ಕೊನೆ ಎರಡು ಟೆಸ್ಟ್​ನಲ್ಲಿ ಗೆದ್ದು ಕಮ್​ಬ್ಯಾಕ್ ಮಾಡ್ತು. ಭಾರತ ತಂಡ ಆಸೀಸ್​​ನಂತೆ ಎಲ್ಲದಕ್ಕೂ ಸಿದ್ಧವಾಯ್ತು. ಅವರು ನಮ್ಮನ್ನ ಪುಶ್​​, ಪಂಪ್​ ಮಾಡಿದ್ರು. ನಾವು ಅವರ ದಾರಿಯಲ್ಲೇ ನಡೆದೆವು. ಹೀಗೆ ಭಾರತ ಅಗ್ರೆಸ್ಸಿವ್​ ತಂಡವಾಗಿ ಬದಲಾಯ್ತು ಎಂದು ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಭಾರತ ಅಗ್ರೆಸ್ಸಿವ್​ ತಂಡವಾಗಿ ಬದಲಾಗಲು ಕಾರಣವೊಂದಿದೆ.. ಇದರ ಹಿಂದಿರುವ ಆದಿಪುರುಷ ಯಾರು ಗೊತ್ತಾ?

https://newsfirstlive.com/wp-content/uploads/2023/07/ganguli.jpg

Load More