ಪೋಷಕರಿಗೂ ಕಾಡ್ತಿದೆ ಬೆಂಗಳೂರು ಬಂದ್ ಗೊಂದಲ!
ಖಾಸಗಿ ಶಾಲಾ ಒಕ್ಕೂಟದಿಂದ ಬಂದ್‌ಗೆ ನೈತಿಕ ಬೆಂಬಲ
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದೇನು?
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಳೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದೆ. ಇವತ್ತು ಮಧ್ಯರಾತ್ರಿಯಿಂದಲೇ ಆಟೋ, ಕ್ಯಾಬ್, ಏರ್‌ಪೋರ್ಟ್ ಟ್ಯಾಕ್ಸಿ ಸಿಗೋದು ಅನುಮಾನವಾಗಿದೆ. ಈ ಮುಷ್ಕರಕ್ಕೆ 30ಕ್ಕೂ ಹೆಚ್ಚು ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳು ಬೆಂಬಲ ಕೊಟ್ಟಿವೆ. ಇದರ ಮಧ್ಯೆ ವಿದ್ಯಾರ್ಥಿಗಳಿಗೆ ನಾಳೆ ಶಾಲೆ ಇರುತ್ತಾ? ಇರಲ್ವಾ? ಎಂಬ ಗೊಂದಲ ಶುರುವಾಗಿದೆ.
ಇದನ್ನು ಓದಿ: ನಾಳೆ ಬೆಂಗಳೂರು ಬಂದ್.. ಶಾಲೆಗಳಿಗೆ ರಜೆ ಇದೆಯಾ? ಇಲ್ಲಿದೆ ಮಾಹಿತಿ
ನಾಳೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರಿನಲ್ಲಿ ವಾಹನಗಳ ಬಂದ್‌ಗೆ ಕರೆ ನೀಡಿದೆ. ಹೀಗಾಗಿ ಖಾಸಗಿ ಶಾಲೆಯ ವಾಹನಗಳ ಸಂಚಾರವೂ ಇರುವುದಿಲ್ಲ ಎನ್ನಲಾಗಿದೆ. ಆದರೆ ಎಂದಿನಂತೆ ಶಾಲೆಯ ತರಗತಿಗಳು ನಡೆಯುತ್ತವೆ. ಹೀಗಾಗಿ ಪೋಷಕರು ನಿಮ್ಮ ಮಕ್ಕಳನ್ನು ಸ್ವಂತ ವಾಹನದಲ್ಲೇ ಕರೆದುಕೊಂಡು ಬನ್ನಿ. ಯಾವುದೇ ಕಾರಣಕ್ಕೂ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಪೋಷಕರಲ್ಲಿ ಮನವಿ ಮಾಡಲಾಗಿದೆ ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಹೇಳಿದ್ದಾರೆ.
ಸದ್ಯ ಚಾಲಕರಿಗೆ 10 ಸಾವಿರ ಮಾಸಿಕ ಪರಿಹಾರ ಧನ ನೀಡಬೇಕು, ಱಪಿಡೋ ಬೈಕ್ ಟ್ಯಾಕ್ಸಿಗಳನ್ನ ಸಂಪೂರ್ಣವಾಗಿ ನಿಷೇಧಿಸಬೇಕು, ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು, ಹೀಗೆ ಹತ್ತು ಹಲವು ಬೇಡಿಕೆಗಳನ್ನ ಮುಂದಿಟ್ಟುಕೊಂಡು ಖಾಸಗಿ ಸಾರಿಗೆ ಒಕ್ಕೂಟ ಬಂದ್‌ಗೆ ಕರೆ ಕೊಟ್ಟಿದೆ.
ಏನೆಲ್ಲಾ ಇರುತ್ತವೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ