newsfirstkannada.com

ಟಾರ್ಚರ್​ ಕೊಡ್ತಾರೆ.. ಬೆದರಿಕೆ ಹಾಕ್ತಾರೆ.. ಲೋನ್ ಆ್ಯಪ್​ಗಳಲ್ಲಿ ಸಾಲ ಪಡೆಯುವ ಮುನ್ನ ಹುಷಾರ್​ ಕಣ್ರಪ್ಪ

Share :

Published July 14, 2023 at 7:13pm

Update July 14, 2023 at 7:19pm

    ಆನ್​ಲೈನ್ ಆ್ಯಪ್​ನಿಂದ ಸಾಲ ಪಡೆದವರು ಹೈರಾಣ

    ಪತಿ ಸಾವನ್ನಪ್ಪಿದ್ದರೂ ಪತ್ನಿಗೆ ಬರುತ್ತಿರುವ ನಿರಂತರ ಕರೆ

    ಆನ್​ಲೈನ್ ಆ್ಯಪ್ ಲೋನ್ ಕಾಟದಿಂದ ಬೇಸತ್ತ ಗೃಹಿಣಿ

ಮೊಬೈಲ್ ಫೋನ್​​ಗಳು ದೈನಂದಿನ ಬಳಕೆಯ ಸಾಧನವಾಗಿದ್ದು, ಕೈಗೆಟಕುವ ಅಂತರ್ಜಾಲದಿಂದ ಪ್ರಪಂಚಕ್ಕೆ ನಮ್ಮನ್ನು ಸಂಪರ್ಕಿಸುವ ಒಂದು ಅಗತ್ಯ ಮಾರ್ಗವಾಗಿದೆ. ಆನ್​ಲೈನ್ ಶಾಪಿಂಗ್​​​ನಿಂದ ಹಿಡಿದು ಬ್ಯಾಂಕಿಂಗ್ ಸೇರಿ ಹಲವು ಕಾರ್ಯಗಳು ಈಗ ಸ್ಮಾರ್ಟ್​ಫೋನ್​​ನಿಂದ ಆಗುತ್ತಿವೆ.. ಅದೇ ರೀತಿ ಕೆಲವೇ ಕ್ಷಣಗಳಲ್ಲಿ ಲೋನ್​ ಕೊಡ್ತೀವಿ ಅಂತ ತುರ್ತು ಸಾಲ ಕೊಡುವ ಆನ್​ಲೈನ್​​ ಆ್ಯಪ್​​ಗಳ ಕಿರುಕುಳ ಮಿತಿಮೀರಿ ಹೋಗಿದೆ.

ಮಿತಿ ಮೀರಿದ ಆನ್​ಲೈನ್ ಲೋನ್ ಆ್ಯಪ್​ಗಳ ಕಿರುಕುಳ!

ಮೊನ್ನೆ ಬೆಂಗಳೂರಿನಲ್ಲಿ ಚೀನಾ ಆ್ಯಪ್​ ಲೋನ್​ನಿಂದ ಸಾಲ ಪಡೆದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ಇವರ ಕಿರುಕುಳ ತಾಳಲಾರದೇ ಆತ್ಮಹತ್ಯೆಗೆ ಶರಣಾಗಿದ್ದ. ಈ ಸುದ್ದಿ ಹಸಿರಾಗಿರುವಾಗಲೇ ಲೋನ್​ ಆ್ಯಪ್​ಗಳ ಉಪಟಳ ಕಥೆಗಳು ಮುಂದುವರಿದಿವೆ. ತುರ್ತು ಸಾಲ ಪಡೆದು ಕಟ್ಟದವರಿಗೆ ಕರೆ ಮಾಡಿ ಕಿರುಕುಳ ನೀಡ್ತಿದ್ದಾರೆ ಲೋನ್ ಆ್ಯಪ್ ಸಿಬ್ಬಂದಿ.

ಆನ್​ಲೈನ್ ಆ್ಯಪ್ ಲೋನ್ ಕಾಟದಿಂದ ಬೇಸತ್ತ ಗೃಹಿಣಿ!

ತುಮಕೂರಿನ ಮಂಜುನಾಥನಗರ ನಿವಾಸಿ ಶಾಂತಲಾ ಎಂಬುವರು ಆನ್​ಲೈನ್ ಲೋನ್​ ಸಿಬ್ಬಂದಿ ಕಾಟಕ್ಕೆ ಬೇಸತ್ತಿದ್ದಾರೆ. ಪತಿ ಮೃತಪಟ್ಟಿದ್ದರೂ ಶಾಂತಲಾಗೆ ಫೋನ್​ ಮಾಡಿ ಟಾರ್ಚರ್ ಮಾಡಿದ್ದಾರೆ. ಲೋನ್​ ಕಟ್ಟದಿದ್ರೆ ಪೊಲೀಸರು ಮನೆಗೆ ಬರೋದಾಗಿ ಬೆದರಿಕೆ ಹಾಕಿದ್ದಾರೆ..

ಟಾರ್ಚರ್ ‘ಆ್ಯಪ್’!

ಕಳೆದ ಏ.29ರಂದು ಮೃತಪಟ್ಟಿದ್ದ ಹೃದಯಾಘಾತದಿಂದ ಶಾಂತಲಾ ಪತಿ ರಾಜೇಂದ್ರಸ್ವಾಮಿ ಮೃತಪಟ್ಟಿದ್ದರು. ಸ್ನೇಹಿತರಿಗೆ ಲೋನ್​ ಆ್ಯಪ್​​ನಲ್ಲಿ ರಾಜೇಂದ್ರಸ್ವಾಮಿ ಶ್ಯೂರಿಟಿ ಹಾಕಿದ್ದರು. 4 ದಿನಗಳ ಹಿಂದೆ ಶಾಂತಲಾಗೆ ನಿರಂತರವಾಗಿ ಕರೆ ಮಾಡಿ ಹಣ ಕಟ್ಟುವಂತೆ ಕಿರುಕುಳ, 80 ಸಾವಿರ ಲೋನ್ ಕಟ್ಟುವಂತೆ ಶಾಂತಲಾಗೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ. ನನ್ನ ಪತಿ ಬದುಕಿಲ್ಲ ಅಂದ್ರೂ ನೀವೇ ಕಟ್ಟಿ ಅಂತ ಟಾರ್ಚರ್​ ನೀಡಿದ್ದಾರೆ. ಹಣ ಕಟ್ಟಿಲ್ಲ ಎಂದರೆ ಪೊಲೀಸ್ ಠಾಣೆಗೆ ಬನ್ನಿ ಅಂತಾ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಠಾಣೆಗೆ ಹೋದ್ರೆ ಯಾರೂ ಇಲ್ಲ ಅಂತ ಪೊಲೀಸರ ಹೇಳಿರೋದು ಅನುಮಾನಕ್ಕೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಆಟೋ ಡ್ರೈವರ್​ಗೆ ಆ್ಯಪ್​ ಕಿರುಕುಳ!

ಅತ್ತ ಶಿವಮೊಗ್ಗದ ಭದ್ರಾವತಿಯಲ್ಲಿ ಲೋನ್ ಆ್ಯಪ್​ನಿಂದ ಸಾಲ ಪಡೆದಿದ್ದ ಸತೀಶ್​​ ಹೈರಾಣಾಗಿದ್ದಾರೆ. 4 ತಿಂಗಳ ಹಿಂದೆ ಸ್ನೇಹಿತನ ನೆರವಿನಿಂದ ಮನಿ ಆ್ಯಪ್​​ ಮೂಲಕ ಸತೀಶ್​ 6 ಸಾವಿರ ಸಾಲ ಪಡೆದಿದ್ದರು. ಆದ್ರೆ ಸತೀಶ್​​ ಕೈಗೆ ಸಿಕ್ಕಿದ್ದು 4500 ರೂ. ಮಾತ್ರ. ಇದರಲ್ಲಿ 2 ಸಾವಿರ ರೂ. ಮರುಪಾವತಿಸಿದ್ದಾರೆ. ಆದರೆ​​ ಇನ್ನೂ 7 ಸಾವಿರ ಕೊಡುವಂತೆ ಪೊಲೀಸರ ಹೆಸರಿನಲ್ಲಿ ಲೋನ್ ಆ್ಯಪ್ ಸಿಬ್ಬಂದಿ ಬೆದರಿಸುತ್ತಿದ್ದು, ಸತೀಶ್ ದಿಕ್ಕು ತೋಚದಂತಾಗಿದ್ದಾರೆ.

ಒಟ್ಟಿನಲ್ಲಿ ಲೋನ್ ಆ್ಯಪ್​​ನ ಕರಾಳ ಚರಿತ್ರೆ ಒಂದೊಂದೇ ಬಯಲಾಗುತ್ತಿದೆ. ತುರ್ತು ಅಗತ್ಯಕ್ಕಾಗಿ ಖಾಸಗಿ ಆ್ಯಪ್​ಗಳ ಮೂಲಕ ಸಾಲ ಪಡೆಯುವ ಮುನ್ನ ಒಮ್ಮೆ ಯೋಚಿಸುವುದು ಉತ್ತಮ. ಸರ್ಕಾರ ಆನ್​ಲೈನ್ ವಂಚಕರಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಾರ್ಚರ್​ ಕೊಡ್ತಾರೆ.. ಬೆದರಿಕೆ ಹಾಕ್ತಾರೆ.. ಲೋನ್ ಆ್ಯಪ್​ಗಳಲ್ಲಿ ಸಾಲ ಪಡೆಯುವ ಮುನ್ನ ಹುಷಾರ್​ ಕಣ್ರಪ್ಪ

https://newsfirstlive.com/wp-content/uploads/2023/07/Money-1.jpg

Load More