‘ಬದುಕಿನ ಮೇಲೆ ಯಾವುದೇ ಆಸೆ ಉಳಿದಿಲ್ಲ’
ಚಿಕ್ಕ ಮಗನ ಮೇಲೆ ನೂರೆಂಟು ಕನಸು ಕಂಡಿದ್ದೆ
ಮನೆ, ಹೊಲಗಳಿಗೆ ಬೆಂಕಿಯಿಟ್ಟರು -ಸಂತ್ರಸ್ತ ತಾಯಿ ಕಣ್ಣೀರು
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲಿವೆ. ಪೊಲೀಸರು ಸೇರಿದಂತೆ ಸೇನೆಯನ್ನು ನಿಯೋಜನೆ ಮಾಡಿದ್ದರೂ ಹಿಂಸಾಚಾರ ತಡೆಯಲು ಆಗುತ್ತಿಲ್ಲ. ರಾಜ್ಯದಲ್ಲಿ ಒಂದಲ್ಲ ಒಂದು ಪ್ರದೇಶದಲ್ಲಿ ಗಲಭೆ, ಗಲಾಟೆಗಳು ನಿರಂತರವಾಗಿವೆ. ಕಳೆದ ತಿಂಗಳು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ವೈರಲ್ ಆಗಿ ತೀವ್ರ ಖಂಡನೆ ವ್ಯಕ್ತವಾಗಿತ್ತು.
ಈ ವಿಡಿಯೋದಲ್ಲಿದ್ದ ಮಹಿಳೆಯರ ತಾಯಿಯೊಬ್ಬರು ತಮ್ಮ ಮಗಳನ್ನು ಯಾವ ರೀತಿ ನಡೆಸಿಕೊಂಡರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಖಾಸಗಿ ಮಾಧ್ಯಮವೊಂದು ನಡೆಸಿದ ಸಂದರ್ಶನದ ವೇಳೆ ನರಕದ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಮತ್ತೆ ಊರಿಗೆ ಹೋಗುವ ಭರವಸೆಗಳಿಲ್ಲ
ಮಣಿಪುರದಲ್ಲಿನ ಸರ್ಕಾರ ಗಲಾಟೆಗಳನ್ನು ತಡೆಯುತ್ತಿಲ್ಲ. ಜನರ ರಕ್ಷಣೆಗೂ ಧಾವಿಸುತ್ತಿಲ್ಲ. ಮೇ 4 ರಂದು ಊರಿಗೆ ನುಗ್ಗಿದ ಗಲಭೆಕೋರರು ಯಾರು ಬೇಕೋ ಅವರ ಮೇಲೆ ದಾಳಿ ಮಾಡಿದರು. ದಾಳಿಯಲ್ಲಿ ನನ್ನ ಗಂಡ ಹಾಗೂ ಚಿಕ್ಕ ಮಗನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು. ಅವರ ಬಲವಾದ ಏಟುಗಳನ್ನು ತಾಳಲಾರದೆ ಕಿರುಚುತ್ತಿದ್ದರು. ಬಳಿಕ ನೋಡಿದರೆ ಮಗ ಮತ್ತು ಗಂಡ ಶವವಾಗಿ ಬಿದ್ದಿದ್ದರು. ನಂತರ ನನ್ನ ಮಗಳ ಮೇಲೆ ಹಲ್ಲೆ ಮಾಡಲು ಶುರು ಮಾಡಿ ಮೈಮೇಲಿನ ಬಟ್ಟೆಗಳನ್ನು ಕಿತ್ತು ಬೆತ್ತಲೆಗೊಳಿಸಿ ಊರಿನ ಬೀದಿಯಲ್ಲಿ ಮೆರವಣಿಗೆ ಮಾಡಿದರು.
ಮಗ 12ನೇ ತರಗತಿಯಲ್ಲಿ ಓದುತ್ತಿದ್ದ. ಅವ ಓದು ಮುಗಿಸಿ ಕುಟುಂಬಕ್ಕೆ ಆಸರೆಯಾಗುತ್ತಾನೆಂದು ಭರವಸೆ ಇಟ್ಕೊಂಡಿದ್ದೆ. ಹಿರಿಯ ಮಗನಿಗೆ ಯಾವುದೇ ಕೆಲಸ ಇರಲಿಲ್ಲ. ಹೀಗಾಗಿ ಸಣ್ಣ ಮಗನ ಮೇಲೆ ಸಾಕಷ್ಟು ಆಸೆಗಳನ್ನು ಇಟ್ಟುಕೊಂಡಿದ್ದೆ. ಮಗನ ಹತ್ಯೆಯಿಂದ ನನ್ನ ಇಡೀ ಜೀವನ ನಾಶವಾಗಿದೆ. ಈಗ ನನ್ನಲ್ಲಿ ಯಾವುದೇ ಭರವಸೆಗಳಿಲ್ಲ. ಅಸಹಾಯಕಳಾಗಿದ್ದೇನೆ. ಮನಸ್ಸಿನಲ್ಲಿ ಏನೂ ಉಳಿದಿಲ್ಲ. ರಾಜ್ಯದಲ್ಲಿ ಇಲ್ಲಿಯವರೆಗೆ 160ಕ್ಕೂ ಹೆಚ್ಚು ಜನ ಹಿಂಚಾಚಾರದಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ನಾನು ಮತ್ತೆ ವಾಪಸ್ ಊರಿಗೆ ಹೋಗುವ ನಂಬಿಕೆ ಇಲ್ಲ.
ಮನೆ, ನಮ್ಮ ಹೊಲಕ್ಕೆ ಬೆಂಕಿ
ಗಲಭೆಗಳಿಂದ ಊರಿನಲ್ಲಿರುವ ಎಲ್ಲವೂ ನಾಶವಾಗಿದೆ. ಅಲ್ಲಿ ಬದುಕುವಂತಹ ಆಸೆಗಳೇನೂ ಇಲ್ಲ. ನಮ್ಮ ಮನೆ, ನಮ್ಮ ಹೊಲ ಬೆಂಕಿಯಲ್ಲಿ ಸುಟ್ಟು ಹೋಗಿವೆ. ಇದರಿಂದ ನಮ್ಮ ಬದುಕು ಸರ್ವನಾಶವಾಗಿದೆ. ಹಳ್ಳಿಗೆ ವಾಪಸ್ ಹೋಗಬೇಕು ಎನ್ನುವ ಆಲೋಚನೆ ಬರುತ್ತಿಲ್ಲ. ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಕೆಯ ಸಹೋದರ ಮತ್ತು ತಂದೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆಕೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅವಮಾನ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ಕೋಪ ಬರುತ್ತಿದೆ.
ವಿವಸ್ತ್ರಗೊಳಿಸಿದ್ದ ಮಹಿಳೆಯೊಬ್ಬರ ತಾಯಿ
ಮೈತೇಯಿ ಮತ್ತು ಕುಕಿಗಳ ನಡುವಿನ ಸಂಘರ್ಷ ಮಣಿಪುರದಲ್ಲಿ ಇದೇ ಮೊದಲಲ್ಲ. ಕಳೆದ 10 ವರ್ಷಗಳಿಂದ ಈ ಸಮುದಾಯಗಳ ನಡುವೆ ಕೆಲ ಗಲಾಟೆಗಳು ನಡೆಯುತ್ತಲೇ ಬರುತ್ತಿವೆ. ಈ ಕೃತ್ಯ ನಡೆದ 15 ದಿನಗಳ ಬಳಿಕ ಪ್ರಕರಣ ದಾಖಲು ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇದನ್ನೂ ಓದಿ: ಮತ್ತೊಂದು ಸ್ವರೂಪ ಪಡೆದುಕೊಂಡ ಕುಕಿ-ಮೈತೇಯಿ ಜನಾಂಗದ ಸಂಘರ್ಷ.. ಸರ್ಕಾರದ ಮುಂದೆ ಕುಕಿ ಹೊಸ ವರಸೆ..!