newsfirstkannada.com

ಮನೆ ಕೆಲಸಕ್ಕೆ ಎಂದು ಬಂದಿದ್ದ ಖತರ್ನಾಕ್​​ ಕಳ್ಳ; 6 ಲಕ್ಷ ಮೌಲ್ಯದ ಚಿನ್ನ ಕದ್ದು ಸಿಕ್ಕಿಬಿದ್ದಿದ್ದು ಹೇಗೆ?

Share :

11-08-2023

    ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಭೂಪ

    ಮಾಡೋದು ಮಾತ್ರ ಕಳ್ಳತನ, ಕೆಲಸ ಅಲ್ಲ..!

    100 ಗ್ರಾಂ ಚಿನ್ನ ಕದ್ದು ಸಿಕ್ಕಿಬಿದ್ದ ಆತ ಯಾರು?

ಬೆಂಗಳೂರು: ಪೇಂಟ್ ಕೆಲಸಕ್ಕೆ ಬಂದು ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಉಮೇಶ್ ಪ್ರಸಾದ್ ಜಾಧವ್ ಬಂಧಿತ ಆರೋಪಿ.

ಬಂಧಿತ ಆರೋಪಿಯು ಉತ್ತರ ಪ್ರದೇಶ ನಿವಾಸಿ. ಕೆಲಸ ಅರಸಿ ಬೆಂಗಳೂರಿಗೆ ಬಂದು ಪೇಂಟ್ ಕೆಲಸ ಮಾಡಿಕೊಂಡಿದ್ದನು. ಮನೆ ಮಾಲೀಕರ ಕಣ್ಣು ತಪ್ಪಿಸಿ ಕಬೋರ್ಡ್​ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದನು. ಈ ಕುರಿತು ಮನೆ ಮಾಲೀಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಬಸವನಗುಡಿ ಪೊಲೀಸರು ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 6 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮನೆ ಕೆಲಸಕ್ಕೆ ಎಂದು ಬಂದಿದ್ದ ಖತರ್ನಾಕ್​​ ಕಳ್ಳ; 6 ಲಕ್ಷ ಮೌಲ್ಯದ ಚಿನ್ನ ಕದ್ದು ಸಿಕ್ಕಿಬಿದ್ದಿದ್ದು ಹೇಗೆ?

https://newsfirstlive.com/wp-content/uploads/2023/08/basavanagudi.jpg

Load More