newsfirstkannada.com

×

ಕಳ್ಳತನ ಮಾಡಲು ಮನೆಗೆ ನುಗ್ಗಿದ ಕಳ್ಳ; ಕೊನೆಗೂ ಬೀದಿ ಹೆಣವಾದ; ಕಾರಣವೇನು?

Share :

Published September 12, 2023 at 7:55pm

    ಸಾವು ಹೇಗೆ ಬರುತ್ತದೋ ಎಂದು ಗೊತ್ತೇ ಆಗಲ್ಲ

    ಎಷ್ಟೋ ಜನ ದಿಢೀರ್​ ಎಂದು ಪ್ರಾಣ ಬಿಡುತ್ತಾರೆ!

    ಮನೆ ಕಳ್ಳತನಕ್ಕೆ ಹೋದ ಕಳ್ಳ ಬೀದಿ ಹೆಣವಾದ..!

ಲಕ್ನೋ: ಒಬ್ಬರಿಗೆ ಸಾವು ಹೇಗೆ ಬರುತ್ತದೋ ಎಂದು ಗೊತ್ತೇ ಆಗಲ್ಲ. ಎಷ್ಟೋ ಜನ ದಿಢೀರ್​ ಇದ್ದಕ್ಕಿದ್ದಂತೆ ಪ್ರಾಣವೇ ಬಿಟ್ಟುಬಿಡುತ್ತಾರೆ. ಇಂಥದ್ದೊಂದು ಘಟನೆ ನಡೆದಿದೆ. ಹೌದು, ಹೀಗೆ ದುರ್ಮರಣ ಹೊಂದಿದ್ದು ಯಾರು ಅಲ್ಲ, ಖತರ್ನಾಕ್​ ಕಳ್ಳ. ಈತನ ಸಾವಿಗೆ ಕಾರಣವೇ ಕರೆಂಟ್​ ಶಾಕ್​​. ಇದರ ಹಿಂದಿದೆ ಒಂದು ದೊಡ್ಡ ಕಥೆ, ಅದು ನೀವು ಓದಲೇಬೇಕು!

ದುರಂತ ಘಟನೆ ನಡೆದಿದ್ದು ಮತ್ತೆಲ್ಲೂ ಅಲ್ಲ, ಬದಲಿಗೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ. ಇಲ್ಲಿನ ಕಿಚಾರಾ ಗ್ರಾಮದಲ್ಲಿ ಕಳ್ಳನೋರ್ವ ಕಗ್ಗತ್ತಲ್ಲಲ್ಲಿ ಮನೆಯೊಂದಕ್ಕೆ ನುಗ್ಗಿದ್ದ. ತನಗೆ ಬೇಕಾಗಿದ್ದನ್ನೆಲ್ಲಾ ದೋಚ್ಕೊಂಡು ಮನೆಯ ಟೆರೇಸ್ ಮೇಲೆ ಹತ್ತಿ ಪರಾರಿಯಾಗಲು ಮುಂದಾಗಿದ್ದ.

ಇನ್ನು, ಈ ವೇಳೆ ಮನೆಯ ಟೆರೇಸ್​ ಮೇಲೆ ಹಾದು ಹೋಗಿದ್ದ ಕರೆಂಟ್ ವೈರ್ ಕಳ್ಳನಿಗೆ ತಗಲಿದೆ. ಕತ್ತಲಿದ್ದ ಕಾರಣ ವಿದ್ಯುತ್ ತಂತಿ, ಪಾಪ ಆ ಕಳ್ಳನಿಗೆ ಕಂಡಿಲ್ಲ. ಹೀಗಾಗಿ ಕರೆಂಟ್ ಶಾಕ್ ಹೊಡೆದು ಆತ ಮೃತಪಟ್ಟಿದ್ದಾನೆ.

ಬೆಳಗ್ಗೆ ಎದ್ದಾಗ ಮನೆಯವರಿಗೆ ಕಳ್ಳನ ಸಾವಿನ ಬಗ್ಗೆ ಮಾಹಿತಿ ಗೊತ್ತಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಆತನ ಜೇಬಿನಿಂದ ಮೊಬೈಲ್​ಗಳು ಸೇರಿದಂತೆ ಕದ್ದಿದ್ದ ಇತರ ವಸ್ತುಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಳ್ಳತನ ಮಾಡಲು ಮನೆಗೆ ನುಗ್ಗಿದ ಕಳ್ಳ; ಕೊನೆಗೂ ಬೀದಿ ಹೆಣವಾದ; ಕಾರಣವೇನು?

https://newsfirstlive.com/wp-content/uploads/2023/09/Kalla.jpg

Load More