Advertisment

ಒಂದು ಕ್ವಾರ್ಟರ್ ಎಣ್ಣೆಗಾಗಿ ಬೈಕ್ ಕಳ್ಳತನ; ಕಿಲಾಡಿ ಕುಡುಕನ ಖತರ್ನಾಕ್ ಕೆಲಸಕ್ಕೆ ದಂಗಾದ ಪೊಲೀಸರು!

author-image
Veena Gangani
Updated On
ಒಂದು ಕ್ವಾರ್ಟರ್ ಎಣ್ಣೆಗಾಗಿ ಬೈಕ್ ಕಳ್ಳತನ; ಕಿಲಾಡಿ ಕುಡುಕನ ಖತರ್ನಾಕ್ ಕೆಲಸಕ್ಕೆ ದಂಗಾದ ಪೊಲೀಸರು!
Advertisment
  • ಆರೋಪಿ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಟ್ಟು15 ಪ್ರಕರಣ
  • ಕೆಲ ತಿಂಗಳ ಹಿಂದೆಯಷ್ಟೇ ಪೊಲೀಸರ ಕೈಗೆ ಲಾಕ್ ಆಗಿ ಜೈಲು ಸೇರಿದ್ದ!
  • ಸದ್ಯ ಕುಡುಕ‌ ಲಕ್ಷ್ಮಣನನ್ನು ಲಾಕ್ ಮಾಡಿರುವ ಗಿರಿನಗರ ಪೊಲೀಸರು

ಬೆಂಗಳೂರು: ಒಂದೇ ಒಂದು ಕ್ವಾರ್ಟರ್‌ ಎಣ್ಣೆಗಾಗಿ ಬೈಕ್ ಕದಿಯುತ್ತಿದ್ದ ಕುಡುಕ ಕಳ್ಳನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್ ಬಂಧಿತ ಆರೋಪಿ. ಲಕ್ಷ್ಮಣ್ ದಿನ ಮದ್ಯ ಸೇವಿಸಬೇಕೆಂದು‌ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ. ಒಂದು ಕ್ವಾರ್ಟರ್ ಎಣ್ಣೆಗಾಗಿ ಸಿಕ್ಕ, ಸಿಕ್ಕ ಬೈಕ್ ಅನ್ನು ಕಳ್ಳತನ ಮಾಡಿದ್ದ. ಮದ್ಯ ಸೇವಿಸಲು ಬೈಕ್ ಕದ್ದು ಬ್ಯಾಟರಿ ಮಾರುತ್ತಿದ್ದನಂತೆ ಈ ಆಸಾಮಿ.

Advertisment

publive-image

ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಅನ್ನು ಕಳ್ಳತನ ಮಾಡಿ ಮತ್ತೊಂದು ಠಾಣಾ ವ್ಯಾಪ್ತಿಯಲ್ಲಿ ಬೈಕ್ ಬಿಟ್ಟು ಹೋಗುತ್ತಿದ್ದನಂತೆ. ಬೈಕ್​ನ ಬ್ಯಾಟರಿ, ಟೈರ್ ತೆಗೆದುಕೊಂಡು ಬೈಕ್ ಅಲ್ಲೇ ಬಿಟ್ಟು ಪರಾರಿಯಾಗುತ್ತಿದ್ದ. ಕೆಲ ತಿಂಗಳ ಹಿಂದೆಯಷ್ಟೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲಿಗೂ ಹೇಗಿದ್ದ. ಮತ್ತೆ ಜೈಲಿಂದ ರೀಲಿಸ್ ಆಗಿ ಬೈಕ್ ಕಳ್ಳತನ ಮುಂದುವರೆಸಿದ್ದ.

publive-image

ಆರೋಪಿ ಲಕ್ಷ್ಮಣ್‌ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ಸದ್ಯ ಕುಡುಕ‌ ಕಳ್ಳ ಲಕ್ಷ್ಮಣ್‌ನನ್ನು ಮಾಡಿರುವ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 11.55 ಲಕ್ಷ ಬೆಲೆ ಬಾಳುವ 20 ದ್ವಿಚಕ್ರ ವಾಹನ ಸೀಜ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment