/newsfirstlive-kannada/media/post_attachments/wp-content/uploads/2023/11/bng-13.jpg)
ಬೆಂಗಳೂರು: ಒಂದೇ ಒಂದು ಕ್ವಾರ್ಟರ್ ಎಣ್ಣೆಗಾಗಿ ಬೈಕ್ ಕದಿಯುತ್ತಿದ್ದ ಕುಡುಕ ಕಳ್ಳನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್ ಬಂಧಿತ ಆರೋಪಿ. ಲಕ್ಷ್ಮಣ್ ದಿನ ಮದ್ಯ ಸೇವಿಸಬೇಕೆಂದು ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ. ಒಂದು ಕ್ವಾರ್ಟರ್ ಎಣ್ಣೆಗಾಗಿ ಸಿಕ್ಕ, ಸಿಕ್ಕ ಬೈಕ್ ಅನ್ನು ಕಳ್ಳತನ ಮಾಡಿದ್ದ. ಮದ್ಯ ಸೇವಿಸಲು ಬೈಕ್ ಕದ್ದು ಬ್ಯಾಟರಿ ಮಾರುತ್ತಿದ್ದನಂತೆ ಈ ಆಸಾಮಿ.
/newsfirstlive-kannada/media/post_attachments/wp-content/uploads/2023/11/bng-14.jpg)
ಒಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಅನ್ನು ಕಳ್ಳತನ ಮಾಡಿ ಮತ್ತೊಂದು ಠಾಣಾ ವ್ಯಾಪ್ತಿಯಲ್ಲಿ ಬೈಕ್ ಬಿಟ್ಟು ಹೋಗುತ್ತಿದ್ದನಂತೆ. ಬೈಕ್​ನ ಬ್ಯಾಟರಿ, ಟೈರ್ ತೆಗೆದುಕೊಂಡು ಬೈಕ್ ಅಲ್ಲೇ ಬಿಟ್ಟು ಪರಾರಿಯಾಗುತ್ತಿದ್ದ. ಕೆಲ ತಿಂಗಳ ಹಿಂದೆಯಷ್ಟೆ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲಿಗೂ ಹೇಗಿದ್ದ. ಮತ್ತೆ ಜೈಲಿಂದ ರೀಲಿಸ್ ಆಗಿ ಬೈಕ್ ಕಳ್ಳತನ ಮುಂದುವರೆಸಿದ್ದ.
/newsfirstlive-kannada/media/post_attachments/wp-content/uploads/2023/11/bng-15.jpg)
ಆರೋಪಿ ಲಕ್ಷ್ಮಣ್ ಮೇಲೆ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ಸದ್ಯ ಕುಡುಕ ಕಳ್ಳ ಲಕ್ಷ್ಮಣ್‌ನನ್ನು ಮಾಡಿರುವ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 11.55 ಲಕ್ಷ ಬೆಲೆ ಬಾಳುವ 20 ದ್ವಿಚಕ್ರ ವಾಹನ ಸೀಜ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us