newsfirstkannada.com

VIDEO: ಕದ್ದಿದ್ದ ಬೈಕ್​​ ಬಿಟ್ಟು, ಮಾರುತಿ 800 ಕಾರನ್ನು ಕದ್ದೊಯ್ದ ಖದೀಮ; ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

Share :

06-08-2023

    ಹಾಸನದಲ್ಲಿ ಭರ್ಜರಿ ಕೈ ಚಳಕ ತೋರಿಸಿದ ಕಳ್ಳರ ಗ್ಯಾಂಗ್

    ಬೈಕ್​​ ಅನ್ನ ಕದ್ದು, ಕಾರಿನಲ್ಲಿ ತಪ್ಪಿಸಿಕೊಂಡು ಹೋದ ಕಳ್ಳರು

    ಖತರ್ನಾಕ್ ಕಳ್ಳನ ಭಯಾನಕ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಹಾಸನ: ಖತರ್ನಾಕ್ ಕಳ್ಳನೊಬ್ಬ ಕದ್ದ ಬೈಕ್‌ ಅನ್ನು ಬಿಟ್ಟು ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಎಗರಿಸಿಕೊಂಡು ಹೋದ ಘಟನೆ ನಗರದ ವಾರ್ಡ್ ನಂಬರ್ 35 ಕೆ. ಹೊಸಕೊಪ್ಪಲಿಯಲ್ಲಿ ನಡೆದಿದೆ. ಕಾರು ಕಳ್ಳತನ ಮಾಡುತ್ತಿರೋ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಜುಲೈ 30ರಂದು ಮುಂಜಾನೆ 4 ಗಂಟೆಗೆ ಬೈಕ್‌ನಲ್ಲಿ ಬಂದಿದ್ದ ಕಳ್ಳನೊಬ್ಬ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕಳ್ಳತನ ಮಾಡಿದ್ದಾನೆ. ಅಭಿಷೇಕ್ ಎಂಬುವವರಿಗೆ ಸೇರಿದ ಮಾರುತಿ 800 ಕಾರನ್ನು ಕಳ್ಳತನ ಮಾಡಿದ್ದಾನೆ. ಮೊದಲಿಗೆ ಕಾರಿನ ಡೋರ್ ತೆಗೆದು ಸ್ಟಾರ್ಟ್ ಮಾಡಲು ಯತ್ನಿಸಿದ್ದಾನೆ.

ಆದರೆ ಅದು ಸಾಧ್ಯವಾಗದೇ ಇದ್ದಾಗ ಕಾರನ್ನು ಸ್ವಲ್ಪ ದೂರ ತಳ್ಳಿಕೊಂಡು ಹೋಗಿದ್ದಾನೆ. ನಂತರ ಕಾರು ಸ್ಟಾರ್ಟ್ ಆಗುತ್ತದೆ. ಲಾರು ಸ್ಟಾರ್ಟ್​ ಆಗುತ್ತಿದ್ದಂತೆ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಬೈಕ್‌ನಲ್ಲಿ ಬಂದಿದ್ದ ಖದೀಮನು ತಾನು ಮುಂಚೆ ಕಂದಿದ್ದ ಬೈಕ್ ಅನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಸದ್ಯ ಈ ಕುರಿತು ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕದ್ದಿದ್ದ ಬೈಕ್​​ ಬಿಟ್ಟು, ಮಾರುತಿ 800 ಕಾರನ್ನು ಕದ್ದೊಯ್ದ ಖದೀಮ; ಕಳ್ಳರ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/08/thift.jpg

Load More