newsfirstkannada.com

KGF ಗ್ಯಾಂಗ್ ಅರೆಸ್ಟ್​​​​.. ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕದೀತಿದ್ದ ಕಿರಾತಕರು..!

Share :

Published August 16, 2024 at 12:25pm

    ನ್ಯೂಸ್ ಪೇಪರ್ ಬಿದ್ದಿದ್ದ ಮನೆಯೇ ಈ ಖದೀಮರ ಟಾರ್ಗೆಟ್

    ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಗಳಲ್ಲಿದ್ದ ಚಿನ್ನಾಭರಣ ಕದ್ದಿದ್ದ ಗ್ಯಾಂಗ್

    ಒಂದೇ ಸಲ ಎಷ್ಟು ಮನೆಗಳಲ್ಲಿ ಕಳ್ಳತನ ಮಾಡಿದ್ರು ಗೊತ್ತಾ ಇವರು?

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದ ಕೆಜಿಎಫ್​ ಮೂಲದ ಗ್ಯಾಂಗ್ ಅನ್ನು ಮಹದೇವಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳಿಂದ ಲಕ್ಷ ಲಕ್ಷ ರೂಪಾಯಿಗಳ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ನೀರಜ್ ಚೋಪ್ರಾ, ಮನು ಭಾಕರ್ ಓದಿದ್ದು ಏನು.. ಡಿಗ್ರಿಯಾದರೂ ಮುಗಿಸಿದ್ದಾರಾ..?

ಕೋಲಾರದ ಕೆಜಿಎಫ್ ಮೂಲದ ಜ್ಞಾನಪ್ರಕಾಶ್, ಪ್ರೇಮ್ ಕುಮಾರ್, ಸಂತೋಷ್ ಹಾಗೂ ಶಿವಕುಮಾರ್ ಬಂಧಿತ ಆರೋಪಿಗಳು. ಈ ಖದೀಮರು ಮನೆ ಮುಂದೆ ಚಪ್ಪಲಿ ಇಲ್ಲದ, ಲೈಟ್​ ಆಫ್​ ಆದ ಹಾಗೂ ನ್ಯೂಸ್​ಪೇಪರ್​ ಬಿದ್ದಿರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮಹಾದೇವಪುರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಿರಾತಕ ಗ್ಯಾಂಗ್ ಕಳ್ಳತನ ಮಾಡಿತ್ತು. ಒಂದೇ ಬಾರಿಗೆ ಒಂದಲ್ಲ, ಎರಡಲ್ಲ, ಬರೋಬ್ಬರಿ 6 ಮನೆಗಳನ್ನು ಕಳ್ಳತನ ಮಾಡಿದ್ದರು. ಅದು ಬೇರೆ ವರಮಹಾಲಕ್ಷ್ಮಿ ಹಬ್ಬಕ್ಕೆ ಎಂದು ಮಾಲೀಕರು ಮನೆಯಲ್ಲಿಟ್ಟಿದ್ದ ವರಮಹಾಲಕ್ಷ್ಮಿಯ ಬೆಳ್ಳಿ ಮುಖವಾಡ, ಚಿನ್ನಾಭರಣಗಳನ್ನು ಕದ್ದಿದ್ದರು.

ಇದನ್ನೂ ಓದಿ: ದರ್ಶನ್​ ಗ್ಯಾಂಗ್​ ಪ್ರಕರಣದ ಮತ್ತೊಂದು ಮಹತ್ವದ ವರದಿ ಬಯಲು.. ಕಾರಿನಲ್ಲಿ ನಡೆದಿದ್ದು ಏನು?

ಪೊಲೀಸರು ಒಟ್ಟು 75 ಲಕ್ಷ ರೂಪಾಯಿ ಮೌಲ್ಯದ 840 ಗ್ರಾಂ ಚಿನ್ನ, ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ವಶಕ್ಕೆ ಪಡೆದುಕೊಂಡ ಚಿನ್ನಾಭರಣಗಳನ್ನು ಹಬ್ಬದ ದಿನದಂದೇ ಮಾಲೀಕರಿಗೆ ತಲುಪಿಸಿದ್ದಾರೆ. ಆರೋಪಿಗಳ ಬಂಧನದಿಂದ 18 ಮನೆಗಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿದ್ದು ಪೊಲೀಸರು ಶಾಕ್ ಆಗಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

KGF ಗ್ಯಾಂಗ್ ಅರೆಸ್ಟ್​​​​.. ವರಮಹಾಲಕ್ಷ್ಮಿ ಹಬ್ಬಕ್ಕೆ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕದೀತಿದ್ದ ಕಿರಾತಕರು..!

https://newsfirstlive.com/wp-content/uploads/2024/08/MAHADEVAPUR_POLICE.jpg

Load More