newsfirstkannada.com

ದೇವರ ಹುಂಡಿಗೆ ಕನ್ನ ಹಾಕಿದ ಮೇಲೆ ಬಂತು ಹನುಮ ಭಕ್ತಿ; 5000 ಕದ್ದು, 10 ರೂ. ಕಾಣಿಕೆ ಇಟ್ಟು ಹೋದ ಖದೀಮ

Share :

12-07-2023

    ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಡಬ್ಬಿ ಒಡೆದ ಖತರ್ನಾಕ್​ ಕಳ್ಳ

    ಹಣ ಕದ್ದ ಬಳಿಕ ಕಳ್ಳನಿಂದ ಹನುಮಾನ್​ ಚಾಲೀಸ್ ಪಠಣ

    5 ಸಾವಿರ ಕದ್ದು, 10 ರೂಪಾಯಿ ಕಾಣಿಕೆ ಹಾಕಿದ ಖದೀಮ

ಆನೆ ಕದ್ದರು ಕಳ್ಳ, ಅಡಿಕೆ ಕದ್ದರು ಕಳ್ಳ. ಆದರೆ ಇಲ್ಲೊಬ್ಬ ಕಳ್ಳ ದೇವರ ಹುಂಡಿ ಒಡೆದು ಅದರಲ್ಲಿದ್ದ ಹಣವನ್ನೇ ಎಗರಿಸಿದ್ದಾನೆ. ಆದರೆ ಕದ್ದ ಬಳಿಕ ಈತನ ಕಳ್ಳ ಭಕ್ತಿಗೆ ದೇವರೇ ಬೆಚ್ಚಿಬೀಳುವಂತೆ ಮಾಡಿದ್ದಾನೆ. ಅಷ್ಟಕ್ಕೂ ಕಳ್ಳ ಏನು ಮಾಡಿದ್ದಾನೆ ಗೊತ್ತಾ? ಈ ಸ್ಟೋರಿ ಓದಿ.

ಅಂದಹಾಗೆಯೇ ಹರಿಯಾಣದ ರೇವಾರಿಯ ಜಿಲ್ಲೆಯ ಧಾರುಹೆರಾ ಪಟ್ಟಣದಲ್ಲಿ ಕಂಡು ಬಂದ ದೃಶ್ಯ ಇದಾಗಿದೆ. ಕಳ್ಳನೊಬ್ಬ ಹನಮಾನ್​ ದೇವಸ್ಥಾನಕ್ಕೆ ನುಗ್ಗಿದ್ದಾನೆ. ಅಲ್ಲಿದ್ದ ಕಾಣಿಗೆ ಡಬ್ಬಿಯ ಬೀಗವನ್ನು ಒಡೆದು ಹಣ ಎಗರಿಸಿದ್ದಾನೆ. ಆದರೆ ಆ ಕಳ್ಳನಿಗೆ ಕದ್ದ ಬಳಿಕ ಅದೇನು ಭಕ್ತಿ ಬಂತೋ ಗೊತ್ತಿಲ್ಲ. ದೇವರ ಪಾದದ ಮೇಲೆ 10 ರೂಪಾಯಿ ಇಟ್ಟು ಹನುಮಾನ್​ ಚಾಲೀಸಾ ಪಠಣ ಮಾಡಿ ಭಕ್ತಿ ಮೆರೆದಿದ್ದಾನೆ. ಕಳ್ಳನ ಕೈಚಳಕದ ಪೂರ್ತಿ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಳ್ಳ ಕಾಣಿಕೆ ಹುಂಡಿ ಒಡೆದು 5 ಸಾವಿರ ರೂಪಾಯಿ ಕದ್ದಿದ್ದಾನೆ. ಆದರೆ ಹನುಮನ ಮೇಲೆ ಭಕ್ತಿ ಮೂಡಿ ಮೂರ್ತಿಯ ಪಾದದ ಮೇಲೆ 10 ರೂಪಾಯಿ ಇಟ್ಟು ಪರಾರಿಯಾದ್ದಾನೆ.

ಇನ್ನು ಅರ್ಚಕ ಮಾತ್ರ ದೇವಸ್ಥಾನದ ಬಾಗಿಲನ್ನು ಸರಿಯಾಗಿ ಮುಚ್ಚಿ ಮನೆಗೆ ತೆರಳಿದ್ದರು. ಆದರೆ ಮರುದಿನ ಬೆಳಗ್ಗೆ ಬಂದಾಗ ಕಾಣಿಕೆ ಡಬ್ಬಿಯ ಬೀಗ ಮುರಿದು ಕಳ್ಳತನವಾಗಿರೋದು ಗೊತ್ತಾಗಿದೆ. ಕೊನೆಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯ ಪರಿಶೀಲಿಸಿ ಕಳ್ಳನನ್ನು ಹುಡುಕಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇವರ ಹುಂಡಿಗೆ ಕನ್ನ ಹಾಕಿದ ಮೇಲೆ ಬಂತು ಹನುಮ ಭಕ್ತಿ; 5000 ಕದ್ದು, 10 ರೂ. ಕಾಣಿಕೆ ಇಟ್ಟು ಹೋದ ಖದೀಮ

https://newsfirstlive.com/wp-content/uploads/2023/07/Theft-Hanuma-Bakti.jpg

Load More