newsfirstkannada.com

Video: ಸಬ್ ​​ಇನ್ಸ್​​ಸ್ಪೆಕ್ಟರ್​​ನ ರಿವಾಲ್ವರ್​ ಕದ್ದು ಮರಕೋತಿಯಾಡಿದ ಕಳ್ಳ ಕೊನೆಗೂ ಅರೆಸ್ಟ್​!

Share :

17-07-2023

    ಬಂಧಿಸಲು ಬಂದಿದ್ದ PSIನ ರಿವಾಲ್ವರ್​ ಕದ್ದ ಕಳ್ಳ

    ಸರ್ವಿಸ್​ ರಿವಾಲ್ವರ್​ ಕದ್ದು ಬೃಹತ್​ ಮರವೇರಿ ಕುಳಿತ್ತಿದ್ದ

    ಖಾಜಪ್ಪನ ಮರಕೋತಿ ಆಟಕ್ಕೆ ಪೊಲೀಸರು ಸುತ್ತು, ಕೊನೆಗೂ ಅರೆಸ್ಟ್​

ಕಲಬುರಗಿ: ಬಂಧಿಸಲು ಬಂದಿದ್ದ ಪಿಎಸ್​ಐನ ರಿವಾಲ್ವರ್​ ಕದ್ದು ಕಳ್ಳ ಮರವೇರಿ ಕುಳಿತ ಘಟನೆ ಅಫಜಲಪುರದಲ್ಲಿ ಬೆಳಕಿಗೆ ಬಂದಿದೆ.

ಅಂತರ ರಾಜ್ಯ ಕುಖ್ಯಾತ ಕಳ್ಳ ಖಾಜಪ್ಪ ಗಾಯಕವಾಡನನ್ನು ಪಿಎಸ್ಐ ಭೀಮರಾಯ್ ಬಂಕಲಿ ಬಂಧಿಸಲು ಬಂದಿದ್ದರು. ಆದರೆ ಈ ವೇಳೆ ಕಳ್ಳ ಅವರ ಸರ್ವಿಸ್ ರಿವಾಲ್ವರ್ ಕಸಿದು ಪರಾರಿಯಾಗಿದ್ದ. ಪರಾರಿಯಾಗಿದ್ದ ಕಳ್ಳ ಮರವೇರಿ ಕುಳಿತಿದ್ದನು.

ಪಿಎಸ್ಐ ಭೀಮರಾಯ್ ಬಂಕಲಿ- ಕಳ್ಳ ಖಾಜಪ್ಪ
ಪಿಎಸ್ಐ ಭೀಮರಾಯ್ ಬಂಕಲಿ- ಕಳ್ಳ ಖಾಜಪ್ಪ

ಖಾಜಪ್ಪ ಗಾಯಕವಾಡ ಬಳೂರ್ಗಿ ಮೂಲದವನಾಗಿದ್ದು, ಈತನ ಮೇಲೆ ಬೆಂಗಳೂರು, ಕಲಬುರಗಿ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿತ್ತು. ಇಂದು ಬೆಳಗ್ಗೆ ಬಂಧಿಸಲು ಬಂದ ಪಿಎಸ್​ಐನ ರಿವಾಲ್ವರನ್ನೇ ಕಸಿದು ಕಾಲ್ಕಿತ್ತಿದ್ದಮು. ಬಳಿಕ ಬಳೂರ್ಗಿ ಗ್ರಾಮದ ಮರವೊಂದನ್ನು ಏರಿ ಕುಳಿತ್ತಿದ್ದನು.

ಖಾಜಪ್ಪ ಅಫಜಲಪುರದಿಂದ ಸುಮಾರು 6 ಕಿ. ಮೀಟರ್ ದೂರದಲ್ಲಿ ಇರುವ ಮರ ಏರಿ ಕುಳಿತಿದ್ದನು. ಈತನನನ್ನು ಮರದಿಂದ ಕೆಳಗಿಳಿಸಲು ಎಸ್ಪಿ ಇಶಾ ಪಂತ್ ಸೇರಿ ಹಲವು ಪೊಲೀಸರು ಮುಖಾಂ ಹೂಡಿದ್ದರು. ಕೊನೆಗೂ ಸರ್ಕಸ್​ ಮಾಡಿ ಕಳ್ಳನನ್ನು ಮರದಿಂದ ಕೆಳಗಿಳಿಸಿ ಬಂಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಸಬ್ ​​ಇನ್ಸ್​​ಸ್ಪೆಕ್ಟರ್​​ನ ರಿವಾಲ್ವರ್​ ಕದ್ದು ಮರಕೋತಿಯಾಡಿದ ಕಳ್ಳ ಕೊನೆಗೂ ಅರೆಸ್ಟ್​!

https://newsfirstlive.com/wp-content/uploads/2023/07/Khajappa-Arrest.jpg

Load More