newsfirstkannada.com

ಒಂದು ಸಿಗರೇಟ್ ನೀಡಿದ ಕ್ಲೂ..! ಕಿಲಾಡಿ ಕಳ್ಳನ ಜನ್ಮ ಜಾಲಾಡಿದ ಕಥೆಯೇ ರೋಚಕ..!

Share :

15-06-2023

    ಕಳ್ಳನ ಬಂಧಿಸಿ ವಿಚಾರಿಸಿದಾಗ ಪೊಲೀಸರೇ ಶಾಕ್

    ಲಕ್ಷ ಲಕ್ಷ ಹಣ ವಶಕ್ಕೆ ಪಡೆದ ಪೊಲೀಸರು.. ಏನೆಲ್ಲಾ ಸಿಕ್ಕಿವೆ?

    ಪೊಲೀಸರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ SP

‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ‌. ಆದರೆ ಇಲ್ಲೊಬ್ಬ ಖದೀಮ, ಸಿಗರೇಟ್ ಮೂಲಕವೇ ಖೆಡ್ಡಾಕ್ಕೆ ಬಿದ್ದಿದ್ದು, ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಆರೋಪಿ ಹಿನ್ನೆಲೆ

ಹೌದು, ಬೀದರ್ ತಾಲೂಕಿನ ಔರಾದ್ (ಎಸ್) ಗ್ರಾಮದಲ್ಲಿ ಮನೆ ಕಳ್ಳತನ‌ ಮಾಡಿ ಪರಾರಿಯಾಗಿದ್ದ ಖದೀಮನೊಬ್ಬ ಇದೀಗ ಸಿಗರೇಟ್ ಮೂಲಕವೇ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮೇ 4 ರಂದು ತಾರೀಖು ಜಗದೇವಿ ಚಿನಕೇರಿ ಎಂಬುವವರ ಮನೆಯಲ್ಲಿದ್ದ 6.65 ಲಕ್ಷ ಮೌಲ್ಯದ ಬಂಗಾರ, 60 ಸಾವಿರ ಮೌಲ್ಯದ ಬೆಳ್ಳಿ ಹಾಗೂ 3.04 ಲಕ್ಷ ನಗದು ದೋಚಿ ಪರಾರಿಯಾಗಿದ್ದ.

ಈ ಹಿಂದೆ ದೋಚಿದ ಹಣದಲ್ಲಿ ಒಂದೆರಡು ಸಿಗರೇಟ್ ತೆಗೆದುಕೊಳ್ಳುತ್ತಿದ್ದ ವ್ಯಕ್ತಿ, ಏಕಾಏಕಿ‌ ಪ್ಯಾಕ್‌ಗಟ್ಟಲೇ ಸಿಗರೇಟ್ ತೆಗೆದುಕೊಳ್ಳುತ್ತಿದ್ದನ್ನು ಗಮನಿಸಿ ಅಂಗಡಿಯವ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಸಿಗರೇಟ್ ಜಾಡು‌ ಹಿಡಿದು ತನಿಖೆ ನಡೆಸಿದ ಪೊಲೀಸರು ಅದೇ ಗ್ರಾಮದ ಸಂಶಯಾಸ್ಪದ ಆರೋಪಿತನನ್ನು ವಿಚಾರಿಸಿದಾಗ ಸತ್ಯ ಬಯಲಾಗಿದೆ.

ಇದೀಗ ಬಂಧಿತ ಆರೋಪಿತನಿಂದ 9.22 ಲಕ್ಷ ಮೌಲ್ಯದ ಆಭರಣ ಹಾಗೂ‌ ನಗದು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪ್ರಕರಣ ಬೇಧಿಸಿದ ಬಗದಲ್ ಠಾಣೆ ಪೊಲೀಸರಿಗೆ ಜಿಲ್ಲಾ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಶ್ಲಾಘಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದು ಸಿಗರೇಟ್ ನೀಡಿದ ಕ್ಲೂ..! ಕಿಲಾಡಿ ಕಳ್ಳನ ಜನ್ಮ ಜಾಲಾಡಿದ ಕಥೆಯೇ ರೋಚಕ..!

https://newsfirstlive.com/wp-content/uploads/2023/06/CIGAR.jpg

Load More