ದರೋಡೆ ಮಾಡಲು ಒಳ್ಳೆ ಮುಹೂರ್ತ ಇಟ್ಟ ಜ್ಯೋತಿಷಿಗೆ ಸಿಕ್ಕಿದ್ದೇನು?
ಹುಷಾರ್ ಕಳ್ಳರು, ಖದೀಮರಿಗೆ ಜ್ಯೋತಿಷ್ಯ ಹೇಳಿದ್ರೆ ಅರೆಸ್ಟ್ ಆಗ್ತೀರಾ!
ಶುಭ ಮುಹೂರ್ತದಲ್ಲಿ ದರೋಡೆ ಮಾಡಿದ ಕಳ್ಳರು ದೋಚಿದ್ದು ಏನೇನು?
ಮುಂಬೈ: ಶುಭ ಮುಹೂರ್ತದಲ್ಲಿ ಕಳ್ಳತನ ಮಾಡಲು ಜ್ಯೋತಿಷ್ಯ ಕೇಳಿ 95 ಲಕ್ಷ ನಗದು, 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಘಟನೆಯು ಪುಣೆಯ ಬಾರಾಮತಿಯಲ್ಲಿ ಏಪ್ರಿಲ್ 24 ರಂದು ನಡೆದಿತ್ತು. ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಓರ್ವ ಜ್ಯೋತಿಷಿ ಹಾಗೂ ಐವರು ಖದೀಮರನ್ನು ಅರೆಸ್ಟ್ ಮಾಡಿದ್ದಾರೆ.
ಜ್ಯೋತಿಷಿ ರಾಮಚಂದ್ರ ಚಾವಾ ಹಾಗೂ ಇವರ ಬಳಿ ಭವಿಷ್ಯ ಕೇಳಿ ಕಳ್ಳತನ ಮಾಡಿದ್ದ ಆರೋಪಿಗಳಾದ ಸಚಿನ್ ಜಗ್ಧಾನೆ, ರಯ್ಬಾ ಚವಾಣ್, ರವೀಂದ್ರ ಭೋಸ್ಲೆ, ದುರ್ಯೋಧನ ಅಲಿಯಾಸ್ ದೀಪಕ್ ಜಾಧವ್ ಮತ್ತು ನಿತಿನ್ ಮೋರ್ನನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲದೇ ಆರೋಪಿಗಳು ಕದ್ದಿದ್ದ ಹಣದಲ್ಲಿ 76 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐವರು ಆರೋಪಿಗಳು ಜ್ಯೋತಿಷಿ ಬಳಿ ಭವಿಷ್ಯ ಕೇಳಿದ ಬಳಿಕ ಬಾರಾಮತಿಯಲ್ಲಿನ ಸಾಗರ್ ಗೋಫನೆ ಎಂಬುವರ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆ ಮಾಲೀಕ ಸಾಗರ್, ಟೌನ್ಗೆ ಹೋಗಿದ್ದರು. ಆಗ ಮನೆಯಲ್ಲಿದ್ದ ಸಾಗರ್ ಪತ್ನಿಯ ಬಾಯಿ ಮುಚ್ಚಿ ನಂತರ ಕಟ್ಟಿ ಹಾಕಿ ಮಕ್ಕಳ ಮುಂದೆ ಮನಬಂದಂತೆ ಥಳಿಸಿದ್ದಾರೆ. ಮನೆಯಲ್ಲಿದ್ದ 95 ಲಕ್ಷ ನಗದು, 11 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡು ಜ್ಯೋತಿಷಿ ಸೇರಿ ಉಳಿದ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ