newsfirstkannada.com

ದಾಳಿಂಬೆಗೆ ಚಿನ್ನದ ಬೆಲೆ.. ತೋಟಕ್ಕೆ ನುಗ್ಗಿ 5 ಲಕ್ಷ ರೂಪಾಯಿ ಮೌಲ್ಯದ ದಾಳಿಂಬೆ ಕದ್ದ ಕಳ್ಳರು

Share :

16-09-2023

  ಒಂದು ಕೆಜಿ ದಾಳಿಂಬೆಗೆ 200 ರೂಪಾಯಿ ಬೆಲೆ ಇದೆ

  ರಾತ್ರೋರಾತ್ರಿ ತೋಟಕ್ಕೆ ನುಗ್ಗಿ 5-6 ಟನ್‌ಗಳಷ್ಟು ದಾಳಿಂಬೆ ಕಳ್ಳತನ

  ಕರೆಂಟ್ ಇಲ್ಲದ ಸಮಯ ತೋಟಕ್ಕೆ ನುಗ್ಗಿ ದಾಳಿಂಬೆ ಕದ್ದ ಕಳ್ಳರು

ಗುಣಮಟ್ಟದ ಕೆಜಿ ದಾಳಿಂಬೆಗೆ 200 ರೂಪಾಯಿ ಚಿನ್ನದ ಬೆಲೆಯಿದೆ. ಇದರಿಂದ ಕಳ್ಳರ ಕಣ್ಣು ರೈತರ ದಾಳಿಂಬೆ ತೋಟದ ಮೇಲೆ ಬಿದ್ದಿದೆ. ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎನ್ನುವ ಹಾಗೆ ವರ್ಷವಿಡೀ ಬೆಳೆದಿದ್ದ ದಾಳಿಂಬೆಯನ್ನು ಕಳ್ಳರು ರಾತ್ರೋರಾತ್ರಿ ಕಳ್ಳತನ ಮಾಡುವುದರ ಮೂಲಕ ರೈತನನ್ನು ಸಂಕಷ್ಟಕ್ಕೆ ದೂಡಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆ ಟೊಮಟೋಗೆ ಚಿನ್ನದ ಬೆಲೆ ಬಂದಿತ್ತು. ಆಗ ಕಳ್ಳರು ಟೊಮಟೋ ಕದ್ದು ವಿಕೃತಿ ಮೆರೆದಿದ್ದರು. ಈಗ ಟೊಮಟೋ ನಂತರ ರೈತರು ಬೆಳೆದ ದಾಳಿಂಬೆಗೆ ಚಿನ್ನದ ಬೆಲೆ ಬಂದಿದೆ. ಕೆಜಿ ದಾಳಿಂಬೆಗೆ 200 ರೂಪಾಯಿ ಬೆಲೆ ಇದೆ. ಇನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವರ ಗ್ರಾಮದ ರೈತ ಚನ್ನಕೇಶವ 3 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಗುಣಮಟ್ಟದ ದಾಳಿಂಬೆ ಬೆಳೆದಿದ್ದಾನೆ. ಇನ್ನೇನು ದಾಳಿಂಬೆ ಕಟಾವು ಮಾಡಿ, ಮಾರುಕಟ್ಟೆಗೆ ಸಾಗಿಸಬೇಕಿತ್ತು ಅಷ್ಟರಲ್ಲಿ ಕಳ್ಳರ ದುಷ್ಟ ಕಣ್ಣು ರೈತನ ದಾಳಿಂಬೆ ಮೇಲೆ ಬಿದ್ದಿದೆ. ರಾತ್ರೋರಾತ್ರಿ ತೋಟಕ್ಕೆ ನುಗ್ಗಿ 5-6 ಟನ್‌ಗಳಷ್ಟು ದಾಳಿಂಬೆ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.

ಈಗಾಗಲೇ ರೈತರ ದಾಳಿಂಬೆ ತೋಟಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ರೈತ ಚನ್ನಕೇಶವ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ತೋಟದ ಸುತ್ತಲೂ ವಿದ್ಯುತ್ ತಂತಿ ಬೇಲಿ ಹಾಕಿದ್ದಾರೆ. ಜೊತೆಗೆ ತೋಟದ ಸುತ್ತಲೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಕಣ್ಗಾವಲಿಟ್ಟಿದ್ದಾನೆ. ಕರೆಂಟ್ ಇಲ್ಲದ ಸಮಯ ನೋಡಿಕೊಂಡು ಕಳ್ಳರು ತೋಟಕ್ಕೆ ನುಗ್ಗಿ ಕಟಾವಿಗೆ ಬಂದಿದ್ದ ದಾಳಿಂಬೆಯನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ರೀತಿಯಾದರೆ ರೈತರು ಬದುಕುವುದಾದರೂ ಹೇಗೆ ಅಂತ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ಇನ್ನು ದಾಳಿಂಬೆಗೆ ಚಿನ್ನದ ಬೆಲೆ ಇರುವ ಕಾರಣ ಚಿಕ್ಕಬಳ್ಳಾಪುರ ತಾಲ್ಲೂಕಿನ ಅಜ್ಜವರ, ನಂದಿ ಕ್ರಾಸ್, ಚದಲಪುರ, ಪಟ್ರೇನಹಳ್ಳಿ, ನಾಯನಹಳ್ಳಿ ಸೇರಿದಂತೆ ತಾಲ್ಲೂಕಿನ ವಿವಿಧಡೆ ಕಳ್ಳತನಗಳು ನಡೆದಿವೆ. ಇನ್ನು ರೈತರು ಪೊಲೀಸ್ ಠಾಣೆಗೆ ದೂರು ನೀಡಿದರೆ, ತೋಟಕ್ಕೆ ಕಾವಲು ಕಾಯಬೇಕೆನ್ನುವ ಉಚಿತ ಸಲಹೆ ನೀಡಿದ್ದಾರಂತೆ. ಆದರೂ ಪಟ್ಟುಬಿಡದ ಅಜ್ಜವಾರದ ರೈತ ಚನ್ನಕೇಶವ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದಾಳಿಂಬೆಗೆ ಚಿನ್ನದ ಬೆಲೆ.. ತೋಟಕ್ಕೆ ನುಗ್ಗಿ 5 ಲಕ್ಷ ರೂಪಾಯಿ ಮೌಲ್ಯದ ದಾಳಿಂಬೆ ಕದ್ದ ಕಳ್ಳರು

https://newsfirstlive.com/wp-content/uploads/2023/09/Pomegranate.jpg

Load More