newsfirstkannada.com

ಬರೋಬ್ಬರಿ 6000 KG ತೂಕದ ಕಬ್ಬಿಣ ಸೇತುವೆ ಹೊತ್ತೊಯ್ದ ಕಳ್ಳರು; ನಾಲ್ವರು ಅರೆಸ್ಟ್​

Share :

09-07-2023

    ಕಬ್ಬಿಣದ ಸೇತುವೆ ಮೇಲೆ ಕಣ್ಣಿಟ್ಟಿದ್ದ ಖತರ್ನಾಕ್​​ ಕಳ್ಳರು

    ಬರೋಬ್ಬರಿ 6 ಸಾವಿರ ಕೆ.ಜಿ ತೂಕದ ಸೇತುವೆ ಕದ್ದು ಜೂಟ್​

    ಕಳ್ಳರ ಜಾಲ ಭೇದಿಸಲು ಪೊಲೀಸರ ಉಪಾಯ ಏನು ಗೊತ್ತಾ?

ಮುಂಬೈ: ಕಳೆದ ತಿಂಗಳು ಬರೋಬ್ಬರಿ 6 ಸಾವಿರ ಕೆ.ಜಿ ತೂಕದ ಕಬ್ಬಿಣ ಸೇತುವೆಯನ್ನು ಕಳ್ಳರು ಕದ್ದೊಯ್ದಿದ್ದರು. ಆದರೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಮಲಾಡ್​ ಸಮೀಪ ಅದಾನಿ ಎಲೆಕ್ಟ್ರಿಸಿಟಿ ಎಂಬ ಕಂಪನಿ ಕೇಬಲ್​ ಸಾಗಾಣಿಕೆಗಾಗಿ ತಾತ್ಕಾಲಿಕವಾಗಿ ಕಬ್ಬಿಣ ಸೇತುವೆಯನ್ನು ನಿರ್ಮಾಣ ಮಾಡಿತ್ತು. ಆದರೆ ಈ ಸೇತುವೆಯನ್ನೇ ಕಳ್ಳರು ಎಗರಿಸಿದ್ದರು.

ಕಳ್ಳರ ಕೈ ಚಳಕ

ಅಂದಹಾಗೆಯೇ ಈ ಜಾಗದಲ್ಲಿ ಖಾಯಂ ಸೇತುವೆ ನಿರ್ಮಾಣ ಮಾಡುವ ಉದ್ದೇಶದಿಂದ ತಾತ್ಕಾಲಿಕವಾಗಿ ಕಬ್ಬಿಣ ಸೇತುವೆಯನ್ನು ತೆಗೆದು ಪಕ್ಕಕ್ಕೆ ಇಡಲಾಗಿತ್ತು. ಆದರೆ ಇದನ್ನು ಗಮನಿಸಿದ ಕಳ್ಳರು ಕೈ ಚಳಕ​ ತೋರಿಸಿದ್ದಾರೆ.

ಕಳ್ಳರು ಸಿಕ್ಕಿದ್ರು, ಕದ್ದ ಸೇತುವೆಯೂ ಸಿಕ್ತು

ಕಳ್ಳರು ಸೇತುವೆ ಕದ್ದ ಘಟನೆ ಕಂಪನಿಗೆ ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಲಾಗಿದೆ. ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಲವು ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ಕಳ್ಳ ಸಾಗಾಣಿಕೆಗೆ ಬಳಸುತ್ತಿದ್ದ ವಾಹನ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಈ ಮೂಲಕ ನಾಲ್ವರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕದ್ದ ಸೇತುವೆಯನ್ನು ಪತ್ತೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 6000 KG ತೂಕದ ಕಬ್ಬಿಣ ಸೇತುವೆ ಹೊತ್ತೊಯ್ದ ಕಳ್ಳರು; ನಾಲ್ವರು ಅರೆಸ್ಟ್​

https://newsfirstlive.com/wp-content/uploads/2023/07/Bridge.jpg

Load More