/newsfirstlive-kannada/media/post_attachments/wp-content/uploads/2024/11/MND-GOLD-THEFT.jpg)
ಕದ್ದ ಚಿನ್ನಾಭರಣಗಳನ್ನು ಕಳ್ಳರು ವಾಪಸ್ ಕದ್ದ ಮನೆಯಲ್ಲಿಯೇ ವಾಪಸ್ ಇಟ್ಟು ಹೋದ ಘಟನೆ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಿದ್ದೇಗೌಡ ಎಂಬುವವರ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯ ಹೆಂಚುಗಳನ್ನು ತೆಗೆದು ಒಳನುಗ್ಗಿದ್ದ ಕಳ್ಳರು ಬೀರುವನ್ನು ಒಡೆದು ಕಳ್ಳತನ ಮಾಡಿದ್ದರು
75 ಗ್ರಾಂನಷ್ಟು ಚಿನ್ನಾಭರಣ ಕದ್ದಿದ್ದರು ಕಳ್ಳರು. 50 ಗ್ರಾಂ ಚಿನ್ನದ ಸರ, 10 ಗ್ರಾಂ ಚೈನ್, 15 ಗ್ರಾಂನ ಮೂರು ಜೊತೆ ಓಲೆಗಳನ್ನು ಕದ್ದಿದ್ದರು. ಸಿದ್ದೇಗೌಡರ ಕುಟುಂಬದ ಮನೆದೇವರ ಪೂಜೆಗೆ ಹೋಗಿದ್ದ ವೇಳೆ ಕಳ್ಳತನ ನಡೆಸಿದ್ದರು. ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ನೀಡಿದ ಎರಡು ದಿನಗಳ ನಂತರ ಕದ್ದ ಚಿನ್ನಾಭರಣಗಳನ್ನು ವಾಪಸ್ ಇಟ್ಟು ಹೋಗಿದ್ದಾರೆ ಕಳ್ಳರು.
/newsfirstlive-kannada/media/post_attachments/wp-content/uploads/2024/11/MND-GOLD-THEFT-1.jpg)
ಇದನ್ನೂ ಓದಿ:ಅಂದು ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿ, ಇಂದು ಭಿಕ್ಷುಕ.. ಬೆಂಗಳೂರಲ್ಲಿ ಒಂದು ಕರುಣಾಜನಕ ಸ್ಟೋರಿ! Video
ಮನೆಯ ಮುಂಭಾಗದ ಜಗಲಿಯ ಮೇಲೆ ಚಿನ್ನಾಭರಣಗಳನ್ನು ಇಟ್ಟು ಹೋಗಿದ್ದಾರೆ. ಕದ್ದಂತಹ ಚಿನ್ನ ವಾಪಸ್ ಸಿಕ್ಕಿದ್ದಕ್ಕೆ ಸಿದ್ದೇಗೌಡರ ಕುಟುಂಬ ನಿಟ್ಟುಸಿರು ಬಿಟ್ಟಿದೆ. ಪೊಲೀಸರಿಗೆ ದೂರು ನೀಡಿದ್ದು ಅರಿತ ಕಳ್ಳರು, ಪೊಲೀಸರಿಗೆ ಹೆದರಿ ವಾಪಸ್ ಇಟ್ಟುಹೋಗಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us