ಹುಂಡಿಯನ್ನ ಒಡೆಯಲು ಪ್ರಯತ್ನ ಪಟ್ಟ ಖತರ್ನಾಕ್ ಚೋರರು
ಕೀಲಿ ಮುರಿಯದ ಪರಿಣಾಮ ಹುಂಡಿಯನ್ನೇ ಹೊತ್ತೊಯ್ದ ಕಳ್ಳರು
ಖತರ್ನಾಕ್ ಕಳ್ಳರ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೀದರ್: ದೇವರಿಗೆ ಕೈ ಮುಗಿದು, ದೇವಸ್ಥಾನದಲ್ಲಿದ್ದ ಹುಂಡಿ ಹೊತ್ಯೊಯ್ದು ಕಳ್ಳತನ ಮಾಡಿದ ಘಟನೆ ಬೀದರ್‌ನಲ್ಲಿ ನಡೆದಿದೆ. ಚಿಟಗುಪ್ಪಾ ತಾಲೂಕಿನ ಉಡಬಾಳ ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಖದೀಮರು ತಮ್ಮ ಕೈಚಳಕ ತೋರಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮುಖಕ್ಕೆ ಟಾವೆಲ್ ಹಾಗೂ ಮಾಸ್ಕ್ ಹಾಕಿಕೊಂಡು ಬಂದ ಮೂವರು ಖದೀಮರು ದೇವರಿಗೆ ಕೈ ಮುಗಿದು, ಹುಂಡಿಯನ್ನ ಒಡೆಯಲು ಪ್ರಯತ್ನ ಪಟ್ಟಿದ್ದಾರೆ. ಕೀಲಿ ಮುರಿಯದ ಪರಿಣಾಮ ಹುಂಡಿಯನ್ನೆ ಹೊತ್ತುಕೊಂಡು ಹೋಗಿದ್ದಾರೆ. ನಾಲ್ಕು ಹುಂಡಿಗಳ ಪೈಕಿ ಎರಡಿ ಹುಂಡಿಗಳನ್ನ ಹೊತ್ಯೊಯ್ದಿದ್ದು, ಒಂದು ಹುಂಡಿಯನ್ನ ದೇವಸ್ಥಾನದಲ್ಲೆ ಕೀಲಿ ಮುರಿದು ಲೂಟಿ ಮಾಡಿದ್ದಾರೆ.
ಇನ್ನೆರಡು ಹುಂಡಿಗಳನ್ನ ದೇವಸ್ಥಾನದ ಆವರಣದ ಹೊರಗಡೆ ಬೀಸಾಡಿ ಹೋಗಿದ್ದಾರೆ. ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಬಲೆಗೆ ಪೊಲೀಸರು ಜಾಲ ಬೀಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ